ಶಾಕಿಂಗ್ ನ್ಯೂಸ್-ಕನ್ನಡದ ಖ್ಯಾತ ಟಿವಿ ನಿರೂಪಕ ಚಂದನ್ ಇನ್ನಿಲ್ಲ

Kannada Tv Anchor Chandan No More

Davanagere (itskannada) ಶಾಕಿಂಗ್ ನ್ಯೂಸ್-ಕನ್ನಡದ ಖ್ಯಾತ ಟಿವಿ ನಿರೂಪಕ ಚಂದನ್ ಇನ್ನಿಲ್ಲ : ಬೆಳ್ಳಂಬೆಳಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಖಾಸಗಿ ವಾಹಿನಿಯ ಇಬ್ಬರು ನಿರೂಪಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಈ ಅಪಘಾತ ಸಂಭವಿಸಿದ್ದು, ನಿರೂಪಕರಾದ ಚಂದನ್ (34) ಮತ್ತು ಸಂತೋಷಿ (24) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾರು ಚಾಲನೆ ಮಾಡುತ್ತಿದ್ದ ಚಂದನ್ ಹಾಗೂ ಪಕ್ಕದಲ್ಲಿ ಕುಳಿತಿದ್ದ ಗಾಯಕಿ ಸಂತೋಷಿ ಸ್ಥಳದಲ್ಲೇ ಮೃತಪಟ್ಟರೆ. ಘಟನೆಯಲ್ಲಿ ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಕಿರುತೆರೆ ಕಲಾವಿದರಾದ ರಾಮು ಮತ್ತು ಸುನೀತಾ ಎಂದು ಗುರುತಿಸಲಾಗಿದ್ದು, ಇವರನ್ನು ದಾವಣಗೆರೆಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರಿಬ್ಬರೂ ಕಾರ್ಯಕ್ರಮದ ನಿಮಿತ್ತ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುತ್ತಿದ್ದರು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ರಸ್ತೆ ಪಕ್ಕ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಆಗ ಕಾರಿನಲ್ಲಿದ್ದ ಇಬ್ಬರು ನಿರೂಪಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹರಿಹರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Crime News – Karnataka Crime News –  Davanagere News Online

ಶಾಕಿಂಗ್ ನ್ಯೂಸ್-ಕನ್ನಡದ ಖ್ಯಾತ ಟಿವಿ ನಿರೂಪಕ ಚಂದನ್ ಇನ್ನಿಲ್ಲ-itskannada 1ಶಾಕಿಂಗ್ ನ್ಯೂಸ್-ಕನ್ನಡದ ಖ್ಯಾತ ಟಿವಿ ನಿರೂಪಕ ಚಂದನ್ ಇನ್ನಿಲ್ಲ-itskannada 2Kannada-Tv-Anchor-Chandan-No-More-itskannada