ಬಿಜೆಪಿ ಕಾರ್ಯಕರ್ತ ಸೇರಿ ಐವರ ಬರ್ಬರ ಹತ್ಯೆ

Kannada News(itskannada)  Crime News ನಾಗ್ಪುರ : ಬಿಜೆಪಿ ಕಾರ್ಯಕರ್ತ ಸೇರಿ ಐವರ ಬರ್ಬರ ಹತ್ಯೆ

ಇಲ್ಲಿನ ಆರಾಧನಾ ನಗರ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಕುಟುಂಬದ ಐದು ಸದಸ್ಯರನ್ನು ಕೊಲೆ ಮಾಡಲಾಗಿದೆ. ಕಮ್ಲಾಕರ್ ಪವಂಕರ್ (52), ಅವರ ಪತ್ನಿ ಅರ್ಚಾನಾ (45), ತಾಯಿ ಮೀರಬಾಯಿ (73), ಮಗಳು ವೇದಾಂತಿ (12) ಮತ್ತು ಅವರ ಸೋದರಳಿಯ ಕೃಷ್ಣಾ (5) ಎಂಬವವರನ್ನು ಚೂಪಾದ ಆಯುದದಿಂದ ಹಲ್ಲೆ ನಡೆಸಿ ಕೊಲ್ಲಲಾಗಿದೆ.

ಕಮ್ಲಾಕರ್ ಅವರ ಸೋದರ ಸಂಬಂಧಿ (ಸಹೋದರ ಪತಿ) ವಿವೇಕ್ ಪಲಟ್ ಕರ್ ಗೆ ಸೇರಿದ ಬೈಕ್ ಮೃತರ ಮನೆಯ ಸಮೀಪ ಪತ್ತೆಯಾಗಿದೆ. ಹೆಂಡತಿಯ ಹತ್ಯೆ ಪ್ರಕರಣದಲ್ಲಿ ಎರಡು ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದನು.

ಪವಂಕರ್ ಅವರ ಸಂಭಂದಿಯಾದ ವಿವೇಕ್ ಪಲಟ್ ಕರ್ ಈ ಕ್ರುತ್ಯವೆಸಗಿರಬಹುದು ಎಂದು ಅನುಮಾನಿಸಲಾಗಿದೆ. ಕೊಲೆ ನಡೆದ ಸ್ಥಳದಲ್ಲಿ ಇವನ ಬೈಕ್ ದೊರೆತಿದ್ದು ಅನುಮಾನ ಇನ್ನೂ ಹೆಚ್ಚಿಸಿದೆ , ಪೊಲೀಸರು ಇದೆ ಆಯಾಮದಲ್ಲಿ ತನಿಕೆ ಕೈಗೊಂಡಿದ್ದಾರೆ. ಹಾಗೂ ಕೊಲೆಯಾದವರಲ್ಲಿ ಆರೋಪಿ ಮಗಳು ಇದ್ದಾಳೆ ಎನ್ನುವುದು ಇನ್ನಷ್ಟು ಬಿಬತ್ಸ .

ಸದ್ಯ ಪಲಟ್ ಕರ್  ತಲೆಮರೆಸಿಕೊಂಡಿದ್ದು ಅವನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಪವಂಕರ್ ಸಣ್ಣ ವ್ಯಾಪಾರಿ ಮತ್ತು ಆಸ್ತಿ ವ್ಯವಹಾರಗಳಲ್ಲಿ ತೊಡಗಿದ್ದರು ಎಂದು ಮೂಲಗಳು ತಿಳಿಸಿವೆ. ಅವರು ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. ////