ಹಾಸನ : ಮಗಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ

Kannada News (itskannada) Hassan Crime News : ಮಗಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ – ಅರಸೀಕೆರೆ (ಹಾಸನ) : ತಾಯಿಯೇ ಮಗಳಿಗೆ ವಿಷವುಣಿಸಿ, ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಹೆಬ್ಬಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶಾರದಮ್ಮ (63), ಮಗಳು ಯಶೋಧ (40) ಮೃತರು. ಯಶೋಧ ಮದುವೆಯಾದ ಒಂದೇ ವರ್ಷಕ್ಕೆ ಗಂಡನಿಂದ ದೂರವಾಗಿ ತವರು ಸೇರಿದ್ದಳು. ಅಲ್ಲದೆ ಕಳೆದ ಒಂದು ವರ್ಷದಿಂದ ಮನೋವೈಕಲ್ಯದಿಂದ ಬಳಲುತ್ತಿದ್ದಳು. ಮಗಳ ಸ್ಥಿತಿ ಹಾಗೂ ಬಡತನದ ಬೇಗೆಯಿಂದ ಬೇಸತ್ತ ಶಾರದಮ್ಮ ತನ್ನ ಮಗಳಿಗೆ ವಿಷ ಉಣಿಸಿ ತಾನೂ ವಿಷ ಸೇವಿಸಿ  ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೆಲಸಕ್ಕೆಂದು ಹೊರ ಹೋಗಿದ್ದ ಶಾರದಮ್ಮ ಪುತ್ರ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗಿದಾಗ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ////
Karnataka Crime News – Karnataka News – Police News Kannada –  Hassan News Online