ಫೇಸ್ಬುಕ್ನಲ್ಲಿ ಸ್ನೇಹ ಬೆಳೆಸಿದ್ದ ವ್ಯಕ್ತಿಯಿಂದ 7.5 ಲಕ್ಷ ರೂ ವಂಚನೆ

FB friend dupes woman of over Rs 7 lac

0

Crime News : (itskannada) ಬೆಂಗಳೂರು: ಹಲವಾರು ಜನರೊಂದಿಗೆ ಸಂಪರ್ಕ ಸಾಧಿಸಲು ಸಾಮಾಜಿಕ ಮಾಧ್ಯಮವು ಒಂದು ವೇದಿಕೆಯಾಗಿದೆ, ಕೈ ಬೆರಳುಗಳ ಕ್ಷಿಪ್ರದಲ್ಲಿ ಎಲ್ಲಿಯೇ ಇದ್ದರೂ, ಕ್ಷಣಾರ್ದದಲ್ಲಿ  ಸಂಪರ್ಕಿಸ ಬಹುದಾದ ವೇದಿಕೆ ಇದಾಗಿದೆ. ಆದರೇ ಜನರು ಅಂತರ್ಜಾಲದಲ್ಲಿ ಸ್ನೇಹ ಬೆಳೆಸುವ ಮೊದಲು ಎಚ್ಚರಿಕೆಯಿಂದ ಇರುವುದು ಅವಶ್ಯಕವಾಗಿದೆ. ಕೆಲ ಕಿಡಿಗೇಡಿಗಳು ಇದನ್ನೇ ಸುಲಭವಾಗಿ ಹಣ ಗಳಿಸುವ ದಾರಿಯನ್ನಾಗಿ ಮಾಡಿಕೊಂಡು ಅಮಾಯಕರ ಸುಲಿಗೆಗೆ ಮುಂದಾಗಿದ್ದಾರೆ.

ಫೇಸ್ಬುಕ್ನಲ್ಲಿ ಸ್ನೇಹ ಬೆಳೆಸಿದ್ದ ವ್ಯಕ್ತಿಯಿಂದ 7.5 ಲಕ್ಷ ರೂ ವಂಚನೆ – Kannada Crime News

ಇದೇ ರೀತಿ ಬೆಂಗಳೂರಿನ ಮಹಿಳೆಯೊಬ್ಬಳು ಫೇಸ್ಬುಕ್ನಲ್ಲಿ ಸ್ನೇಹ ಬೆಳೆಸಿದ್ದ ವ್ಯಕ್ತಿಯಿಂದ 7.5 ಲಕ್ಷ ರೂ. ಮೊಸಹೋಗಿದ್ದಾಳೆ.

ಕುಮಾರಸ್ವಾಮಿ ಲೇಔಟ್ ನ ನಿವಾಸಿ ಮಹಾಲಕ್ಷ್ಮಿ ಆರ್ ಅವರು ಫೇಸ್ಬುಕ್ನಲ್ಲಿ ವಿಲಿಯಮ್ಸ್ ಮೊರ್ಗಾನ್ ಎಂಬ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಾರೆ. ಕಾಲಕ್ರಮೇಣ ಇಬ್ಬರು ಫೋನ್ ಮತ್ತು Whatsapp ಮೂಲಕ ಚಾಟ್ ಪ್ರಾರಂಭಿಸಿದರು. ಏತನ್ಮಧ್ಯೆ, ವಿಲಿಯಮ್ಸ್ 30,000 ಪೌಂಡ್ಸ್ ಸ್ಟರ್ಲಿಂಗ್ (ರೂ 27.77 ಲಕ್ಷ) ವರೆಗೆ ಮೌಲ್ಯವನ್ನು ಉಡುಗೊರೆಯಾಗಿ ಕಳುಹಿಸಿರುವುದಾಗಿ ಹೇಳಿದ್ದಾನೆ.

ಕೆಲವು ದಿನಗಳ ಬಳಿಕ ಮಾರ್ಚ್ 26 ರಂದು ಮಹಾಲಕ್ಷ್ಮಿ ಅವರು ಉಡುಗೊರೆಗಾಗಿ ಕಾಯುತ್ತಿದ್ದರು. ದೆಹಲಿ ಕಸ್ಟಮ್ಸ್ ಇಲಾಖೆಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ ಮಹಿಳೆಯೊಬ್ಬಳ ಕರೆಯೊಂದು ಬಂದಿತ್ತು. ಮಹಾಲಕ್ಷ್ಮಿಗೆ ತಾವು ಪಾರ್ಸೆಲ್ ಪಡೆದಿರುವುದಾಗಿ ಮತ್ತು ಉಡುಗೊರೆಗಳನ್ನು ಪಡೆಯಲು ಅವರು 7.5 ಲಕ್ಷ ರೂಪಾಯಿ ಮೊತ್ತವನ್ನು ಪಾವತಿಸಬೇಕೆಂದು ಆ ಮಹಿಳೆ ಮಹಾಲಕ್ಷ್ಮಿಗೆ ತಿಳಿಸಿದ್ದಳು.

ಮಹಾಲಕ್ಷ್ಮಿ ಮೊತ್ತವನ್ನು ಮಹಿಳೆ ನೀಡಿದ ಬ್ಯಾಂಕ್ ಖಾತೆ ಸಂಖ್ಯೆಗೆ ಜಮಮಾಡಿದ್ದಾರೆ ಆದರೆ ನಿರೀಕ್ಷಿತ ಉಡುಗೊರೆಯು ಅವರಿಗೆ ತಲುಪಲಿಲ್ಲ. ನಂತರ ಅವರು ಮೋರ್ಗನ್ ನನ್ನು ಸಂಪರ್ಕಿಸಲು ಪ್ರಯತ್ನಿಸಿದರು, ಆದರೆ ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿರುವುದನ್ನು ಕಂಡುಕೊಂಡರು.

ಮಹಾಲಕ್ಷ್ಮಿರವರಿಗೆ ಅಷ್ಟೊತ್ತಿಗಾಗಲೇ ತಾನು ಮೊಸಹೊಗಿರುವುದಾಗಿ ತಿಳಿಯಿತು . ಸದ್ಯ ಈ ಬಗ್ಗೆ ಮಹಾಲಕ್ಷ್ಮಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಈ ವಿಷಯದಲ್ಲಿ ಸೈಬರ್-ಅಪರಾಧ ಪೊಲೀಸರು ವಿಲಿಯಮ್ಸ್ ಮೊರ್ಗಾನ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. || Karnataka Crime News

ಯಡಿಯೂರಪ್ಪಗಿಂತ-ಸಿದ್ದರಾಮಯ್ಯ ಉತ್ತಮ ಎಂದ ನಟ ಪ್ರಕಾಶ್ ರೈ

You're currently offline