ಬಿರಿಯಾನಿ ಜಗಳ : ಹೋಟೆಲ್ ಮಾಲೀಕನಿಗೆ ಹೊಡೆತ

Kannada News (itskannada) ಹುಬ್ಬಳ್ಳಿ Crime – ಬಿರಿಯಾನಿ ಜಗಳ : ಹೋಟೆಲ್ ಮಾಲೀಕನಿಗೆ ಹೊಡೆತ :

ಕಳಪೆ ಬಿರಿಯಾನಿ ನೀಡಲಾಗಿದೆ ಎಂಬ ಕಾರಣಕ್ಕಾಗಿ ಹೋಟೆಲ್ ಮಾಲೀಕನಿಗೆ ಹೆಲ್ಮೆಟ್ ನಿಂದ ಹೊಡೆದಿರುವ ಘಟನೆ ಹುಬ್ಬಳ್ಳಿಯ ಬಸವ ನಗರದ ಹತ್ತಿರ ಫಿಶ್ ಲ್ಯಾಂಡ್ ನಲ್ಲಿ  ನಿನ್ನೆ ತಡರಾತ್ರಿ ನಡೆದಿದೆ.
ಓರ್ವ ಯುವಕ ಹಾಗೂ ಯುವತಿ ಆಗಮಿಸಿ ಬಿರಿಯಾನಿ ಪಾರ್ಸಲ್ ತೆಗೆದುಕೊಂಡು ಹೋಗಿದ್ದಾರೆ. ಅದು ಕಳಪೆಯಾಗಿದೆ ಎಂದು ಹೋಟೆಲ್ ಮಾಲೀಕನಿಗೆ ವಾಪಸ್ ಬಂದು ಹೇಳಿದಾಗ ಗ್ರಾಹಕ ಮತ್ತು ಮಾಲೀಕನಿಗೆ ಜಟಾಪಟಿಯಾಗಿದೆ. ಅಲ್ಲದೇ ಮಾಲೀಕ ಪ್ರಕಾಶ ಶೆಟ್ಟಿ ಅದರ ದುಡ್ಡು ವಾಪಸ್ ನೀಡಿದ್ದಾರೆ.  ಆದರೆ ಸುಮ್ಮನಿರದ ಗ್ರಾಹಕರ ಗೆಳೆಯರು ಐದಾರು ಜನ ಆಟೋದಲ್ಲಿ ಬಂದು ಮಾಲೀಕನಿಗೆ ಮನ ಬಂದಂತೆ ಹೆಲ್ಮೆಟ್ ನಿಂದ ಥಳಿಸಿದ್ದಾರೆ. ಇದರಿಂದ ಗಾಯ ಗೊಂಡ ಪ್ರಕಾಶ ಶೆಟ್ಟಿ ಯನ್ನು ನಗರದ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲದೇ ಕೆಲಸಗಾರರ ಮೇಲೆ ಹಲ್ಲೆ ನಡೆಸಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. /// Karnataka Crime News – Karnataka News