ವಾಟ್ಸ್ ಅಪ್ ಸುಳ್ಳು ವದಂತಿ-ಅಮಾಯಕ ಬಲಿ-ಫುಲ್ ಡಿಟೈಲ್ಸ್

One Dead-fake whatsapp message spread bengaluru

Crime News (itskannada) ಬೆಂಗಳೂರು : ವಾಟ್ಸ್ ಅಪ್ ಸುಳ್ಳು ವದಂತಿ-ಅಮಾಯಕ ಬಲಿ-ಫುಲ್ ಡಿಟೈಲ್ಸ್ : One Dead-fake whatsapp message spread bengaluru-ಮಕ್ಕಳ ಕಳ್ಳರ ಸುಳ್ಳು ವದಂತಿಗೆ ಅಮಾಯಕ ಬಲಿ , ಬ್ಯಾಟ್‌ನಿಂದ ಹೊಡೆದು ಅಮಾನುಷವಾಗಿ ಅಮಾಯಕನನ್ನು ಕೊಂದ ಜನರು. ” ನಮ್ಮ ಮಕ್ಕಳನ್ನು ಕದ್ದು ಕರೆದುಕೊಂಡು ಹೋಗಿ ಅವರನ್ನು ಕೊಂದು ಅವರ ದೇಹವನ್ನು ಚಿದ್ರ ಚಿದ್ರ ಮಾಡಿದರೆ ನಾವು ಸುಮ್ನೆ ಇರಬೇಕಾ , ಅದಕ್ಕೆ ಜನ ಅವನನ್ನ ಕೊಂದಿದ್ದಾರೆ” ಅಂತಾರೆ ಉದ್ರಿಕ್ತ ಕಾಟನ್ ಪೇಟೆಯ ಬಕ್ಷಿ ಗಾರ್ಡನ್ ನಿವಾಸಿಗಳು.

ಮಕ್ಕಳ ಕಳ್ಳರ ಸುಳ್ಳು ವದಂತಿಗೆ ಅಮಾಯಕ ಬಲಿ

ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ರಾಜಸ್ಥಾನ ಮೂಲದ ಕಾಲ್ ರಾಮ್  ಮಕ್ಕಳ ಕಳ್ಳ ಎಂದು ಭಾವಿಸಿ, ಮಕ್ಕಳನ್ನು ಚಾಕೊಲೇಟ್ ಮತ್ತು ಸಿಹಿತಿನಿಸು ನೀಡಿ ಕದ್ದೊಯ್ಯುತ್ತಾನೆ ಎಂಬ ವದಂತಿಯ ಮೇಲೆ ಕೋಪಗೊಂಡ ನಿವಾಸಿಗಳು ರಾಮುನ ಮೇಲೆ ಭಯಂಕರ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ, ನಾವು ಮನುಷ್ಯರು ಎಂದು ಮರೆದ ಅಜ್ಞಾನಿ ನಿವಾಸಿಗಳು ಮರದ ತುಂಡುಗಳು, ಕಬ್ಬಿಣದ ರಾಡ್ಗಳು ಮತ್ತು ಕ್ರಿಕೆಟ್ ಬ್ಯಾಟ್ಗಳಿಂದ ಕ್ರೂರವಾಗಿ ಹೊಡೆದು ಕೊಂದಿದ್ದಾರೆ.

ಮಕ್ಕಳ ಕಳ್ಳರ-ವಾಟ್ಸ್ ಅಪ್ ಸುಳ್ಳು ವದಂತಿ ದೃಶ್ಯಗಳು ವೈರಲ್

ಪೂರ್ಣ ಘಟನೆಯ ದೃಶ್ಯಗಳು ವೈರಲ್ ಆಗಿದ್ದು ಅಮಾಯಕನ ಸಾವಿನ ದೃಶ್ಯ ಮನಕಲುಕುವಂತಿದೆ. ಹೊಡೆಯುವ ಏಟಿಗೆ ಕೂಗಲು ಶಕ್ತಿ ಇಲ್ಲದೇ, ನರಳಿ ಪ್ರಾಣ ಬಿಟ್ಟ ರಾಮ್ , ಅಲ್ಲಿ ಏನು ನಡೆಯುತ್ತಿದೆ ನನ್ನನ್ನೇಕೆ ಹೊಡೆಯುತ್ತಿದ್ದಾರೆ ಎಂದು ಯೋಚಿಸಲು ಆಗಲೇ ಇಲ್ಲ. ಅವನು ಕಿರಿಚುವ ಸಾಮರ್ಥ್ಯವನ್ನೂ ಹೊಂದಿರಲಿಲ್ಲ.

