ವಿಷ ಸೇವಿಸಿದ ಪ್ರೇಮಿಗಳು, ಮೃತ ಪಟ್ಟ ಯುವಕ , ಯುವತಿ ಬಚಾವ್

Lovers who have poisoned, the death of youth, Girl was in the hospital

0

ವಿಷ ಸೇವಿಸಿದ ಪ್ರೇಮಿಗಳು, ಮೃತ ಪಟ್ಟ ಯುವಕ , ಯುವತಿ ಬಚಾವ್

Lovers who have poisoned, the death of youth, Girl was in the hospital

ಚಿಕ್ಕಮಗಳೂರು : ಪ್ರೇಮಿಗಳಿಬ್ಬರು ತಮ್ಮ ಪೋಷಕರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದು , ಪ್ರಿಯಕರ ಸಾವನ್ನಪ್ಪಿ ಪ್ರೇಯಸಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಹಾಸನ ಜಿಲ್ಲೆಯ ಹೊಸೂರು ಗ್ರಾಮವಾಸಿ ೨೨ ವರ್ಷದ ಕೀರ್ತಿ ಮೃತಪಟ್ಟ ಯುವಕ. ಹಾಸನದಿಂದ ಮನೆ ಬಿಟ್ಟು ಬಂದ ಪ್ರೇಮಿಗಳು ಮೂಡಿಗೆರೆಯಲ್ಲಿ ವಿಷ ಸೇವಿಸಿದ್ದಾರೆ. ವಿಷ ಸೇವನೆಯ ನಂತರ ಸ್ಥಳದಲ್ಲೇ ಯುವಕ ಮೃತಪಟ್ಟಿದ್ದಾನೆ. ಪ್ರೇಯಸಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.

ಮೃತ ಕೀರ್ತಿ ದ್ವಿತೀಯ ಪಿಯುಸಿ ಮೆಕ್ಯಾನಿಕ್ ವ್ಯಾಸಂಗ ಮಾಡುತ್ತಿದ್ದನು , ಅದೇ ಗ್ರಾಮದ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದನು.

ಅದ್ಯಾಗೋ ಇವರಿಬ್ಬರ ಪ್ರೀತಿ ವಿಷಯವು ಪೋಷಕರಿಗೆ ತಿಳಿದು ಬುದ್ದಿ ಹೇಳಿದ್ದರು. ಮಿತಿ ಮೀರಿದಾಗ ಅವರ  ಸಂಬಂಧಿಕರು ಹಾಸನ ಟೌನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

ಪೊಲೀಸರೂ ಸಹ ಪ್ರೇಮಿಗಳಿಗೆ ಬುದ್ದಿ ಹೇಳಿ , ಓದಿನ ಕಡೆ ಗಮನಹರಿಸುವಂತೆ ಹಾಗೂ ಮತ್ತೆ ನೀವು ಬೇಟಿಯಾಗಬಾರದು ಎಂದು ಹೇಳಿ ಕಳುಹಿಸಿದ್ದರು.

ಒಬ್ಬರನ್ನೊಬ್ಬರು ಅತಿಯಾಗಿ ಹಚ್ಚಿಕೊಂಡಿದ್ದ ಪ್ರೇಮಿಗಳು ರಾತ್ರೋ ರಾತ್ರಿ ಮನೆ ಬಿಟ್ಟು  ಬೈಕ್‍ನಲ್ಲಿ ಮೂಡಿಗೆರೆಗೆ ಬಂದು ಚಂದ್ರೇಗೌಡ ಎಂಬುವವರ ಕಾಫಿ ತೋಟದಲ್ಲಿ ವಿಷ ಸೇವಿಸಿದ್ದಾರೆ ಎಂದು ತಿಳಿದು ಬಂದಿದೆ.

ಮುಂಜಾನೆ ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಈ ಬಗ್ಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನೂ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಚಿಕಿತ್ಸೆ ಫಲಿಸದೆ ಕೀರ್ತಿ ಮೃತಪಟ್ಟರೆ, ಯುವತಿಯನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.////

WebTitle : ವಿಷ ಸೇವಿಸಿದ ಪ್ರೇಮಿಗಳು, ಮೃತ ಪಟ್ಟ ಯುವಕ , ಯುವತಿ ಬಚಾವ್-Lovers who have poisoned, the death of youth, Girl was in the hospital

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್ : Kannada Crime NewsKarnataka Crime News Latest Kannada News | Hassan News Kannada | Hassan News Today