ವ್ಯಭಿಚಾರಕ್ಕಾಗಿ ಸಂಪರ್ಕಿಸಿ-ಪತ್ನಿಯ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ ಪತಿ

Contact for Adultery-A husband posted in wife's Facebook page

Kannada News (itskannada) Crime News : ವ್ಯಭಿಚಾರಕ್ಕಾಗಿ ಸಂಪರ್ಕಿಸಿ-ಪತ್ನಿಯ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ ಪತಿ – Contact for Adultery-A husband posted in wife’s Facebook page : ಎಂದಿನಂತೆ ತನ್ನ ಫೇಸ್ ಬುಕ್ ಖಾತೆ ನಿರ್ವಹಿಸುತ್ತಿದ್ದ ಆ ಹುಡುಗಿಗೆ ಅಂದು ಅಚ್ಚರಿ , ಕೋಪ ದಿಗ್ಭ್ರಮೆ ಎಲ್ಲವೂ ಕಾಡಿತ್ತು , ಕಾರಣ ಇದ್ದಕ್ಕಿದ್ದಂತೆ ಅವಳ ಮೊಬೈಲ್ ಸಂಖೆಗೆ ಕಾಲ್  ಮಾಡಿದ ಕೆಲವರು , ಆಕೆಯನ್ನು ವ್ಯಭಿಚಾರಕ್ಕೆ ಬರುವಂತೆ ಕೇಳಿದರೂ , ಇದು ಆಗೇ ಮುಂದುವರೆಯಿತು ಅಶ್ಲೀಲ  ಸಂಭಾಷಣೆ ಮಾಡುತ್ತಿದ್ದ ಪೋಲಿಗಳು ಈಕೆಯನ್ನು ಹಿಂಸಿಸಲು ಶುರುಮಾಡಿದರು , ಅದರಲ್ಲೊಬ್ಬ ಮಾತನಾಡಿ ನಿಮ್ಮ ನಂಬರ್ ವೆಬ್ ಸೈಟ್ ಅಲ್ಲಿ ಇತ್ತು , ವ್ಯಭಿಚಾರಕ್ಕಾಗಿ ಸಂಪರ್ಕಿಸಿ ಎಂದು ನಮೂದಾಗಿದ್ದನ್ನು ಹೇಳಿದನು , ಹುಡುಗಿಗೆ ನಿಂತಲ್ಲೇ ಕುಸಿದಂತಾಯಿತು , ತಿವ್ರ ಶಾಕ್ ಗೆ ಹೊಳಗಾದ ಅವಳಿಗೆ ಏನ್ ಮಾಡಬೇಕು ಎಂದು ಗೊತ್ತಾಗಲೆಯಿಲ್ಲ.

ದೈರ್ಯ ಮಾಡಿದ ಆಕೆ , ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದಳು , ಸ್ಪಂದಿಸಿದ ಪೊಲೀಸರು ದೂರು ದಾಖಲಿಸಿ ತನಿಖೆ ಕೈಗೊಂಡರು .

ಈ ವಿಚಾರವಾಗಿ ಶಿವಮೊಗ್ಗದ ತಿರ್ಥಹಳ್ಳಿಯ ವಿನ್ನಿ( ವಿನಯ್ ) ಎಂಬುವನನ್ನು ಸೈಬರ್ ಪೊಲೀಸರು ಬಂದಿಸಿದರು , ಅವನೇ ಈ ಕೃತ್ಯಕ್ಕೆ ಕಾರಣವೆಂದು ಪೊಲೀಸರಿಗೆ ತಿಳಿದಾಗಿತ್ತು,

ವ್ಯಭಿಚಾರಕ್ಕಾಗಿ ಸಂಪರ್ಕಿಸಿ-ಪತ್ನಿಯ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ ಪತಿ

ಬಂಧಿತ ವಿನ್ನಿ ಬೇರಾರು ಅಲ್ಲ , ದೂರು ನೀಡಿದಾಕೆಯ ಪತಿಯೇ ಆಗಿದ್ದ.  ಇಬ್ಬರು ಇತ್ತೀಚಿಗೆ ಕೌಟುಂಬಿಕ ಕಲಹದಿಂದ ಬೇರೆ ಬೇರೆ ವಾಸವಿದ್ದರು. ಹೇಗಾದರೂ ಮಾಡಿ ಅವಳ ವಿರುದ್ದ ಸೇಡು ತಿರಿಸಿ ಕೊಳ್ಳಲು ಈ ಪತಿರಾಯ ಫೇಸ್ ಬುಕ್ ನಲ್ಲಿ ನಖಲಿ ಖಾತೆ ತೆರೆದು ಸಿಕ್ಕ ಸಿಕ್ಕವರಿಗೆಲ್ಲಾ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ, ಆ ಫೇಸ್ ಬುಕ್ ಖಾತೆಯಲ್ಲಿ , ಅವನ ಹೆಂಡತಿಯ ಫೋನ್ ನಂಬರ್ ನಮೂದಿಸಿ –  ವ್ಯಭಿಚಾರಕ್ಕಾಗಿ ಸಂಪರ್ಕಿಸಿ ಎಂದು ಪೋಸ್ಟ್ ಮಾಡಿದ. ಇಷ್ಟೇ ನಡೆದಿದ್ದು , ತದನಂತರ ತೀವ್ರ ಮಾನಸಿಕ ಹಿಂಸೆ ಅನುಭವಿಸಿದ್ದು ಪಾಪ ಆ  ಹೆಣ್ಣುಮಗಳು. ಈ ತನ್ನ ನೀಚ ಪತಿಯೇ ಇದಕ್ಕೆ ಕಾರಣ ಎಂದು ತಿಳಿದು ಇನ್ನೂ ಮಾನಸಿಕವಾಗಿ ಕುಗ್ಗಿಹೊದಳು.ಸಧ್ಯ ಸೈಬರ್ ಕ್ರೈಂ ಪೋಲಿಸರು ವಿಚಾರಣೆ ಮುಂದುವರೆಸಿದ್ದು ತನಿಖೆ ನಡೆಸುತ್ತಿದ್ದಾರೆ. \\\ ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – Karnataka Crime News – Karnataka news

WebTitle : ವ್ಯಭಿಚಾರಕ್ಕಾಗಿ ಸಂಪರ್ಕಿಸಿ-ಪತ್ನಿಯ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ ಪತಿ-Contact for Adultery-A husband posted in wife’s Facebook page