Welcome To Kannada News - itskannada.in

ಸೈಕಲ್ ಸವಾರನ ಬಲಿ ಪಡೆದ ಕೆ.ಎಸ್.ಆರ್.ಟಿ.ಸಿ

KSRTC Bus Collides cycle, cycle rider on spot died in Bellary (Ballari) - its Kannada News

ಸೈಕಲ್ ಸವಾರನ ಬಲಿ ಪಡೆದ ಕೆ.ಎಸ್.ಆರ್.ಟಿ.ಸಿ

ಹೊಲಕ್ಕೆ ಹೋದವನು, ಮನೆಗೆ ಬರುವಾಗ ನಡೆದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ.

(its Kannada News) : ಸೈಕಲ್ ಸವಾರನ ಮೇಲೆ ಕೆಎಸ್ಆರ್ ಟಿಸಿ ಬಸ್ ಹರಿದು ಸೈಕಲ್ ಸವಾರ ಸ್ಥಳದಲ್ಲೇ ಮೃತಗೊಂಡಿರುವ ಘಟನೆ ಮರಿಯಮ್ಮನಹಳ್ಳಿ ಪಟ್ಟಣದ ಹೊರ ವಲಯದ ರಾಷ್ರ್ಟೀಯ ಹೆದ್ದಾರಿ 50 ರ ರಸ್ತೆಯಲ್ಲಿ ಶನಿವಾರ ನಡೆದಿದೆ.

More From Web

ಸ್ಥಳೀಯ ನಿವಾಸಿ ಕೆ.ಸೋಮಣ್ಣ ಸ್ಥಳದಲ್ಲೇ ಮೃತಗೊಂಡಿರುವ ಸೈಕಲ್ ಸವಾರನಾಗಿದ್ದಾನೆ. ಸೈಕಲ್ ಸವಾರನು‌ ಹೊಲಕ್ಕೆ ಹೋಗಿ ವಾಪಸ್  ಮರಿಯಮ್ಮನ ಹಳ್ಳಿಯ ಊರೋಳಗೆ ಸೈಕಲ್ ಮೇಲೆ ಬರುವಾಗ ಹಿಂದಿನಿಂದ ಬಂದ ಕೆಎಸ್ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ.

ಕೆಎಸ್ಆರ್ ಟಿಸಿ ಬಸ್ , ಸೈಕಲ್ ಸವಾರನ ಮೇಲೆ ಹೊಗಿದ್ದರಿಂದ ಸೈಕಲ್ ಸವಾರ ಸ್ಥಳದಲ್ಲೇ ಮೃತಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಿಯಮ್ಮನಹಳ್ಳಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಮೃತನ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.

ಸಾವಿನ ಭೀಕರತೆಯನ್ನು ಫೋಟೋ ನೋಡಿದರೆಯೇ ತಿಳಿಯುತ್ತದೆ.ಇನ್ನು ಘಟನೆಗೆ ಬಸ್ ಚಾಲಕನ ಅಜಾಗರೂಕತೆಯೇ ಕಾರಣ ಎಂದು ದೂಷಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಿದ್ದಾರೆ.////


News Title : KSRTC Bus Collides cycle, cycle rider on spot died in Bellary (Ballari)
(ಕನ್ನಡ ಸುದ್ದಿಗಳು from itskannada.in , No. 1 News Portal for Kannadigas)

Stay Updated with itsKannada to Know more Kannada News on Crime News and all  Latest Kannada News Today.

Quick Links : Film News | Politics News | Crime News | Health Tips | India News | World News
ನಮ್ಮ ಕನ್ನಡ ಸುದ್ದಿ ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು Video News ಸಮೇತ Twitter, Google+ ಮತ್ತು Facebook ನಲ್ಲಿ ಕಾಣಬಹುದು.

Read More From Online Content