ಮಹಿಳಾ ಟೆಕ್ಕಿಯನ್ನು ಚುಡಾಯಿಸಿದ ನಾಲ್ವರ ಬಂದನ

Police Arrest Four For Harassing Woman Techie | itskannada

0

Crime News : (itskannada) ಬೆಂಗಳೂರು : ಮಹಿಳಾ ಟೆಕ್ಕಿಯನ್ನು ಚುಡಾಯಿಸಿ ಕಿರುಕುಳ ನೀಡಿದ್ದ ನಾಲ್ವರು ಆರೋಪಿಗಳನ್ನು           ಜೀವನ್ ಭೀಮಾ ನಗರ ಪೊಲೀಸರು ಬಂಧಿಸಿದ್ದಾರೆ. ಮಹಿಳಾ ಟೆಕ್ಕಿಯನ್ನು ಚುಡಾಯಿಸಿದಷ್ಟೇ ಅಲ್ಲದೇ ಆಕೆಯ ಸಹೋದ್ಯೋಗಿಯನ್ನು ಹಲ್ಲೆ ಮಾಡಿರುವುದಾಗಿ ತಿಳಿದು ಬಂದಿದೆ. ಈ ಘಟನೆ ಘಟನೆ ಏಪ್ರಿಲ್ 13 ರಂದು ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿ ನಡೆದಿದ್ದು , ಕಿರುಕುಳ ನೀಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

ಮಹಿಳಾ ಟೆಕ್ಕಿಯನ್ನು ಚುಡಾಯಿಸಿದ ನಾಲ್ವರ ಬಂದನ

ಆರೋಪಿಗಳನ್ನು ಅಜಯ್ ಶ್ರೀನಿವಾಸ್, 26, ಮಹೇಶ್ ಗೋಪಾಲ್, 26, ಸಂತೋಷ್ ಗೌಡ, 24, ಮತ್ತು ನವೀನ್ ಸೀತಾರಾಮ್, 26, ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಅಂದು ಮಹೇಶ್ ಹುಟ್ಟುಹಬ್ಬವಾಗಿತ್ತು ಮತ್ತು ಮೊದಲ ಆರೋಪಿ ಅಜಯ್ ಸೇರಿದಂತೆ ಅವರ ಸ್ನೇಹಿತರು ಬಾರಿನಲ್ಲಿ ಕುಡಿದು ಹುಟ್ಟುಹಬ್ಬ ಆಚರಿಸಿದ್ದರು , ಮಹೇಶ್ ಹುಟ್ಟುಹಬ್ಬದ ಆಚರಣೆಗೆಂದು ಇನ್ನುಳಿದ ಮೂವರು ಆರೋಪಿಗಳು ಪಾಲ್ಗೊಂಡಿದ್ದರು.

ಅವರು ಊಟದ ನಂತರ ಬಾರ್ ಹೊರಗೆ ನಿಂತಿರುವಾಗ ಇಬ್ಬರು ಮಹಿಳೆಯರು ಮತ್ತು ಒಬ್ಬ ವ್ಯಕ್ತಿ ಅವರನ್ನು ಹಾದುಹೋದರು. ಈ ವೇಳೆ ಅಜಯ್ ಹಾಗೂ ಅವನ ಸ್ನೇಹಿತರು ಚುಡಾಯಿಸಿ ಕಿರುಕುಳ ನೀಡಿರುವುದಾಗಿ ತಿಳಿದು ಬಂದಿದೆ ..|| ಈ ವಿಭಾಗದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ – Karnataka Crime News .

You're currently offline