ಎಲೆಕ್ಟ್ರಾನಿಕ್ ಸಿಟಿ : ಬಿಎಂಟಿಸಿ ಬಸ್ ನಲ್ಲಿ ಕೊಲೆ-ಕೊಲೆಗಾರರ ಬಂಧನ

0 360

Kannada News (itskannada) crime News : ಎಲೆಕ್ಟ್ರಾನಿಕ್ ಸಿಟಿ : ಬಿಎಂಟಿಸಿ ಬಸ್ ನಲ್ಲಿ ಕೊಲೆ-ಕೊಲೆಗಾರರ ಬಂಧನ :

ಬಿಎಂಟಿಸಿ ಬಸ್ನಲ್ಲಿ ಬರ್ಬರವಾಗಿ ಹತ್ಯೆ ಮಾಡಿದ ಅಂತರರಾಜ್ಯದ ಡಕಾಯಿತರ ಬಂಧನ ಮಾಡಿದ್ದಾರೆ. ಅವರಿಂದ ಹನ್ನೆರಡು ಲಕ್ಷ ರೂ ಮೌಲ್ಯದ ವಿವಿಧ ಕಂಪನಿಯ ಐವತ್ತು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ವಿಶೇಷ ತಂಡಗಳನ್ನು ರಚಿಸಿದ್ದ ಪೊಲೀಸರು ಅಂತು ನಟೋರಿಯಸ್ ಕೊಲೆಗಾರರ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆದರಿಕೆ , ಡಕಾಯಿತಿ , ಕೊಲೆಗಳಂತಹ ಭೀಕರ ಚಟುವಟಿಕೆಯ ಗ್ಯಾಂಗ್ ಈಗ ಜೈಲುಟಕ್ಕೆ ತಟ್ಟೆ ಹುಡುಕುತ್ತಿದೆ.

ಎಲೆಕ್ಟ್ರಾನಿಕ್ ಸಿಟಿ : ಬಿಎಂಟಿಸಿ ಬಸ್ ನಲ್ಲಿ ಕೊಲೆ-ಕೊಲೆಗಾರರ ಬಂಧನ

ಎಲೆಕ್ಟ್ರಾನಿಕ್ ಸಿಟಿ : ಬಿಎಂಟಿಸಿ ಬಸ್ ನಲ್ಲಿ ಕೊಲೆ-ಕೊಲೆಗಾರರ ಬಂಧನ-itskannada
ಕೊಲೆಯಾದ ಸುರೇಶ್
ಎಲೆಕ್ಟ್ರಾನಿಕ್ ಸಿಟಿಯ ಕೋನಪ್ಪನ ಅಗ್ರಹಾರ ಬಸ್ ನಿಲ್ದಾಣದಲ್ಲಿ ದಿನಾಂಕ 21.03.2018 ರಂದು ಬೆಳ್ಳಿಗೆ 9.20ಕ್ಕೆ ಬಿಎಂಟಿಸಿ ಬಸ್ ನಲ್ಲಿ ಕೊಲೆ ಮಾಡಿದ್ದರು. ಬಸ್ ನಂ ಕೆಎ 53 ಎಫ್ 275 ನಲ್ಲಿ ಮೂರು ಜನ ಆರೋಪಿಗಳು ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿದ್ದರು. ನಂತರ ಸುರೇಶ್ ಎಂಬುವನಿಗೆ ಚಾಕುಗಳಿಂದ ಹೊಟ್ಟೆ ಎದೆಯ ಭಾಗ ಕೈಗಳ ಮೇಲೆ ಬೆನ್ನು ಹಾಗೂ ಮೈಮೇಲೆ ಎಲ್ಲೆಂದರಲ್ಲಿ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದರು .ಕೊಲೆಯಾದ ಸುರೇಶ್ ಅವರ ಮಗನಾದ ರವೀಂದ್ರ ಕುಮಾರ್ ಅವರ ದೂರಿನ ಮೇರೆಗೆ 143. 144. 147. 148.302 ಸಹಿತ149 ಐಪಿಸಿ ರೀತ್ಯಾ ಪ್ರಕರಣ ದಾಖಲು  ಮಾಡಿಕೊಂಡಿದ್ದರು.
ಈ ಒಂದು ಪ್ರಕರಣ ಕುರಿತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು .ದಿನಾಂಕ 5.06.2018 ರಂದು ದಸ್ತಗಿರಿ ಮಾಡಿ ವಿಚಾರಣೆ ನಡೆಸುತ್ತಾರೆ. ಆಗ ಮೂಲತಃ ಆಂಧ್ರ ಮೂಲದವರಾಗಿದ್ದು 3 ಜನ ಒಂದೇ ಗ್ಯಾಂಗಿನಲ್ಲಿ ಕೆಲಸ ಮಾಡುತ್ತಿದ್ದರು. ಇವರು ಹಳೆಯ ದ್ವೇಷದ ಹಿನ್ನೆಲೆ ಕೊಲೆ ಮಾಡಿರುವುದಾಗಿ ಒಪಿಕೊಂಡಿದ್ದಾರೆ.

