ಧಮ್ ಮಾರೋ ಧಮ್-ಸಿಗರೇಟ್ ವಿಚಾರಕ್ಕೆ ಡಬಲ್ ಮರ್ಡರ್

0 80

Kannada News(itskannada) Crime News ಧಮ್ ಮಾರೋ ಧಮ್-ಸಿಗರೇಟ್ ವಿಚಾರಕ್ಕೆ ಡಬಲ್ ಮರ್ಡರ್

ಅವನು ಅಂಗಡಿಯಲ್ಲಿ ಸಿಗರೇಟ್ ತೆಗೆದುಕೊಂಡು ಸೇದಿದ್ದೇನೋ ಸರಿ , ಆದರೆ ಆ ಸಿಗರೇಟ್ ಗೆ ರೊಕ್ಕ ಕೊಟ್ಟಿದ್ದರೆ , ಇಬ್ಬರ ಜೀವ ಉಳಿಯುತ್ತಿತ್ತೇನೋ. ಸಿಗರೇಟ್‍ ವಿಚಾರಕ್ಕೆ ನಡೆದ ಗಲಾಟೆ ತಾರಕಕ್ಕೇರಿ ಇಬ್ಬರ ದಾರುಣ ಕೊಲೆಯಲ್ಲಿ ಅಂತ್ಯವಾಗಿದೆ. ಈ ದುರ್ಘಟನೆ  ಬೆಂಗಳೂರು ಕೆಜಿ ಹಳ್ಳಿ ಗೋವಿಂದಪುರ  ಮುಖ್ಯರಸ್ತೆಯಲ್ಲಿ ನಡೆದಿದ್ದು ಸಿಗರೇಟ್  ಖರೀದಿಸಿ ರೊಕ್ಕ ಕೊಡದವರು ಸಧ್ಯ ಪ್ರಾಣ ಕಳೆದು ಕೊಂಡಿದ್ದಾರೆ.

ಧಮ್ ಮಾರೋ ಧಮ್-ಸಿಗರೇಟ್ ವಿಚಾರಕ್ಕೆ ಡಬಲ್ ಮರ್ಡರ್

ಇಲ್ಲಿನ ಗೋವಿಂದಪುರ ರಸ್ತೆಯಲ್ಲಿರೋ ಪೆಟ್ಟಿ ಅಂಗಡಿಯಲ್ಲಿ ಅಮೀನ್ ಸಿಗರೇಟ್ ಸೇದಿ ಹಣ ನೀಡದೆ ಹೋಗುವುದನ್ನು ಗಮನಿಸಿದ ಅಂಗಡಿ ಮಾಲೀಕ ಸಿಗರೇಟ್ ನ ಹಣ ಕೇಳಿದ್ದಾನೆ, ಅದನ್ನೇ ತಪ್ಪು ಎಂದು ಅಮೀನ್ ಅಂಗಡಿ ಮಾಲಿಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ.

ಅಂಗಡಿ ಮಾಲಿಕನಿಗೆ ಥಳಿಸಿದ ವಿಚಾರ ಅದಾಗಲೇ ಕಾಡ್ಗಿಚ್ಚಿನಂತೆ ಹರಡಿ , ಅವರ ಸಂಬಂಧಿಕರು ಸ್ಥಳಕ್ಕೆ ದೌಡಾಯಿಸಿದ್ದಾರೆ, ಬರ ಬರುತ್ತಿದ್ದಂತೆ ಮೊದಲೇ ತಂದಿದ್ದ ಮಚ್ಚು ದೊಣ್ಣೆಗಳು ಅಲ್ಲಿ ಮಾತನಾಡಲು ಆರಂಭಿಸಿದೆ.

ಅಮೀನ್ ಹಾಗೂ ಅವನ ಸ್ನೇಹಿತ ಮತಿನ್ ಮತ್ತು ಅಂಗಡಿ ಮಾಲಿಕನ ಸಂಭಂದಿಕರ ನಡುವೆ ಮಾರಾಮಾರಿಯಲ್ಲಿ ,ಅಮೀನ್ ಸ್ಥಳದಲ್ಲೇ ಪ್ರಾಣ ಬಿಟ್ಟರೆ, ಮತಿನ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮದ್ಯೆ ಅಸುನಿಗಿದ್ದಾನೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿರುವ ಕೆಜಿ ಹಳ್ಳಿ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಸಿಗರೇಟ್ ವಿಚಾರವಾಗಿ ನಡೆದಿರುವ ಈ ಡಬಲ್ ಮರ್ಡರ್ ಗೆ ಬೆಂಗಳೂರು ಮತ್ತೆ ಬಿಚ್ಚಿ ಬಿದ್ದಿದೆ. ///

ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – Karnataka Crime NewsKarnataka News

Web : ಧಮ್ ಮಾರೋ ಧಮ್-ಸಿಗರೇಟ್ ವಿಚಾರಕ್ಕೆ ಡಬಲ್ ಮರ್ಡರ್ – 2 persons got murdered after fighting for cigarette Money in Bangalore

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!