ಶೀಘ್ರದಲ್ಲೇ ಪೊಲೀಸರು ಸ್ಥಳಕ್ಕೆ ಬಂದದನ್ನು ಕಂಡು ಹಲ್ಲೆ ನಡೆಸಿದ ಜನರು ಓಡಿಹೋದರು. ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಿದ ಕೆಲವೇ ನಿಮಿಷಗಳ ನಂತರ ರಾಮು ನಿಧನರಾದರು. ಮಕ್ಕಳ ಕಳ್ಳರ ಸುಳ್ಳು ವದಂತಿಗೆ ಅಮಾಯಕ ಬಲಿ.One Dead-fake whatsapp message spread bengaluru-itskannada

ಬುಧವಾರ ನಗರದಲ್ಲಿ ಮಕ್ಕಳ ಕಳ್ಳ ಎಂಬ ವದಂತಿ ಹಬ್ಬಿದ್ದು, ಕಾಟನ್ ಪೇಟೆ ಮತ್ತು ಚಾಮಾರಾಜಾಪೇಟೆ ಸುತ್ತಮುತ್ತ 4 ಕ್ಕು ಹೆಚ್ಚು ಇದೆ ರೀತಿ ಘಟನೆಗಳು ನಡೆದಿವೆ.ವಿಚಾರ ತಿಳಿದ ಚಾಮಾರಾಜಪೇಟೆ ಪೊಲೀಸರಿಂದ 6 ಜನರ ರಕ್ಷಣೆ ಮತ್ತು ವಿಚಾರಣೆ ನಡೆಸಿದ್ದಾರೆ.

ಆಂಜನಪ್ಪ ಗಾರ್ಡನ್ ನ ಇನ್ನೊಂದು ಭಾಗದಲ್ಲಿ,ನಿವಾಸಿಗಳು ಇಬ್ಬರು ವ್ಯಕ್ತಿಗಳ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದೆ – ಹಲ್ಲೆಗೊಂಡವರನ್ನು ಮಂಜುನಾಥ್ ಮತ್ತು ರಾಜ್ ಕುಮಾರ್ ಎನ್ನಲಾಗಿದೆ. ಆದರೆ ಅದೇ ಸಮಯಕ್ಕೆ ಅಲ್ಲಿಗೆ ಆಗಮಿಸಿದ ಬೀಟ್ ಪೊಲೀಸ್ ಮಂಜುನಾಥ್ ಮತ್ತು ರಾಜ್ ಕುಮಾರ್ ರವರನ್ನು ರಕ್ಷಿಸಿದ್ದಾರೆ.

ಇದೇ ರೀತಿಯ ಘಟನೆಗಳು ತಮಿಳುನಾಡು ಮತ್ತು ತೆಲಂಗಾಣದಲ್ಲಿ ವರದಿಯಾಗಿದೆ, ವದಂತಿಗಳಿಂದ ಜನಸಮೂಹಗಳು ಕ್ರೂರವಾಗಿ ಅಮಾಯಕರನ್ನು ಹಲ್ಲೆಗೊಳಿಸಿದ್ದಾರೆ.

