ಮಂಗಳೂರು-ಗೋಣಿಚೀಲದಲ್ಲಿ ಮರಿಯಪ್ಪನ ಶವ-ಕೊಂದವರಾರು ?

0 274

Crime News (itskannada) ಕ್ರೈಮ್ ಸುದ್ದಿ – ಮಂಗಳೂರು-ಗೋಣಿಚೀಲದಲ್ಲಿ ಮರಿಯಪ್ಪನ ಶವ-ಕೊಂದವರಾರು ? – Mangalore-The dead body of Mariyappa in Drainage : ಮಂಗಳೂರು ಹೊರವಲಯದ ಸುರತ್ಕಲ್ ಕೃಷ್ಣಾಪುರ ರಸ್ತೆಯ ಬದಿಯ ಚರಂಡಿಯಲ್ಲಿ ವ್ಯಕ್ತಿಯೋರ್ವರ ದೇಹವನ್ನು ತುಂಡರಿಸಿ ಗೋಣಿಚೀಲದಲ್ಲಿ ತುಂಬಿಸಿದ ಸ್ಥಿತಿಯಲ್ಲಿ ಗೋಣಿಚೀಲದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಸುರತ್ಕಲ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುರತ್ಕಲ್ ಠಾಣೆಯ ಪೊಲೀಸರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮೃತದೇಹ ದೊರೆತ ಸ್ಥಳಕ್ಕೆ ತೆರಳಿ,  ಪರಿಶೀಲನೆ ನಡೆಸಿ, ಕೊಲೆಯಾದ ವ್ಯಕ್ತಿ ಕೊಪ್ಪಳ ಜಿಲ್ಲೆಯ ಕಬ್ಬರಗಿ ನಿವಾಸಿ ಮರಿಯಪ್ಪ (50) ಎಂದು ಗುರುತಿಸಲಾಗಿದೆ.

ಮಂಗಳೂರು: ಗೋಣಿಚೀಲದಲ್ಲಿ ಮರಿಯಪ್ಪನ ಶವ – ಕೊದವರಾರು ?

ದುಷ್ಕರ್ಮಿಗಳು ಮರಿಯಪ್ಪ (50) ಅವರನ್ನು ಬೇರ ಎಲ್ಲೋ ಕೊಲೆ ಮಾಡಿ ಮೃತದೇಹವನ್ನು ಗೋಣಿಚೀಲದಲ್ಲಿ ಕಟ್ಟಿ ವಾಹನದಲ್ಲಿ ತಂದು ರಸ್ತೆಬದಿಯ ಚರಂಡಿಗೆ ಹಾಕಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳದ ಮಹಜರು ಮಾಡಿರುವ ಪೋಲಿಸರು ಈಬಗ್ಗೆ ಪೂರ್ವಾಪರ ತನಿಖೆ ಕೈಗೊಂಡಿದ್ದಾರೆ. ಸದ್ಯ ಚರಂಡಿಯಲ್ಲಿ ಪತ್ತೆಯಾಗಿದ್ದ ಮರಿಯಪ್ಪ ಅವರ ಮೃತದೇಹವನ್ನು ಮಂಗಳೂರಿನ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಸುರತ್ಕಲ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

//// ಈ ವಿಭಾಗದ ಇನ್ನಷು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – Karnataka Crime News – Kannada Crime News – Bangalore Crime News – Police News Kannada – Mangalore – Mangalore News Online

WebTitle :  ಮಂಗಳೂರು: ಗೋಣಿಚೀಲದಲ್ಲಿ ಮರಿಯಪ್ಪನ ಶವ-ಕೊಂದವರಾರು ?

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!