ಮೈಸೂರು-ಪತ್ನಿ ಹಾಗೂ ಮಗಳ ಕತ್ತು ಕೊಯ್ದ ಸಾಫ್ಟ್ ವೇರ್ ಇಂಜಿನಿಯರ್

Man Killed His Daughter and Wife in Mysore

Crime News (itskannada) Mysoreಮೈಸೂರು-ಪತ್ನಿ ಹಾಗೂ ಮಗಳ ಕತ್ತು ಕೊಯ್ದ ಸಾಫ್ಟ್ ವೇರ್ ಇಂಜಿನಿಯರ್-Man Killed His Daughter and Wife in Mysore: ಪತ್ನಿ ಹಾಗೂ ಮಗಳ ಕತ್ತು ಕೊಯ್ದು ಹತ್ಯೆಗೈದು ವ್ಯಕ್ತಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮೈಸೂರಿನ ವಿಜಯನಗರದ ನಾಲ್ಕನೇ ಹಂತದಲ್ಲಿ ಘಟನೆ ನಡೆದಿದೆ.

ಪತ್ನಿ ಹಾಗೂ ಮಗಳ ಕತ್ತು ಕೊಯ್ದ ಸಾಫ್ಟ್ ವೇರ್ ಇಂಜಿನಿಯರ್

ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪ್ರಜ್ವಲ್ (45) ನೀಚ ಕೃತ್ಯವೆಸಗಿದ ಪಾಪಿ ಪತಿ. ಪತ್ನಿ ಸವಿತ(39) ಹಾಗೂ ಮಗಳು ಸಿಂಚನ (11) ಮೃತಪಟ್ಟವರು. ಪ್ರಜ್ವಲ್ ಮೂಲತಃ ನಂಜನಗೂಡಿನ ನಿವಾಸಿಯಾಗಿದ್ದರು. ಮೃತ ಸವಿತಾ ಮೂಲತಃ ಕೆ ಆರ್ ಪೇಟೆ ನಿವಾಸಿಯಾಗಿದ್ದು, ದಂಪತಿಗಳು ಮೈಸೂರಿನಲ್ಲಿ ವಿಜಯನಗರದ ನಾಲ್ಕನೇ ಹಂತದಲ್ಲಿ ವಾಸವಿದ್ದರು.

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ದಂಪತಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳಾಗಿದ್ದರು. ಮೊನ್ನೆ ರಾತ್ರಿ ಪತ್ನಿ ಹಾಗೂ ಮಗಳ ಕತ್ತು ಕೊಯ್ದು ಪ್ರಜ್ವಲ್‌ ತಾನೂ ಕತ್ತು ಕೊಯ್ದುಕೊಂಡು ಇಡೀ ರಾತ್ರಿ ಮೃತದೇಹಗಳ ಬಳಿಯೇ ಇದ್ದನು, ಸದ್ಯ ಪಾಪಿ ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಜೀವಕ್ಕೆ ಯಾವುದೇ ಅಪಾಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ.

ಪತ್ನಿ ಹಾಗೂ ಮಗಳ ಕತ್ತು ಕೊಯ್ದ ಸಾಫ್ಟ್ ವೇರ್ ಇಂಜಿನಿಯರ್-ಮೃತದೇಹಗಳ ಬಳಿ ರಾತ್ರಿ ಕಳೆದ

ಗುರುವಾರ ದಂಪತಿಯ ವಿವಾಹ ವಾರ್ಷಿಕೋತ್ಸವ ಇತ್ತು. ಪತಿ ಪತ್ನಿಯರ ಮಧ್ಯೆ ತೀವ್ರ ಜಗಳವೂ ಆಗಿತ್ತು. ಕೌಟುಂಬಿಕ ಕಲಹ ಉಂಟಾದ ಹಿನ್ನೆಲೆ ಪತಿ ಪ್ರಜ್ವಲ್ ಎರಡು ದಿನದ ಹಿಂದೆ ರಾತ್ರಿ ಪತ್ನಿ ಹಾಗೂ ಮಗಳ ಕತ್ತು ಕೊಯ್ದು ಕೊಂದಿದ್ದಾನೆ. ವಿವಾಹ ವಾರ್ಷಿಕೋತ್ಸವ ಆಚರಿಸುವ ಹಿಂದಿನ ದಿನ ಪ್ರಜ್ವಲ್‌ ಪತ್ನಿ ಮತ್ತು ಮಗಳನ್ನು ಹತ್ಯೆ ಮಾಡಿದ್ದಾನೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ – Karnataka Crime News – Kannada News – Police News Kannada – Mysore News Online

WebTitle : ಪತ್ನಿ ಹಾಗೂ ಮಗಳ ಕತ್ತು ಕೊಯ್ದ ಸಾಫ್ಟ್ ವೇರ್ ಇಂಜಿನಿಯರ್-Man Killed His Daughter and Wife in Mysore