ಅನೈತಿಕ ಸಂಬಂದಕ್ಕೆ ಎಲ್ಲರನ್ನೂ ಕಳಕೊಂಡ ಕೊನೆಗೆ ಅವಳನ್ನು ಕೊಂದ

Crime News (itskannada) ಬೆಂಗಳೂರು : ಅನೈತಿಕ ಸಂಬಂದಕ್ಕೆ ಎಲ್ಲರನ್ನೂ ಕಳಕೊಂಡ ಕೊನೆಗೆ ಅವಳನ್ನು ಕೊಂದ : ಕೂಲಿ ಕೆಲಸ ಮಾಡಿ ಅಷ್ಟೂ ಇಷ್ಟೋ ಸಂಪಾದ್ನೆ ಮಾಡೋ ರಾಜುಗೆ ಹೆಣ್ಣು ಜೊತೆಗೆ ಎಣ್ಣೆ ಇರ್ಲೇ ಬೇಕಿತ್ತು ,ಕುರುಬರಹಳ್ಳಿಯ ಪ್ರತಿ ಬಾರ್ ನ ದರ್ಶನ ಆದಮೆಲೆಯೇ ಆ ದಿನ ಮುಗಿತಾಯಿದ್ದದ್ದು. ಎಂಗೋ ಮಕ್ಕಳು ಮೊಮ್ಮಕ್ಕಳ ಜೊತೆ ಸುಮ್ನೆ ಮನೇಲೆ ಇರು ಎಂಗೋ ಇದಿಯೋ ಇಲ್ವೋ ನಿನಗೆ ಊಟ ಆಕ್ತಿವಿ ಅಂತ ಹೇಳಿದ್ರೂ ಕೇಳೋ ಸಂಪ್ರದಾಯ ಅವನದಾಗಿರಲಿಲ್ಲ , ಏನ್ ಮಾಡೋಕೆ ಸಾಧ್ಯ , ಇವನ ಚಾಳಿಗಳಿಗೆ ಅವರೆಲ್ಲಾ ಎಂಗಾರ ಮಾಡ್ಕೊಂಡು ಸಾಯಿ ಅಂತ ಇವನನ್ನ ಬಿಟ್ಟು ಹೊರಟೇ ಹೋದ್ರು. ಅವರು ಹೋದ ಮೇಲೆ ಆದ್ರು ಬದಲಾಗಬೇಕಿದ್ದ ಆಸಾಮಿ ಆಚೆ ಮಾಡ್ತಾಯಿದ್ದ ಚಾಳಿಗಳನ್ನ ಮನೇಲೆ ಮಾಡೋಕೆ ಶುರುವಚ್ಕೊಂಡ , ರೇಣುಕಾ ಅನ್ನೋ ಹೆಣ್ಣು ಮಗಳನ್ನ ಮನೆಗೆ ಕರೆತರೋಕೆ ಶುರು ಹಚ್ಕೊಂಡ………ಐತ್ಲಗ .

ಅನೈತಿಕ ಸಂಬಂದಕ್ಕೆ ಎಲ್ಲರನ್ನೂ ಕಳಕೊಂಡ ಕೊನೆಗೆ ಅವಳನ್ನು ಕೊಂದ

ಕೊನೆಗೆ ನೋಡಿದ್ರೆ ಆ ಹೆಣ್ಮಗಳು ಮನೇಲೆ ಕೊಲೆಯಾಗಿ ಹೋಗಿದ್ದಾಳೆ,

ಕೊಲೆಯಾದ ರೇಣುಕಾಗೂ ಮುದುಕಪ್ಪ ರಾಜೂಗೂ ಯಾವ್ದೇ ಸಂಬಂಧ ಇಲ್ಲ. ಆದ್ರೂ ಅದ್ಯಾವ ಕಾರಣಕ್ಕೆ ರಾಜುನ ಅರಸಿಕೊಂಡು ರೇಣುಕಾ ಬರ್ತಿದ್ಲು ಅನ್ನೋದು ಗೊತ್ತಾಗ್ತಿಲ್ಲ. ಒಂದಂತೂ ಸತ್ಯ ಮುದುಕಪ್ಪ ರಾಜು ರೋಡ್ ರೋಮಿಯೋ ಆಗಿದ್ದ, ಆಗಾಗ್ಗೆ ಮನೆ ಕಡೆ ಪರಸ್ತ್ರೀಯರನ್ನ ಕರೆತರ್ತಿದ್ದ ಅನ್ನೋದಕ್ಕೆ ನೆರೆಹೊರೆಯವರೇ ಸಾಕ್ಷಿ.

ಹೆಣ್ಣ, ಹೆಂಡಾ ಅಂತ ಕಂಡ ಕಂಡ ಕಡೆ ಗೂಳಿಯಂತೆ ನುಗ್ತಿದ್ದ ಮುದುಕಪ್ಪ ಇದೀಗ ಮಹಾಲಕ್ಷ್ಮಿ ಲೇಔಟ್ ಪೊಲೀಸರ ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ಗೆ ಸುಸ್ತಾಗಿ ಹೋಗಿದ್ದಾನೆ. ಅನೈತಿಕ ಸಂಬಂಧದ ಕೊಂಡಿಯಲ್ಲೇ ಇನ್ವೆಸ್ಟಿಗೇಷನ್ ಶುರುವಾಗಿದೆ, ಒಳ-ಹೊರ ಕಾರಣಗಳು ಇನ್ನಷ್ಟೇ ತೆರೆದುಕೊಳ್ಳಬೇಕಾಗಿದೆ. //// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ – Police News Kannada- Karnataka Crime News – Kannada News

Webtitle : ಅನೈತಿಕ ಸಂಬಂದಕ್ಕೆ ಎಲ್ಲರನ್ನೂ ಕಳಕೊಂಡ ಕೊನೆಗೆ ಅವಳನ್ನು ಕೊಂದ