ನಮ್ಮ ಗುಣವೇ ಹಾಗೆ ನಿಜ ನಾಗರ ಕಂಡರೆ ಹೊಡೆದು ಸಾಯಿಸುವ ನಾವು ಕಲ್ಲು ನಾಗರಕ್ಕೆ ಅಡ್ಡ ಬಿದ್ದು ನಮಿಸುತ್ತೇವೆ, ಅಂತೆಯೇ ನಿಜವಾದ ಕಳ್ಳ ಕಂಡರೆ ಮೂರೂ ಮೈಲು ದೂರ ಇರವು ನಾವು ಅಮಾಯಕ ಸಿಕ್ಕರೆ ಆಳಿಗೊಂದು ಕಲ್ಲು ಎಸೆದು ಅವನ ನೋವಿನಲ್ಲಿ  ಸುಖ ಕಾಣುತ್ತೇವೆ ! ಇದು ಸರಿನಾ …. ಮಕ್ಕಳು ಕಳುವಾಗಿದ್ದಾರಾ ? ಈ ಬಗ್ಗೆ ಎಲ್ಲಾದರು ವರದಿಯಾಗಿದೆಯ ? ಆ ಕಳ್ಳರು ನಿಮಗೆ ಗೊತ್ತ ? ನಿಜಕ್ಕೂ ಇಲ್ಲ , ಅಂತಹ ಯಾವುದೇ ವರದಿಗಳು ದಾಖಲಾಗಿಲ್ಲ , ಯಾರೋ ಕಿಡಿಗೇಡಿಗಳು ಮೋಜಿಗೆ ಹರಡಿದ WHATSAPP ವದಂತಿಗಳು ಜನರನ್ನು ಮುರ್ಖರನ್ನಾಗಿಸಿದೆ.

ಕೇವಲ ಬೆಂಗಳೂರು ಮಾತ್ರವಲ್ಲದೆ ಇಡೀ ರಾಜ್ಯ ಅಷ್ಟೇಕೆ ದೇಶವೇ ಬೆಚ್ಚಿ ಬಿದ್ದಿರುವ ಘಟನೆಗಳು ಆ ವಾಟ್ಸ್ ಅಪ್ ಸಂದೇಶಗಳು ನಿಜವೇ ಇರಬಹುದೆಂದು ನಂಬಿ ರಾಜ್ಯದ ಹಲವೆಡೆ ಅಮಾಯಕರ ಮಾರಣ ಹೋಮ ನಡೆಯುತ್ತಿದೆ…

ಚಾಮರಾಜಪೇಟೆ ಜನರು ಈ ರೀತಿ ಉದ್ರಿಕ್ತಗೊಳ್ಳಲು ಕಾರಣವೇನು ?

ಆಂಜನಪ್ಪ ಗಾರ್ಡನ್ ನ  ನಿವಾಸಿ ಮುನಿಯಪ್ಪ, ಅವರು ಒಂದು ಗುಂಪಿನಿಂದ ವಾಟ್ಸ್ ಅಪ್ ಸಂದೇಶವನ್ನು ಪಡೆದರು. ಆ ವಾಟ್ಸ್ ಅಪ್ ಸುಳ್ಳು ವದಂತಿ ಸಂದೇಶವು ಮಕ್ಕಳ ಚಿತ್ರಗಳು , ಅವರನ್ನು ಅಪಹರಿಸಿ ಕೊಲ್ಲುವಂತೆ , ಮಕ್ಕಳ ಅಂಗಾಂಗವನ್ನು ತಿನ್ನುವಂತೆ ಬಿಂಬಿಸಲಾಗಿದೆ , ಈ ಚಿತ್ರವೂ ಒಂದು ಸಂದೇಶವನ್ನು ಒಳಗೊಂಡಿದೆ: “ಎಲ್ಲಾ ತಾಯಂದಿರು ಮತ್ತು ಪಿತೃಗಳು, ಈ ಸಂದೇಶವನ್ನು ಹುಷಾರಾಗಿ ಓದಿ ಮತ್ತು ಶೇರ್ ಮಾಡಿ. ಬಿಹಾರ್ ಮತ್ತು ಕೇರಳದ ಮಕ್ಕಳ ಅಪಹರಣಕಾರರ ತಂಡ ಈಗ ಕರ್ನಾಟಕದಲ್ಲಿದೆ ಮತ್ತು ಮಕ್ಕಳ ಅಪಹರಿಸಿ , ಅವರ ಅಂಗಾಗಳನ್ನು ಬೇರ್ಪಡಿಸಿ ತಿನ್ನುತ್ತಾರೆ . ಎಚ್ಚರ  ” ಎಂಬ ಸುಳ್ಳು ಸಂದೇಶ ಒಬ್ಬರಿಂದ ಒಬ್ಬರಿಗೆ ಕಾಡ್ಗಿಚ್ಚಿನಂತೆ ಹರಡಿದೆ.

