ಧಾರವಾಡ – ಅಪಘಾತಕ್ಕೆ ವಿದ್ಯಾರ್ಥಿ ಬಲಿ

0 57

Kannada News (itskannada) Dharwad : ಅಪಘಾತಕ್ಕೆ ವಿದ್ಯಾರ್ಥಿ ಬಲಿ – ಧಾರವಾಡ :ಮುಮ್ಮಿಗಟ್ಟಿ ಬಳಿ ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ  ಕರಿಯಪ್ಪ ನಾಯ್ಕರ ಎಂಬ ವಿದ್ಯಾರ್ಥಿ  ಸಾವನ್ನಪ್ಪಿದ್ದಾನೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಅಲ್ಲದೇ ರಸ್ತೆ ಮಧ್ಯೆ ಶವ ಇಟ್ಟುಕೊಂಡು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.

ಅಪಘಾತಕ್ಕೆ ವಿದ್ಯಾರ್ಥಿ ಬಲಿ – ಧಾರವಾಡ

ಹಲವಾರು ಬಾರಿ , ಸೇತುವೆ ನಿರ್ಮಿಸುವಂತೆ ಮನವಿ ಮಾಡಿದ್ದರೂ ತಲೆಕೆಡಿಸಿ ಕೊಳ್ಳದ ಅಧಿಕಾರಿಗಳು ಈ ಸಾವಿಗೆ ಕಾರಣವೆಂದು ಅವರು ದೂರಿದ್ದಾರೆ. ಡಿನವು ಇಲ್ಲಿ ಜೀವ ಭಯದಿಂದ ರಸ್ತೆ ದಾಟಬೇಕು , ಮಕ್ಕಳು ಹಾಗೂ ಹಿರಿಯರು ರಸ್ತೆ ದಾಟುವುದು ಸಾಹಸ ಪಡಬೇಕು , ಅಲ್ಲದೆ ಇಲ್ಲಿ ರಭಸವಾಗಿ ಬರುವ ವಾಹನಗಳಿಗೆ ಈ ರೀತಿ ಬಲಿಯಾಗಬೇಕೆಂದು ಅಕ್ರೋಶ ವ್ಯಕ್ತ ಪಡಿಸಿದರು.

ಪ್ರತಿಭಟನಾ ಕಾರರು ತಿಳಿಸಿದಂತೆ , ಅಲ್ಲಿ ಸೇತುವೆ ನಿರ್ಮಿಸುವಂತೆ , ಈ ಬಗ್ಗೆ ಸಂಬಂದ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರಂತೆ , ಆದರೆ ಮನವಿಗೆ ಕಿಂಚಿತ್ತೂ ಮನ್ನಣೆ ನೀಡದ ಅಧಿಕಾರಿಗಳು ಸುಮ್ಮನಿದ್ದಾರಂತೆ.

ಈ ಸಂಭಂದ ಇಂದು ರೊಚ್ಚಿಗೆದ್ದ ಗ್ರಾಮಸ್ಥರು , ಮೃತ ಪಟ್ಟ ವಿಧ್ಯರ್ಥಿಯ ಶವವನ್ನು ನಡು ರಸ್ತೆಯಲ್ಲೇ ಇಟ್ಟು ಪ್ರತಿಭಟಿಸಿದರು.

ದಿಡೀರ್ ಪ್ರತಿಭಟನೆಯಿಂದಾಗಿ ರಸ್ತೆ ಎರಡೂ ಬದಿಯೂ ವಾಹನ ಸಂಚಾರ ಪೂರ್ಣ ಅಸ್ತವ್ಯಸ್ತವಾಗಿತ್ತು, ಸುಮಾರು ಒಂದೂ ಕಿ.ಮೀ ವರೆವಿಗೂ ಟ್ರಾಫಿಕ್ ಜಾಮ್ ಸಂಭವಿಸಿ ವಾಹನಗಳು ಘಂಟೆಗೂ ಅಧಿಕ ನಿಂತಲ್ಲೇ ನಿಂತಿದ್ದವು.

ಗ್ರಾಮಸ್ಥರು ಸೇತುವೆ ನಿರ್ಮಿಸಬೇಕೆಂದು ಆಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ  ಪೋಲೀಸರು  ಸ್ಥಳಕ್ಕೆ ಆಗಮಿಸಿ , ಪ್ರತಿಭಟನಾಕಾರರನ್ನು ಮನವಲಿಸಿ , ಘಟನೆಗೆ ಸಂಭಂದಿಸಿದಂತೆ ಪಡೆದುಕೊಂಡಿದ್ದಾರೆ.. ///// Karnataka Crime News – Kannada crime News – Police News Kannada –  Dharwad News Online

 

Webtitle : ಅಪಘಾತಕ್ಕೆ ವಿದ್ಯಾರ್ಥಿ ಬಲಿ – ಧಾರವಾಡ

Key word : Dharwad accident News Kannada , ಧಾರವಾಡ ಆಕ್ಸಿಡೆಂಟ್ ನ್ಯೂಸ್ , ಧಾರವಾಡ ಅಪಘಾತ ಸುದ್ದಿ , Dharwad accident today . ಧಾರವಾಡ ಪ್ರತಿಭಟನೆ , ಧಾರವಾಡ ವಿಧ್ಯಾರ್ಥಿ ಸಾವು , Dharwad accident student Death

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!