ಅಂತರ್ ರಾಜ್ಯ ಶೋಕಿಲಾಲರ ಬಂಧನ-ಕಳ್ಳತನ ಪ್ರಕರಣ ಭೇದಿಸಿದ ಮಂಗಳೂರು ಪೊಲೀಸರು

Mangalore Police arrests inter-state bike thieves

0 200

Mangalore (itskannada) ಮಂಗಳೂರು : ಅಂತರ್ ರಾಜ್ಯ ಶೋಕಿಲಾಲರ ಬಂಧನ-ಕಳ್ಳತನ ಪ್ರಕರಣ ಭೇದಿಸಿದ ಮಂಗಳೂರು ಪೊಲೀಸರು – Mangalore Police arrests inter-state bike thieves :ತಾವು ಮಜಾಮಾಡಲು , ಶೋಕಿ ಜೀವನ ನಡೆಸಲು ಹಾಗೂ ಐಷಾರಾಮಿ ಜೀವನಕ್ಕಾಗಿ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ಖತಾರ್ ನಾಕ್ ಪ್ರಕರಣವನ್ನು ಭೇದಿಸಿರುವ ಮಂಗಳೂರು ಕೇಂದ್ರ ಉಪ ವಿಭಾಗದ ಪೊಲೀಸರು ಈ ಸಂಬಂದ ಮೂವರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂದಿದ್ದಾರೆ.

ಅಂತರ್ ರಾಜ್ಯ ಶೋಕಿಲಾಲರ ಬಂಧನ-ಕಳ್ಳತನ ಪ್ರಕರಣ ಭೇದಿಸಿದ ಮಂಗಳೂರು ಪೊಲೀಸರು

ಬಂಧಿತ ಆರೋಪಿಗಳನ್ನು ಕೇರಳದ ಅರ್ಜುನ್ ಕೆ.ಬಿ, ರೋಬಿನ್ ಬೇಬಿ ಹಾಗೂ ಟಿಜೋ ಜೋಸೆಪ್ ಎಂದು ಗುರುತಿಸಲಾಗಿದೆ. ಬಂಧಿತರು ಮಂಗಳೂರು ಹಾಗೂ ಸುತ್ತಮುತ್ತಲಿನಲ್ಲಿ ಪಾರ್ಕಿಂಗ್ ಮಾಡುವ ವಾಹನಗಳ ಮೇಲೆ ಕಣ್ಣಾಕಿದರೆ ಸಾಕು, ಕ್ಷಣರ್ದದಲ್ಲಿ ಅವುಗಳನ್ನು ಎಗರಿಸಿ, ತಮ್ಮ ಶೋಕಿ ಜೀವನ ನಡೆಸಲು ಮಾರಾಟ ಮಾಡುತ್ತಿದ್ದರು. ಇದೇ ರೀತಿ ರಾಯಲ್ ಎನ್ ಫೀಲ್ಡ್ ಬುಲೇಟ್, ಕೆಟಿಎಮ್, ಯಮಹಾ ಆರ್15, ಬಜಾಜ್ ಪಲ್ಸರ್, ಸುಜುಕಿ ಜಿಕ್ಸರ್ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ವಾಹನ ಸವಾರರು ಚಿಂತೆಗೊಳಗಾಗಿದ್ದರು, ತಮ್ಮ ವಾಹನಗಳನ್ನು ಕಳೆದು ಕೊಂಡಿದ್ದ ಮಾಲೀಕರು ಪೊಲೀಸರಲ್ಲಿ ದುಂಬಾಲು ಬಿದ್ದಿದ್ದರು, ವಾಹನ ಕಳ್ಳರನ್ನು ಹಿಡಿಯುವಂತೆ ಪೊಲೀಸರಿಗೆ ದೂರು ನೀಡಿದ್ದರು.

ಈ ಕುರಿತು ಮಂಗಳೂರು ಕೇಂದ್ರ ಉಪ ವಿಭಾಗದ ಠಾಣೆಗಳಲ್ಲಿ ಮತ್ತು ನಗರದ ಇತರ ಠಾಣೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ದ್ವಿ ಚಕ್ರ ವಾಹನಗಳ ಕಳವು ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳ ಪತ್ತೆಗಾಗಿ ಮಂಗಳೂರು ಕೇಂದ್ರ ಉಪ ವಿಭಾಗದ ಉತ್ತರ ಪೊಲೀಸ್ ಠಾಣೆ ಮತ್ತು ಪೂರ್ವ ಪೊಲೀಸ್ ಠಾಣೆಯ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಲಾಗಿತ್ತು.‌ ಅಂದು ಕೊಂಡಂತೆ ವಾಹನ ಕಳ್ಳರು ಸಿಕ್ಕಿಬಿದ್ದಿದ್ದಾರೆ.. /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ – Mangalore News Online – Karnataka Crime News – Kannada News

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!