ಇನ್ನೊಂದು ಸಂದೇಶದಲ್ಲಿ ಭಯಾನಕ ಚಿತ್ರದ ಜೊತೆಗೆ, ವೀಡಿಯೊ ಇದ್ದು, ವೀಡಿಯೊದಲ್ಲಿ ಕೆಲವು ವ್ಯಕ್ತಿಗಳು ನೆಲದ ಮೇಲೆ ಮಲಗಿರುವ ಮಕ್ಕಳ ದೇಹಗಳನ್ನು ಸುತ್ತುಹೊರೆದಿದ್ದಾರೆ. ಒಬ್ಬ ವ್ಯಕ್ತಿಯು ಕತ್ತರಿಸಿದ ತೋಳನ್ನು ಹೊತ್ತುಕೊಂಡು ಅದನ್ನು ಹಾಕುವ ಸ್ಥಳವನ್ನು ಹುಡುಕುತ್ತಿರುವಂತೆ ಆ ವಿಡಿಯೋ ಚಿತ್ರಿಸಲಾಗಿದೆ.

ಮತ್ತೊಂದು ಸಂದೇಶವು ಬಿಹಾರ ಮತ್ತು ಒರಿಸ್ಸಾದಿಂದ ಬಂದ ಜನರು ಕರ್ನಾಟಕದ ನಿವಾಸಿಗಳಿಗೆ ಹೇಳುವಂತೆ, “ಕರ್ನಾಟಕದಲ್ಲಿ ನಾವು ಈಗ 400 ಜನರನ್ನು ಹೊಂದಿದ್ದೇವೆ. ನಿಮ್ಮ ಮಕ್ಕಳನ್ನು ಅಪಹರಿಸುವುದನ್ನು ಮತ್ತು ನಮ್ಮನ್ನು ತಡೆಯಲು ಸಾಧ್ಯವಿಲ್ಲ, ” ಎಂದು ಒಬ್ಬ ವ್ಯಕ್ತಿಯು ವೀಡಿಯೊದಲ್ಲಿ ಮಾತನಾಡುತ್ತಿರುವಂತೆ, ಚಿತ್ರಿಸಲಾಗಿದೆ.

ಮಕ್ಕಳ ಕಳ್ಳ ಎಂದು ಹಲ್ಲೆ ನಡೆಸಿ ಕೊಂದ ಆರೋಪಿಗಳ ಬಂದನ

ರಾಮು ಮೇಲೆ ಹಲ್ಲೆ ನಡೆಸಿದ ಇಬ್ಬರು ಚಿಕ್ಕ ಹುಡುಗರನ್ನೂ ಒಳಗೊಂಡಂತೆ 14 ಜನರನ್ನು ಗುರುವಾರ ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.

ಗೋಪಿ (18), ಅನ್ಬು (26), ವಸಂತ್ ಕುಮಾರ್ (32), ಬಾಲನ್ (30), ನಂದಾ (20), ತಿರುಮಾಲೇಶ್ (28), ರಾಜೇಶ್ (18), ಅನುಶಾ (30), ಅನುಶಾ (37) ಸದ್ಯ ಬಂದಿತರು ಎನ್ನಲಾಗಿದೆ. ತಲೆ ಮರೆಸಿಕೊಂಡಿರುವ ಉಳಿದವರ ಬಂದನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ.

“ರಾಮು ತಮ್ಮ ಮಕ್ಕಳನ್ನು ಅಪಹರಣ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಜನರು ಅನುಮಾನಿಸಿದರೆ, ಅವರು ಅವರನ್ನು ಪೊಲೀಸರಿಗೆ  ಹಸ್ತಾಂತರಿಸಬೇಕಿತ್ತು ಮತ್ತು ದೂರು ಸಲ್ಲಿಸಬೇಕಿತ್ತು. ಅಥವಾ ಪರಿಸ್ಥಿತಿಯನ್ನು ನಿಗ್ರಹಿಸಲು ಪೊಲೀಸರು ಆಗಮಿಸುವವರೆಗೂ ಅವರು ಅವರನ್ನು ಬಂಧಿಸಿರಬೇಕು. ಜನರು ತಮ್ಮ ಕೈಯಲ್ಲಿ ಕಾನೂನನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಮತ್ತು ಕೆಲವರ ಮಾತಿನ ಅರ್ಥದಲ್ಲಿ  ಸತ್ಯವೆಂದು ಗ್ರಹಿಸಿ ಯಾರನ್ನೂ ಕೊಲ್ಲಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ಕಾನೂನು ಇದೆ, ಅದನ್ನು ಮುರಿಯುವ ಯಾರಾದರೂ ಪರಿಣಾಮಗಳನ್ನು ಎದುರಿಸುತ್ತಾರೆ ಎಂದು ಸಹಾಯಕ ಕಮೀಷನರ್ ಕೆಆರ್ ಮಾರುಕಟ್ಟೆ ವ್ಯಾಪ್ತಿ ನಿರಂಜನ್ ಉರ್ಸ್ ಹೇಳಿದ್ದಾರೆ.ಮಕ್ಕಳ ಕಳ್ಳರ ಸುಳ್ಳು ವದಂತಿಗೆ ಅಮಾಯಕ ಬಲಿ-itskannada

