ಫೇಸ್ ಬುಕ್ ಜಗಳ ದಂಪತಿ ಸಾವಿನಲ್ಲಿ ಅಂತ್ಯ

fight for facebook end with husband and wife death

Kannada News (itskannada) Crime News : ಫೇಸ್ ಬುಕ್ ಜಗಳ ದಂಪತಿ ಸಾವಿನಲ್ಲಿ ಅಂತ್ಯ – fight for facebook end with husband and wife death

ಈ ಫೇಸ್ ಬುಕ್ ಇನ್ನೆನನ್ನೆಲ್ಲಾ ಮಾಡುತ್ತಪ್ಪಾ , ಎಲ್ಲಾ ಆಗೋಯ್ತು . ಸೋಶಿಯಲ್ ಮೀಡಿಯಾ ದಿಂದ ಪ್ಯಾರ್ , ಮದುವೆ , ಫೇಸ್ ಬುಕ್ ಪರಿಚಯ ಮದುವೆಯಲ್ಲಿ ಅಂತ್ಯ , ಫೇಸ್ ಬುಕ್ ಪರಿಚಯ 20 ಸಾವಿರ , 20 ಲಕ್ಷ ಮೋಸ. ಫೇಸ್ ಬುಕ್ ಪರಿಚಯದ ಗೆಳೆಯರನ್ನು ಬಳಸಿಕೊಂಡು ಸ್ವಂತ ಗಂಡನನ್ನೇ ಕೊಂದ ಹೆಂಡತಿ , ಭಿನ್ನಾಭಿಪ್ರಾಯ , ಕೊಲೆ ಎಲ್ಲವೂ ಮುಗಿದಾಯ್ತು . ..

ಫೇಸ್ ಬುಕ್ ಜಗಳ ದಂಪತಿ ಸಾವಿನಲ್ಲಿ ಅಂತ್ಯ

ಇವೆಲ್ಲದಕ್ಕೂ ಈ ಸ್ಟೋರಿ ವಿಭಿನ್ನವಾಗಿದೆ , ಸೌಮ್ಯ ಮತ್ತು ಅನುಪ್‌ ದಂಪತಿಗಳಿಗೆ ಫೇಸ್ ಬುಕ್ ಬಳಕೆ ಅಂದ್ರೆ ಅಷ್ಟಿಷ್ಟು ಇಷ್ಟವಲ್ಲ , ಒಬ್ಬರಿಗಿಂತ ಒಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ಪಾಸ್ಟ್ ಆಗಿದ್ದರು.

ಪ್ರಾರಂಭದಲ್ಲಿ ದಂಪತಿಗಳು ಅನ್ನೊನ್ಯವಾಗಿಯೇ ಇದ್ರು , ಅದೇನ್ ಬಂತೋ ಅದ್ಯಾರ್ ಕಣ್ ಬಿತ್ತೋ ಗೊತ್ತಿಲ್ಲ , ಇದೇ ಫೇಸ್ ಬುಕ್ ವಿಚಾರಕ್ಕೆ ಆಗಾಗ ಕಿರಿಕ್ ಸ್ಟಾರ್ಟ್ ಆಯ್ತು, ದಿನೇ ದಿನೇ ಇದು ಅತಿಆಗ್ತಾ ಬಂದು , ಇದೀಗ ಇದೇ ಫೇಸ್ ಬುಕ್ ಬಳಕೆಯ ವಿಚಾರವಾಗಿ ಗಂಡ ಹೆಂಡತಿಯಲ್ಲಿ ಜಗಳವಾಗಿ ಅದು ತಾರಕಕ್ಕೇರಿ ಇಬ್ಬರೂ ಬಾರದ ಲೋಕಕ್ಕೆ ಹೋಗಿದ್ದಾರೆ.

ಗಂಡ ಹೆಂಡತಿ ಇಬ್ಬರು ಬೇರೆ ಬೇರೆ ರೂಮ್ ನಲ್ಲಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ, ಅದು ಸಾಯೋ ವಯಸ್ಸೇನ್ರಿ , ತಿಳುವಳಿಕೆ ಇರೋ ಇವರೇ ಈಗೆ ಮಾಡಿದ್ರೆ , ಯುವ ಪೀಳಿಗೆಗೆ ಏನ್ ಸಂದೇಶ ಕೊಡೋದು . ಬದುಕಿ ಬಾಳ ಬೇಕಾದ ಇವರು  ಸತ್ತದ್ದು ದುಃಖಕ್ಕಿಂತ ಕೋಪ ಬರಿಸುತ್ತದೆ.

ಫೇಸ್ ಬುಕ್ , ಫೇಸ್ ಬುಕ್ ಅಂತ ಪ್ರಾಣ ಬಿಟ್ಟ ಇವರಂತೂ ಇಲ್ಲ , ಈಗ ಉಳಿದಿರೋದು ಅವ್ರು ಮಾಡಿರೋ ಪೋಸ್ಟು , ಕೊಟ್ಟಿರೋ ಲೈಕ್ಸು .. . . .

ಬಾಗಲಗುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಪೊಲೀಸರು ದೂರು ದಾಖಲಿಸಿದ್ದು ತನಿಖೆ ನಡೆಸಿದ್ದಾರೆ. ///

ಇದನ್ನು ಓದಿ : ಹುಬ್ಬಳ್ಳಿ : ಜೋಡಿ ಕೊಲೆ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿ

Karnataka Crime News – Karnataka Police News – Police News Kannada

Web : ಫೇಸ್ ಬುಕ್ ಜಗಳ ದಂಪತಿ ಸಾವಿನಲ್ಲಿ ಅಂತ್ಯ – fight for facebook end with husband and wife death