ಹಾಸನ : ಕಾರು ಡಿಕ್ಕಿ ಬೈಕ್ ಸವಾರ ಸಾವು | ಕನ್ನಡ ನ್ಯೂಸ್

One killed in Hassan Bike Accident | Kannada News

Kannada News (itskannada) Hassan : ಹಾಸನ : ಕಾರು ಡಿಕ್ಕಿ ಬೈಕ್ ಸವಾರ ಸಾವು : ಚನ್ನರಾಯಪಟ್ಟಣ ತಾಲ್ಲೂಕು ಎನ್. ಬಿಂಡೇನಹಳ್ಳಿ ಸಮೀಪ ಶನಿವಾರ ರಾತ್ರಿ ಕಾರು ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾನೆ.
ಹೊಳೆನರಸೀಪುರ ತಾಲ್ಲೂಕು ಹಳೇಕೋಟೆ ಹೋಬಳಿ ನ್ಯಾಮನಹಳ್ಳಿಯ ಸ್ವಾಮಿಗೌಡ (53) ಮೃತರು. ಮೃತರು ಶ್ರೀನಿವಾಸಪುರ ಸಕ್ಕರೆ ಕಾರ್ಖಾನೆ ನೌಕರರಾಗಿದ್ದು,  ಕಾರ್ಖಾನೆ ವಸತಿ ಗೃಹದಲ್ಲಿ ವಾಸವಾಗಿದ್ದರು. ಕೆಲಸ ಮುಗಿಸಿಕೊಂಡು ಶನಿವಾರ ರಾತ್ರಿ 8 ಗಂಟೆಗೆ ತಮ್ಮ ವಸತಿ ಗೃಹಕ್ಕೆ ಟಿವಿಎಸ್ ಎಕ್ಸೆಲ್ ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಮಾರುತಿ ಕಾರು ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ತೀವ್ರ ಗಾಯವಾಗಿದ್ದು. ಚಿಕಿತ್ಸೆಗಾಗಿ ಚನ್ನರಾಯಪಟ್ಟಣ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.////
ಈ ವಿಭಾಗದ ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – Crime News-Karnataka Crime News-Hassan News Online-Karnataka News 

Keyword : ಹಾಸನ news , ಹಾಸನ ಸುದ್ದಿ , ಹಾಸನ ನ್ಯೂಸ್ , Hassan News , Hassan Accident , Hassan Crime News , Hassan Police News , Hassan News Today.