ಧಾರವಾಡ | ಚಿಕ್ಕ ವಿಷಯಕ್ಕೆ ಆತ್ಮಹತ್ಯೆ ಮಾಡಿಕೊಂಡ ಎಂಜಿನಿಯರಿಂಗ್ ವಿಧ್ಯಾರ್ಥಿ

0 60

Kannada News (itskannada) Crime News : ಧಾರವಾಡ | ಚಿಕ್ಕ ವಿಷಯಕ್ಕೆ ಆತ್ಮಹತ್ಯೆ ಮಾಡಿಕೊಂಡ ಎಂಜಿನಿಯರಿಂಗ್ ವಿಧ್ಯಾರ್ಥಿ-Dharwad-Engineering student commits suicide : ಆತ್ಮಹತ್ಯೆ ಮಾಡಿಕೊಂಡ ಆ ದುರ್ದೈವಿಯನ್ನು ಪೂರ್ಣಿಮಾ ಎನ್ನಲಾಗಿದೆ, ಬಿವಿಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 6ನೇ ಸೆಮ್ ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ತಾನು ಬೆಂಗಳೂರಿಗೆ ಹೋಗಿ ವ್ಯಾಸಂಗ ಮಾಡಬೇಕು , ನನ್ನನ್ನ ಕಳುಹಿಸಿ ಕೊಡಿ ಎಂದು ತನ್ನ ತಂದೆಯವರನ್ನ ಕೇಳಿದ್ದಾಳೆ , ಅವರೇನು ಬೇಡ ಅನ್ನಲಿಲ್ಲ , ಆಯ್ತಮ್ಮ ನಿನ್ನ ಎಂಜಿನಿಯರಿಂಗ್ ಮುಗಿಯಲಿ ಎಂದು ತಾಳ್ಮೆಯಿಂದಲೇ ಹೇಳಿದ್ದಾರೆ.

ಆದರೆ ಪೂರ್ಣಿಮಾ ಈ ಚಿಕ್ಕ ವಿಷಯಕ್ಕೆ ದೊಡ್ಡದಾದ ನಿರ್ಧಾರಕ್ಕೆ ಬರಬಹುದು ಎಂದು ಅವರ ಪೋಷಕರಿಗೆ ಗೊತ್ತಿರಲಿಲ್ಲ. ಇದನ್ನೇ ಮನಸ್ಸಿಗೆ ಹಾಕಿಕೊಂಡ ಪೂರ್ಣಿಮಾ ಇಲ್ಲಿನ ಚರಂತಿಮಠ ಗಾರ್ಡನ್ ನಲ್ಲಿರುವ ತಮ್ಮ ನೀಲಗಂಗಾ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತುರದ ನಿರ್ಧಾರದಿಂದ ಪ್ರಾಣ ಕಳೆದುಕೊಂಡು ಪೋಷಕರು ಬದುಕಿದ್ದೂ ನರಳುವ ಹಾಗೆ ಮಾಡಿಬಿಟ್ಟಿದ್ದಾಳೆ. ವಿಧ್ಯಾವಂತಳೂ ಬುದ್ದಿವಂತಳೂ ಆದ ಆಕೆ ಈರೀತಿ ಆತುರದ ನಿರ್ಧಾರಕ್ಕೆ ಬರಬಾರದಿತ್ತು.

ಆಗಿದ್ದೇನು ?

ಪೂರ್ಣಿಮಾ ಅವರು ಹುಬ್ಬಳ್ಳಿಯ ಬಿವಿಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು, ತನ್ನ ಮುಂದಿನ ಉನ್ನತ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ತೆರಳುವ ಕುರಿತು ತಮ್ಮ ತಂದೆ ಶಿವಶಂಕರ ಅವರೊಂದಿಗೆ ಶನಿವಾರ ರಾತ್ರಿ ಚರ್ಚಿಸಿದ್ದಳು.  ಆದರೆ ವ್ಯಾಸಂಗ ಮುಗಿಯಲು ಇನ್ನೂ ಸಮಯವಿತ್ತು , ಪೋಷಕರು ಎಂಜಿನಿಯರಿಂಗ್ ಪದವಿ ಮುಗಿದ ಮೇಲೆ ನೋಡೋಣ ಎಂದು ಸಮಜಾಯಿಸಿ ನೀಡಿದ್ದರು. ಇಷ್ಟಕ್ಕೆ ಮನನೊಂದು ಪ್ರೀತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ –Dharwad –  Dharwad News Online – Karnataka Crime NewsKarnataka News

WebTitle : Dharwad-Engineering student commits suicide – ಚಿಕ್ಕ ವಿಷಯಕ್ಕೆ ಆತ್ಮಹತ್ಯೆ ಮಾಡಿಕೊಂಡ ಎಂಜಿನಿಯರಿಂಗ್ ವಿಧ್ಯಾರ್ಥಿ

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!