ನನ್ನ ಪತಿಯ ಕೊಲೆಗಾರರನ್ನು ಬಂಧಿಸಿ ಉಮಾದೇವಿ ಆಗ್ರಹ

Kannada News (itskannada) ನನ್ನ ಪತಿಯ ಕೊಲೆಗಾರರನ್ನು ಬಂಧಿಸಿ ಉಮಾದೇವಿ ಆಗ್ರಹ.

ಧಾರವಾಡ : ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರಗಿಯವರ ಹಂತಕರ ಪತ್ತೆ ಇನ್ನೂ ಮಾಡಿಲ್ಲ. ಅವರನ್ನು ಹಿಡಿಯುವ ಕೆಲಸವಾಗಲಿ ಎಂದು ಕಲಬುರಗಿಯವರ ಪತ್ನಿ ಉಮಾದೇವಿ ಆಗ್ರಹಿಸಿದ್ದಾರೆ.
 ಕಲ್ಯಾಣ ನಗರದ ನಿವಾಸದಲ್ಲಿ ಮಾಧ್ಯಮಕ್ಕೆ ಪ್ರಕಿಯೆ ನೀಡಿದ ಅವರು  ಕಲಬುರಗಿಯವರ, ಹಂತಕರ ಹತ್ಯೆ ಕುರಿತು ಮೂರು ವರ್ಷವಾದರೂ ಸುಳಿವಿಲ್ಲ. ಈಗ ಗೌರಿ ಹಂತಕರನ್ನು ಕಂಡು ಹಿಡಿದರು ಎಂಬ ಮಾಹಿತಿ ನೀಡಿದ್ದಾರೆ. ಅಲ್ಲದೇ  ನನ್ನ ಗಂಡನ ಕೊಂದವರನ್ನು ಬೇಗನೆ ಕಂಡು ಹಿಡಿದು ನನಗೆ ನ್ಯಾಯ ದೊರಕಿಸಿಕೊಡಲಿ ಎಂದು ಆಗ್ರಹಿಸಿದರು.
 ತನಿಖೆ ಚುರುಕಾಗಲಿ ಎಂದು  ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದೇವೆ , ಆದರೂ ಸುಪ್ರೀಂಕೋರ್ಟ್ ನಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
 ಗೃಹ ಸಚಿವರಾಗಿದ್ದ ಪರಮೇಶ್ವರ್ ಅವರೇ ಆಗಲು ಮತ್ತು ಈಗಲೂ ಗೃಹ ಮಂತ್ರಿ ಯಾಗಿದ್ದಾರೆ. ಇನ್ನಾದರೂ  ಆದಷ್ಟು ಬೇಗ ಹಂತಕರ ಪತ್ತೆ ಮಾಡಬೇಕು ಎಂದು ಧಾರವಾಡದಲ್ಲಿ ಡಾ. ಎಂ.ಎಂ. ಕಲ್ಬುರ್ಗಿ ಪತ್ನಿ ಉಮಾದೇವಿ ಹೇಳಿಕೆ ನೀಡಿದ್ದಾರೆ. ///