ಸುಮಾರು 11.30 ರ ವೇಳೆಗೆ, ಬಂಧಿತ ಆರೋಪಿಗಳ ಸ್ನೇಹಿತರು ಮತ್ತು ಕುಟುಂಬ ಸದಸ್ಯರು, ಅಂಜಿನಪ್ಪ ಗಾರ್ಡನ್ ಮತ್ತು ಬಕ್ಷಿ ಗಾರ್ಡನ್ ನ ಅನೇಕ ನಿವಾಸಿಗಳು ಬಂಧಿತರ ಬಿಡುಗಡೆಗೆ ಒತ್ತಾಯಿಸಿ ಚಮರಾಜಪೇಟೆ ಪೊಲೀಸ್ ಠಾಣೆಯ ಸುತ್ತಲೂ ಒಟ್ಟುಗೂಡಿದರು. ಆದರೆ ಪೊಲೀಸರು ಇದಾವುದಕ್ಕೂ ಕಿವಿಗೊಡಲಿಲ್ಲ.

ಸೈಬರ್ ಕ್ರೈಮ್ ಪೋಲಿಸ್ ಎಚ್ಚರಿಕೆಯ ಹೇಳಿಕೆ ನೀಡಿದೆ,  “ಮಕ್ಕಳ ಸಾಗಾಣಿಕೆ ಬಗ್ಗೆ ಸಾಮಾಜಿಕ ಜಾಲತಾಣ ಗಳಲ್ಲಿ ನಕಲಿ ಸಂದೇಶಗಳು ಹರಡುತ್ತಿವೆ. ಇದು ಎಲ್ಲಾ ಸುಳ್ಳು ವದಂತಿಗಳು, ಅದನ್ನು ನಂಬಬೇಡಿ, ಸಿಟ್ಟಾಗಿ ಅಥವಾ ಉದ್ರಿಕ್ತಗೊಳ್ಳುವುದು ಬೇಡ ಅಂತಹ ಸಂಶಯಾಸ್ಪದರು ಯಾರಾದರು ಇದ್ದಾರೆ ನಮಗೆ ತಿಳಿಸಿದರೆ, ಕ್ರಮ ಕೈಗೊಳ್ಳಲಾಗುತ್ತದೆ. ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಿಮಿನಲ್ ಕ್ರಮ ತೆಗೆದುಕೊಳ್ಳಲಾಗುವುದು. ” /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ – Karnataka Crime News – Kannada News – Police News Kannada

Webtitle : ವಾಟ್ಸ್ ಅಪ್ ಸುಳ್ಳು ವದಂತಿ-ಅಮಾಯಕ ಬಲಿ-ಫುಲ್ ಡಿಟೈಲ್ಸ್ : One Dead-fake whatsapp message spread bengaluru – ಮಕ್ಕಳ ಕಳ್ಳರ ಸುಳ್ಳು ವದಂತಿಗೆ ಅಮಾಯಕ ಬಲಿ

Keyword : ವಾಟ್ಸ್ ಅಪ್ ಸುಳ್ಳು ವದಂತಿ-ಅಮಾಯಕ ಬಲಿ-ಫುಲ್ ಡಿಟೈಲ್ಸ್ : One Dead-fake whatsapp message spread bengaluru-ಮಕ್ಕಳ ಕಳ್ಳರ ಸುಳ್ಳು ವದಂತಿಗೆ ಅಮಾಯಕ ಬಲಿ