ಧರ್ಮಸ್ಥಳ-ಹದಗೆಟ್ಟ ರಾಜಕೀಯಕ್ಕೆ ಬೇಸತ್ತು ದಂಪತಿ ಆತ್ಮಹತ್ಯೆ

0

Crime News (itskannada) ಧರ್ಮಸ್ಥಳ : ಹದಗೆಟ್ಟಿರುವ ರಾಜಕೀಯಕ್ಕೆ ಮನನೊಂದು ತಾವು ಆತ್ಮಹತ್ಯೆ ಮಾಡುಕೊಳ್ಳುತ್ತಿದ್ದೇವೆ  ಎಂದು ಡೆತ್ ನೋಟ್ ಬರೆದು ಹಾವೇರಿ ಜಿಲ್ಲೆ ಬ್ಯಾಡಗಿ ಮೂಲದ ದಂಪತಿಯು ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆಯು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಧರ್ಮಸ್ಥಳ-ಹದಗೆಟ್ಟ ರಾಜಕೀಯಕ್ಕೆ ಬೇಸತ್ತು ದಂಪತಿ ಆತ್ಮಹತ್ಯೆ

ಅವರ ಡೆತ್ ನೋಟ್ ನಲ್ಲಿ ತಿಳಿಸಿರುವಂತೆ ಈಗಿನ ರಾಜಕರಣವು ಭ್ರಷ್ಟಾಚಾರದಿಂದ ತುಂಬಿ ಹೋಗಿದೆ. ರಾಜಕೀಯದಲ್ಲಿ ಜನರು ಆಮಿಷಕ್ಕೆ ಒಳಗಾಗಿ ಯಾವುದೇ ನೀಚ ಕೃತ್ಯಕ್ಕೂ ಹೇಸುವುದಿಲ್ಲ, ಇದರಿಂದ ಮನನೊಂದು ತಾವು ಆತ್ಮಹತ್ಯೆ ಮಾಡುತ್ತಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿದ್ದಾರೆ, ಹಾಗು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಈ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಬರೆದಿದ್ದಾರೆ ಅದಕ್ಕಾಗಿ ನಾವು ಧರ್ಮಸ್ಥಳದಲ್ಲಿ ಆತ್ಮಹತ್ಯೆ ಮಾಡುತ್ತಿರುವುದಾಗಿ ಡೆತ್ ನೋಟ್ ನಲ್ಲಿ ತಿಳಿಸಿದ್ದಾರೆ. ಆತ್ಮಹತ್ಯೆಗೆ ಶರಣಾದವರನ್ನು ಹಾವೇರಿ ಜಿಲ್ಲೆ ಬ್ಯಾಡಗಿ ಮೂಲದ ಮೃತ್ಯುಂಜಯ ಹಾಗು ಅವರ ಪತ್ನಿ ನೇತ್ರಾವತಿ ಎಂದು ಗುರುತಿಸಲಾಗಿದೆ. ಇವರು ಬ್ಯಾಡಗಿ ಕ್ಷೇತ್ರದ ಕಾಂಗ್ರೆಸ್ ಆಭ್ಯರ್ಥಿ ಎಸ್.ಆರ್.ಪಾಟೀಲ್ ರ ಸಂಬಂಧಿಯಾಗಿರುತ್ತಾರೆ. /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – Mysore News Online- Karnataka Crime News – Kannada News