ಪಡುಬಿದ್ರೆ-ಮಳೆ ನೀರಿಗೆ ಕೊಚ್ಚಿ ಹೋಗಿದ್ದ ಬಾಲಕಿ ಮೃತದೇಹ ಪತ್ತೆ

Udupi-ಪಡುಬಿದ್ರೆ (itskannada) ಪಡುಬಿದ್ರೆ-ಮಳೆ ನೀರಿಗೆ ಕೊಚ್ಚಿ ಹೋಗಿದ್ದ ಬಾಲಕಿ ಮೃತದೇಹ ಪತ್ತೆ : ಪಡುಬಿದ್ರೆಯ ಪಾದೆ ಬೆಟ್ಟುವಿನಲ್ಲಿ ಸುರಿದ ನಿರಂತರ ಮಳೆಗೆ ವಿಧ್ಯಾರ್ಥಿಗಳು ನೀರು ಪಾಲಾದ ಘಟನೆ ಮಂಗಳವಾರ ನಡೆದಿತ್ತು, ಶಾಲೆಯ ನಂತರ ಮನೆಕಡೆ ಬರುವ ವೇಳೆ ಪಟ್ಲ ಕಿರುಸೇತುವೆ ದಾಟುತಿದ್ದಾಗ ಇಬ್ಬರು ಸಹೋದರಿಯರು ನೀರಿನಲ್ಲಿ ಕೊಚ್ಚಿಹೋದರು, ಸ್ಥಳಿಯರ ಸಹಾಯದಿಂದ ನಿಶಾ ರಕ್ಷಿಸಲ್ಪತ್ತಳು. ಆದರೆ  ನೀರಿನಲ್ಲಿ ನಾಪತ್ತೆಯಾಗಿದ್ದ ಬಾಲಕಿ ನಿಧಿಗಾಗಿ ಶೋಧಕಾರ್ಯ ಮುಂದುವರಿಸಲಾಯಿತು, ಇಂದು ನಿಧಿಯ ಮೃತದೇಹ ಅದೇ ಜಾಗದ 100 ಮೀಟರ್ ದೂರದಲ್ಲಿ ಪತ್ತೆಯಾಗಿದೆ.

ಮೃತ ಬಾಲಕಿಯನ್ನು ಉಮೇಶ್ ಆಚಾರ್ಯ ಮತ್ತು ಆಶಾ ದಂಪತಿಯ ಪುತ್ರಿ ಪಡುಬಿದ್ರೆಯ ಎಸ್‌ಬಿವಿಪಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ನಿಧಿ ಆಚಾರ್ಯ (9) ಎಂದು ಗುರುತಿಸಲಾಗಿದೆ. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಬಾಲಕಿಯ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ 4 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಾಲಕಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.

ಗ್ರಾಮದಲ್ಲಿ ಮೌನ ಆವರಿಸಿದ್ದು , ಸೂತಕದ ಛಾಯೆ ಕಾಣುತ್ತಿತ್ತು. ಮುದ್ದಾದ ಬಾಲಕಿಯನ್ನು ಬಲಿ ಪಡೆದ ವರುಣನ್ನು ನೆನೆದು ಇಡಿ ಶಾಪ ಹಾಕಿದರು. /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ -Crime News – Karnataka Crime News – Kannada News