ಹಣಕ್ಕಾಗಿ ಅಕ್ಕನನ್ನೇ ಕೊಂದು, ತಮ್ಮ ಮಾಡಿದ್ದ ಹೈ ಡ್ರಾಮಾ

Own Brother killed her sister for money in Belgaum

0

ಹಣಕ್ಕಾಗಿ ಅಕ್ಕನನ್ನೇ ಕೊಂದು, ತಮ್ಮ ಮಾಡಿದ್ದ ಹೈ ಡ್ರಾಮಾ

ಬೆಳಗಾವಿ ಖಾನಾಪುರ ತಾಲೂಕಿನ ಗುಂಡೇನಟ್ಟಿ ಗ್ರಾಮದ  ಅಂಗನವಾಡಿ ಸಹಾಯಕಿ ಜಯಶ್ರೀ ಕಲ್ಲಪ್ಪ (35) ಅವರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಮೂಲಕ ಕೊಲೆಗಾರ ಆಕೆಯ ಸ್ವಂತ ತಮ್ಮನೇ ಎಂಬುದು ಬೆಳಕಿಗೆ ಬಂದಿದೆ.

ಈಗಾಗಲೇ ಕೊಲೆ ಆರೋಪಿ ಜಯಶ್ರೀ ತಮ್ಮ ರವಿ ಪ್ರಹ್ಲಾದ ಬಡಸಕರ (30) ಎಂಬಾತನನ್ನು ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.

ಕಳೆದ ತಿಂಗಳ ಡಿಸಂಬರ್ 23ರಂದು ಜಯಶ್ರೀ ಕೊಲೆ ನಡೆದಿತ್ತು. ಪೋಲೀಸರ ತನಿಖೆ ಹಾದಿ ತಪ್ಪಿಸಲು ಕೊಲೆಗಾರ ತಮ್ಮ ನಾನಾ ಉಪಾಯ ಮಾಡಿದ್ದ.

ಕೊಲೆಯ ಬಗ್ಗೆ ಸಂಶಯ ಬರಬಾರದೆಂದು ಮನೆಯಲ್ಲಿನ ಬೆಲೆಬಾಳುವ ನಗ-ನಾಣ್ಯಗಳಿಗಾಗಿ ಶೋಧಿಸಿ ಜಯಶ್ರೀ ಮೈಮೇಲಿದ್ದ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದ.

ತನಿಖೆ ನಡೆಸಿದ ಪೊಲೀಸರು ಸಹ ಮೊದಲು ಇದೊಂದು ಹಣಕ್ಕಾಗಿ ನಡೆದಿರಬಹುದಾದ ಕೊಲೆ ಎಂದು ಶಂಕಿಸಿದ್ದರು. ಆದರೆ,  ಜಯಶ್ರೀ ಗಂಡ, ನೆರೆಹೊರೆಯವರ ಮಾಹಿತಿಯಂತೆ ಜಯಶ್ರೀನ್ನು ಆಕೆಯ ತಮ್ಮ ರವಿ ಹಣಕ್ಕಾಗಿ ಪೀಡಿಸುತ್ತಿದ್ದ ವಿಷಯ ಬೆಳಕಿಗೆ ಬಂದಿದೆ.

ಇದೇ ಸುಳಿವಿನ ಮೇರೆಗೆ ತನಿಖೆ ನಡೆಸಿದಾಗ ಆರೋಪಿ ರವಿ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಅಕ್ಕನ ಜೊತೆ ಹಣಕಾಸಿನ ವಿಷಯದಲ್ಲಿ ಮನಸ್ತಾಪ , ಅವರಿದ್ದ ಮನೆಯ ಹಂಚು ತೆಗೆದು ಮನೆಗೆ ನುಗ್ಗಿ,  ಮಲಗಿದ್ದ ಜಯಶ್ರೀ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಹತ್ಯೆಯನ್ನು ಪ್ರತ್ಯಕ್ಷವಾಗಿ ಕಂಡ ಜಯಶ್ರೀಯವರ ಮಗ ಅನುರಾಗ್‌ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಬಗ್ಗೆ ತಿಳಿಸಿದ್ದಾನೆ. ಸಧ್ಯ ಹಲ್ಲೆಗೊಳಗಾಗಿರುವ ಅನುರಾಗ್ ಸಾವು ಬಧುಕಿನ ನಡುವೆ ಹೋರಾಡುತ್ತಿದ್ದಾನೆ./////

WebTitle : ಹಣಕ್ಕಾಗಿ ಅಕ್ಕನನ್ನೇ ಕೊಂದು, ತಮ್ಮ ಮಾಡಿದ್ದ ಹೈ ಡ್ರಾಮಾ – Own Brother killed her sister for money in Belgaum

>>> ಕ್ಲಿಕ್ಕಿಸಿ  ಕನ್ನಡ ನ್ಯೂಸ್  : Belgaum News Kannada । Belgaum News TodayKarnataka Crime NewsKannada Crime News