ಹುಬ್ಬಳ್ಳಿ : ಪತಿಯನ್ನು ಹತ್ಯೆಗೈದ ಪತ್ನಿ- ತಲೆ ನೀಡಿತ್ತು ಸಾಕ್ಷಿ | ಕನ್ನಡ ನ್ಯೂಸ್

Kannada News (itskannada) ಹುಬ್ಬಳ್ಳಿ Crime News : ಹುಬ್ಬಳ್ಳಿ : ಪತಿಯನ್ನು ಹತ್ಯೆಗೈದ ಪತ್ನಿ- ತಲೆ ನೀಡಿತ್ತು ಸಾಕ್ಷಿ | ಕನ್ನಡ ನ್ಯೂಸ್ : ಕ್ರಿಕೆಟ್ ಬ್ಯಾಟ್ ನಿಂದ ಪತಿಯನ್ನು ಕೊಲೆಗೈದು ಸಹಜ ಸಾವು ಎಂದು ಬಿಂಬಿಸಿದ್ದ ಪತ್ನಿಯನ್ನು ವಿದ್ಯಾನಗರದ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿ : ಪತಿಯನ್ನು ಹತ್ಯೆಗೈದ ಪತ್ನಿ- ತಲೆ ನೀಡಿತ್ತು ಸಾಕ್ಷಿ | ಕನ್ನಡ ನ್ಯೂಸ್

ಮೇ 2ರಂದು ಶಿವಯೋಗಿ ಹಳೆಮನೆ (45) ಎಂಬುವರು ಆಕಸ್ಮಿಕವಾಗಿ ಮೃತಪಟ್ಟಿದ್ದರು. ತಮ್ಮ ಓಂ ನಗರದ ನಿವಾಸದಲ್ಲಿ ಮೃತರಾಗಿದ್ದರು, ತಲೆಗೆ ಗಾಯವಾಗಿತ್ತು, ತಲೆಯ ಗಾಯವು ಅಲ್ಲಿ ಏನೋ ಆಗಿದೆ ಎಂಬುವುದರ ಸುಳಿವು ನೀಡುತ್ತೀತ್ತು. ಮಂಚದ ಮೇಲಿಂದ ಬಿದ್ದು ಗಾಯವಾಗಿ ಸಾವನ್ನಪ್ಪಿದ್ದಾರೆ ಎಂದು ಪತ್ನಿ ಕಾವ್ಯ ಹೇಳಿಕೊಂಡಿದ್ದಳು. ಆದರೆ ಮೃತ ಶಿವಯೋಗಿ ಸಂಬಂಧಿಗಳು ತಲೆಯ ಗಾಯ ನೋಡಿ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ತನಿಖೆಗೆ ಮನವಿಮಾಡಿದರು.ಶಿವಯೋಗಿ ಸಹೋದರಿ ರಾಜೇಶ್ವರಿ ಈ ಸಂಬಂಧ ವಿದ್ಯಾನಗರ ಠಾಣೆಯಲ್ಲಿ ದೂರು ನೀಡಿದ್ದರು.

ಈ ಬಗ್ಗೆ ತನಿಕೆ ನಡೆಸಿದ ಪೊಲೀಸರು ಅದು ಆಕಸ್ಮಿಕ ಸಾವಲ್ಲ ಬದಲಾಗಿ ಕೊಲೆ ಎಂದು ಪತ್ತೆಹಚ್ಚಿದರು. ಈ ಬಗ್ಗೆ ಅವನನ್ನು ಕೊಂದವಳು ತನ್ನ ಪತ್ನಿಯೇ ಆಗಿದ್ದಳು.

ಕಾವ್ಯ (40) ಬಂಧಿತ ಮಹಿಳೆ. ಮೇ 2 ರಂದು ಇಲ್ಲಿನ ಓ ನಗರ ನಿವಾಸದಲ್ಲಿ ತನ್ನ ಪತಿ ಶಿವಯೋಗಿಯನ್ನು ಹತ್ಯೆ ಮಾಡಿದ್ದಳು. ಬಳಿಕ ಇದು ಸಹಜ ಸಾವು ಎಂದು ಬಿಂಬಿಸಿದ್ದಳು. ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ಕಾವ್ಯಾಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ  ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.ಕೌಟುಂಬಿಕ ಕಲಹದ ಕಾರಣ ಬ್ಯಾಟ್‍ನಿಂದ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ  ಕಾವ್ಯ ಹೇಳಿಕೆ ನೀಡಿದ್ದಾಳೆ.  ಪೊಲೀಸರು ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಬಂಧಿತ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. /// Karnataka Crime News – Karnataka News