ಸಾಲದ ಬಾಧೆಗೆ ಮಗಳನ್ನೇ ಕೊಂದ ಕಟುಕ ಅಪ್ಪ..!

Father Kills Daughter For Debt Relief In Yellapur

0

ಸಾಲದ ಬಾಧೆಗೆ ಮಗಳನ್ನೇ ಕೊಂದ ಕಟುಕ ಅಪ್ಪ..!

Father Kills Daughter For Debt Relief In Yellapur

ಯಲ್ಲಾಪುರ : ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿಗಳೇ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸಾಲದ ಬಾಧೆಗೆ ಒಳಗಾಗಿ ಹೆತ್ತ ಮಗಳನ್ನೇ ಕ್ರೂರವಾಗಿ ಕೊಂದ ತಂದೆಯ ಪ್ರಕರಣವೊಂದು ಇದೀಗ ಸುದ್ದಿಯಾಗಿದೆ .
ಹೌದು, ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಮಗಳನ್ನು ಹತ್ಯೆಗೈದ ಅಮಾನವೀಯ ಘಟನೆ ವರದಿಯಾಗಿರುವುದು ಯಲ್ಲಾಪುರದಲ್ಲಿ.  ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಮಗಳನ್ನು ತಂದೆಯೇ ಹತ್ಯೆಗೈದ ಅಮಾನವೀಯ ಘಟನೆ ಯಲ್ಲಾಪುರ ಕುಂಬ್ರಿಯಲ್ಲಿ ನಡೆದಿದೆ. ಈ ಬಗ್ಗೆ ಇದೀಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಉತ್ತರ ಕನ್ನಡ ದಾದ್ಯಂತ ಇದು ದೊಡ್ಡ ಸುದ್ದಿಯಾಗಿ ಹಬ್ಬಿದೆ.
 ಹೃದಯ ಕಾಯಿಲೆ ಇಂದ ಬಳಲುತ್ತಿದ್ದ ನಯನಾಳ ಚಿಕಿತ್ಸೆಗಾಗಿ ಆಕೆಯ ತಂದೆ ನಾಗರಾಜ್ ಪೂಜಾರ್ ಸಾಕಷ್ಟು ವೆಚ್ಚ ಮಾಡಿದ್ದ. ದಾನಿಗಳು ನೀಡಿದ ಹಣದ ಜತೆಗೆ ಸಾಲ ಮಾಡಿ ಚಿಕಿತ್ಸೆ ಕೊಡಿಸಿದ್ದ. ಆದರೆ ಮಗಳಿಗೆ ವೆಚ್ಚ ಮಾಡಿದ್ದ ಸಾಲದ ಹೊರೆಯನ್ನು ತಲೆಗೆ ಹಚ್ಚಿಕೊಂಡಿದ್ದ ಆತ, ಪತ್ನಿಗೆ ಹಿಂಸೆ ನೀಡುತ್ತಿದ್ದನಂತೆ. ಇದರಿಂದ, ಪತ್ನಿ, ಮಕ್ಕಳು ಹಾಗೂ ಗಂಡನನ್ನು ಬಿಟ್ಟು ನಾಲ್ಕು ತಿಂಗಳ ಹಿಂದೆ ಮನೆ ತೊರೆದಿದ್ದಳು.
 ಆದರೆ ಕೆಲವು ತಿಂಗಳ ಹಿಂದೆ ಕಾರವಾರ ಮಹಿಳಾ ಸಂಘಟನೆ, ಪತಿ ಮತ್ತು ಪತ್ನಿ ಹಾಗೂ ಮಕ್ಕಳೊಂದಿಗೆ ಕೌನ್ಸಿಲಿಂಗ್ ಮಾಡಿದ್ದರು. ಈ ವೇಳೆ ಮಕ್ಕಳು ತಾಯಿ ಬೇಕೆಂದು ತಿಳಿಸಿದ್ದು ಮಕ್ಕಳ ಹೇಳಿಕೆಯಿಂದ ಸಿಟ್ಟಾಗಿದ್ದ ಎನ್ನಲಾಗಿದೆ.
 ನಾಗರಾಜ ಜ.5ರಂದು ರಾತ್ರಿ ಇಬ್ಬರು ಮಕ್ಕಳಾದ ನಯನಾ ಹಾಗೂ ಸಹನಾಳಿಗೆ ಹೊಡೆದು ಗಾಯಗೊಳಿಸಿದ್ದ. ಪುನಃ ಬುಧವಾರ ಕೂಡ ನಯನಾಳಿಗೆ ಸಿಟ್ಟಿನಿಂದ ಹೊಡೆದು ಕೊಲೆ ಮಾಡಿರುವುದಾಗಿ ವರದಿಯಾಗಿದ್ದು ,ಈ ಕುರಿತಾಗಿ ದೂರು ದಾಖಲಾಗಿದೆ.//// ಗಣೇಶ ಜೋಶಿ , ಕಾರವಾರ

WebTitle : ಸಾಲದ ಬಾಧೆಗೆ ಮಗಳನ್ನೇ ಕೊಂದ ಕಟುಕ ಅಪ್ಪ..! – Father Kills Daughter For Debt Relief In Yellapur

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್ : Karnataka Crime NewsKannada Crime News