ಹುಬ್ಬಳ್ಳಿ : ಜೋಡಿ ಕೊಲೆ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿ

Double murder case accused arrested

Kannada News (itskannada) Crime News – ಹುಬ್ಬಳ್ಳಿ : ಜೋಡಿ ಕೊಲೆ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿ :.

ಹುಬ್ಬಳ್ಳಿ ನಗರವನ್ನು ಬೆಚ್ಚಿಬೀಳಿಸಿದ್ದ ಪ್ರಕರಣವನ್ನು ಕೊನೆಗೂ ಶಹರ ಪೋಲಿಸ್ ಠಾಣೆ ಪೊಲೀಸರು ಭೇದಿಸಿ ಕೊಲೆಗೆ ಸಂಬಂಧಿಸಿದಂತೆ  ನಾಲ್ವರನ್ನು ಬಂಧಿಸಿದ್ದಾರೆ. ಇರ್ಷಾದ್ ಮಿಶ್ರಿಕೊಟಿ, ಮೋಹಸೀನ್ ನವಲೂರು ,ಅಖಿಲ ಬೇಪಾರಿ , ಮತ್ತು ವಿರೇಶ ಸೊಟ್ನಾಳ್ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರೆಲ್ಲರೂ ನಗರದ ನಿವಾಸಿಗಳಾಗಿದ್ದು, ಬಂಧಿತರಿಂದ ಕೃತ್ಯಕ್ಕೇ ಬಳಸಿದ್ದ ಚಾಕು, ಎರಡು ಬೈಕ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೇವಲ ಹತ್ತು ಸಾವಿರ ರೂಪಾಯಿ ಹಣಕಾಸು ದ್ವೇಷಕ್ಕೆ ಕೊಲೆ ಮಾಡಿರುವುದಾಗಿ ಬಂಧಿತರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ, ಹಾಗೂ ಹಳೆ ವೈಷಮ್ಯದ ಹಿನ್ನಲೆಯಲ್ಲಿ ಆರೋಪಿಗಳು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಅಲ್ಲದೆ ಈ ಕೊಲೆಯ ಸುತ್ತಾ ಪ್ರೇಮ ಪ್ರಕರಣದ ಸುಳಿಯು ಇದ್ದು , ಪೋಲೀಸರ ತನಿಖೆಯಿಂದಷ್ಟೇ ಹೊರಬರಬೇಕಾಗಿದೆ.

ಜೂನ್ 8 ರ ಮಧ್ಯರಾತ್ರಿ ಜೆ ಸಿ ನಗರದ ಅಜಂತಾ ಹೊಟೇಲ್ ಬಳಿ ನಡೆದಿದ್ದ ಗಲಾಟೆಯಲ್ಲಿ ಮಹಮ್ಮದ್ ಪೈರೋಜ್ ಮತ್ತು ರಿಯಾಜ್ ಸವಣೂರು ಕೊಲೆಯಾದವರು. ಅವಳಿನಗರ ಪೊಲೀಸ್ ಆಯುಕ್ತ ಎಂ. ಎನ್ ನಾಗರಾಜ ಅವರು ಆರೋಪಿಗಳನ್ನು ಪತ್ತೆ ಹಚ್ವಿದಕ್ಕಾಗಿ ಪೊಲೀಸ್ ತಂಡಕ್ಕೆ ಹತ್ತು ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ. /// Karnataka Crime News – Police News Kannada