ಹಾಸನ : ಕೊಲೆ ಯತ್ನ-ನಾಲ್ವರು ಆರೋಪಿಗಳ ಸೆರೆ | ಕನ್ನಡ ನ್ಯೂಸ್

Kannada News (itskannada) Crime News ಹಾಸನ : ಕೊಲೆ ಯತ್ನ-ನಾಲ್ವರು ಆರೋಪಿಗಳ ಸೆರೆ : ನಗರದ ಗುಹೇ ಕಲ್ಲಮ್ಮ ದೇಗುಲದ ಬಳಿ ಸಿದ್ದಾರ್ಥ ವಸತಿ ಪ್ರೌಢಶಾಲೆ ಮುಂಭಾಗ  ಕ್ರಿಕೆಟ್ ಆಡುತ್ತಿದ್ದವರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ಆರೋಪಿಗಳ ಪೈಕಿ ನಾಲ್ವರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಾಗರಾಜ್ (32), ಯತೀಶ್ (29), ರಾಮಸ್ವಾಮಿ (43), ರತೀಫ್ ಬಂಧಿತರು. ಇವರೊಂದಿಗೆ ದುಷ್ಕೃತ್ಯದಲ್ಲಿ ಪಾಲ್ಗೊಂಡಿದ್ದ ಚೈಲ್ಡ್ ರವಿ ಹಾಗೂ ಅಖಿಲ್ ಎಂಬ ಪ್ರಮುಖರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು , ಪೊಲೀಸ್ ಕಾವಲು ಹಾಕಲಾಗಿದೆ ಎಂದು ನಗರ ಎಸ್ಐ ಸುರೇಶ್ ತಿಳಿಸಿದ್ದಾರೆ.
ಮೇ 27 ರಂದು ಮಧ್ಯಾಹ್ನ 3:30 ರಲ್ಲಿ ಕ್ರಿಕೆಟ್ ಆಟವಾಡುತ್ತಿದ್ದ ಫಾರೂಕ್, ನವಾಜ್, ರಿಯಾಜ್, ಜಿಬ್ರಾನ್, ಆಸಿಫ್, ಫಯಾಜ್, ಅಪ್ರೀನ್ ವಾಸಿಂ ಅವರ ಮೇಲೆ ಚೈಲ್ಡ್ ರವಿ ಹಾಗೂ ಆತನ ಸಹಚರರ ಗುಂಪು ಜಗಳ ತೆಗೆದು, ಫಾರೂಕ್ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಚೈಲ್ಡ್  ರವಿ ಹಲ್ಲೆ ಮಾಡಿದ್ದಲ್ಲದೆ, ಇತರರೊಂದಿಗೆ ಸೇರಿ ನೆಲಕ್ಕೆ ಬೀಳಿಸಿ ಕಾಲಿನಿಂದ ಬೀಳಿಸಿ ತಿಳಿದಿದ್ದರು. ಜಗಳಕ್ಕೆ ಬಂದ ನವಾಜ್, ಜೀಬ್ರಾನ್ ಅವರ ಮೇಲೂ ಹಲ್ಲೆ ಮಾಡಿ ಗಾಯಗೊಳಿಸಿದ್ದರು ಎಂದು ಗಾಯಾಳುಗಳು ಆಸ್ಪತ್ರೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು  ಎಸ್ಪಿ ರಾಹುಲ್ ಕುಮಾರ್ ಶಹಾಪುರವಾಡ್ ಬಂಧಿಸಿದ್ದಾರೆ. /// Hassan News Online – Karnataka Crime News -Karnataka News