ಬೆಂಗಳೂರು ಶಾಸಕರ ಕಾರು ಅಪಘಾತ : ಅಪಾಯದಿಂದ ಪಾರು

Kannada News (itskannada) Hassan : ಹಾಸನ : ಬೆಂಗಳೂರು ಶಾಸಕರ ಕಾರು ಅಪಘಾತ : ಅಪಾಯದಿಂದ ಪಾರು : ಬೆಂಗಳೂರಿನ ಪುಲಿಕೇಶಿನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹಾಗೂ ಅವರ ಕುಟುಂಬ ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾಗಿದ್ದಾರೆ.

ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಮುಗಿಸಿ ಶಾಸಕ ಕುಟುಂಬ ಸಮೇತ ಬೆಂಗಳೂರಿಗೆ ಹೋಗುತ್ತಿದ್ದ ವೇಳೆ ನಗರದ ಹೊರವಲಯದ ಬಿಟ್ಟಗೌಡನಹಳ್ಳಿಯಲ್ಲಿ  ಶಾಸಕರು ಹಾಗೂ ಕುಟುಂಬಸ್ಥರಿದ್ದ ಇನ್ನೋವಾ ಕಾರಿಗೆ ಎದುರಿನಿಂದ ಬಂದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. /// Karnataka News – Crime News – Karnataka Crime News