 

ಕರ್ನಾಟಕ ರಾಜ್ಯಾದ್ಯಾಂತ ಡಕಾಯಿತಿ ರಾಬರಿ ಕೊಲೆ ಪ್ರಕರಣಗಳಲ್ಲಿ ಭಾಗಿ

ಈ ತಂಡವು ಕರ್ನಾಟಕ ರಾಜ್ಯದಂತ ನೆಲಮಂಗಲ ಎಚ್ಎಎಲ್ ಕಬ್ಬನ್ ಪಾರ್ಕ್ ಎಸ್ಆರ್ ನಗರ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಒಟ್ಟು ಇಪ್ಪತ್ತು ಪೊಲೀಸ್ ಠಾಣೆಯಲ್ಲಿ  ಡಕಾಯಿತಿ ರಾಬರಿ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಇವರ ಕೃತ್ಯಗಳಿಗೆ ಜನರು ಬೇಸ್ತು ಬಿದ್ದಿದ್ದರು. ಪೊಲೀಸರು ಈ ಖತರ್ನಾಕ್ ಗ್ಯಾಂಗ್ ಅನ್ನು ಬಂಧಿಸಲೇ ಬೇಕೆಂದು ಪಟ್ಟು ಹಿಡಿದು ತನಿಕೆ ಕೈ ಗೊಂಡಿದ್ದರು ,
ಆಂದ್ರದಲ್ಲಿ ಕನಕ ರಾವ್ ಎಂಬವರ ಕೊಲೆ ಮಾಡಿ ಬೆಂಗಳೂರಿನಲ್ಲಿ ತಲೆ ಮರಿಸಿಕೊಂಡಿದ್ದರು. ನಂತರ ಬೆಂಗಳೂರು ನಗರದಲ್ಲಿ ಜೇಬು ಕಳ್ಳತನ ಮಾಡಿಕೊಂಡಿದ್ದರು.ಅಲ್ಲದೇ 2018 ಫೆಬ್ರವರಿಯಲ್ಲಿ ಸುರೇಶ್ ಎಂಬುವನನ್ನು ಹಳೆಯ ವೈಷ್ಯಮ ದಿಂದ ಕೊಲೆ ಮಾಡಿ ತಲೆಮರಿಸಿಕೊಂಡಿದ್ದರು. ಆರೋಪಿಗಳು…ಪಾಲ್ ಬ್ರಹ್ಮಯ್ಯ (60),  ಅಭಿಷೇಕ್ ಅಲಿಯಾಸ್ ಭಾನುಪ್ರಕಾಶ್,
ಧನರಾಜ್ ಅಲಿಯಾಸ್ ರಾಮ್ ಕುಮಾರ್,ಮೂಲತಃ ಆಂಧ್ರದವರು ಅವರನ್ನು ಬಂಧಿಸುವಲ್ಲಿ ಪೋಲೀಸ್ ರು ಯಶಸ್ವಿಯಾಗಿದ್ದಾರೆ.  ////  ಈ ವಿಭಾಗದ ಎಲ್ಲಾ ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – Karnataka Crime News – Kannada Crime News – Police News Kannada

Webtitle  : ಎಲೆಕ್ಟ್ರಾನಿಕ್ ಸಿಟಿ : ಬಿಎಂಟಿಸಿ ಬಸ್ ನಲ್ಲಿ ಕೊಲೆ-ಕೊಲೆಗಾರರ ಬಂಧನ , ಕೊಲೆಗಾರರ ಬಂಧನ , 

Keword : ಬೆಂಗಳೂರು , ಕೊಲೆಗಾರರ ಬಂಧನ , ಡಕಾಯಿತರ ಬಂಧನ , ಬೆಂಗಳೂರು ಮರ್ಡರ್ ಕೇಸ್ , ಎಲೆಕ್ಟ್ರಾನಿಕ್ ಸಿಟಿ ಪೋಲಿಸ್ , ಎಲೆಕ್ಟ್ರಾನಿಕ್ ಸಿಟಿ ಪೊಲೀಸರು , ಎಲೆಕ್ಟ್ರಾನಿಕ್ ಸಿಟಿ ಪೋಲಿಸ್ ಕೇಸ್ , ಬಿಎಂಟಿಸಿ ಬಸ್ ನಲ್ಲಿ ಕೊಲೆ , ಕೊಲೆ ಆರೋಪಿಗಳ ಬಂಧನ , ಎಲೆಕ್ಟ್ರಾನಿಕ್ ಸಿಟಿ : ಬಿಎಂಟಿಸಿ ಬಸ್ ನಲ್ಲಿ ಕೊಲೆ-ಕೊಲೆಗಾರರ ಬಂಧನ . Electronic City: Latest News, Photos, Videos on Electronic City News Kannada. Murder in Bangalore Electronic City , Police , crime

 

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!