ಇರಲಾರದೆ ಇರುವೆ ಬಿಟ್ಕೊಂಡ ಇವನ ಕಥೆ ಗೊತ್ತಾ ?

Crime News (itskannada ) ಸಾಲು ಮರದ ತಿಮ್ಮಕ್ಕನ ಬಗ್ಗೆ ಸುಳ್ಳು ವದಂತಿ ಹಬ್ಬಿಸಿದವನನ್ನು ಬೆಂಗಳೂರು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಸಾಲಿಗ್ರಾಮ ಹೋಬಳಿಯ ಹರದನಹಳ್ಳಿ ಗ್ರಾಮದ ಪ್ರದೀಪ್ ಗೌಡ ಎಂದು ಗುರುತಿಸಲಾಗಿದೆ. ಈತ ತನ್ನ ಸ್ನೇಹ ಲೋಕ ಎಂಬ ಫೇಸ್‍ಬುಕ್ ಗ್ರೂಪ್ ನಲ್ಲಿ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಇನ್ನಿಲ್ಲ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಫೋಟೊವನ್ನು ಎಡಿಟ್ ಮಾಡಿ ಸುಳ್ಳು ಸುದ್ದಿ ಹಬ್ಬಿದ್ದ ಹಿನ್ನೆಲೆಯಲ್ಲಿ ಸಾಲು ಮರದ ತಿಮ್ಮಕ್ಕರ ದತ್ತು ಪುತ್ರ ಉಮೇಶ್ ನೀಡಿದ್ದ ದೂರಿನನ್ವಯ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಫೋಟೊವನ್ನು ಫೋಟೊ ಶಾಪ್ ನಲ್ಲಿ ಎಡಿಟಿಂಗ್ ಮಾಡಿ ಹಾಕಲಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಪ್ರದೀಪಗೌಡನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ಬಂಧಿತನನ್ನು ವಿಚಾರಣೆ ಒಳಪಡಿಸಿದಾಗ , ತಾನು ಈ ಸುದ್ದಿಯನ್ನು ಆಕಲಿಲ್ಲ , ಅದಾವುದೋ ” ಮನುಸುಗಳ  ಮಾತು ಮದುರ ಎಂಬ ಫೇಸ್ ಬುಕ್ ಪೇಜ್ ಅಲ್ಲಿ ಆಕಿತ್ತು , ಅದನ್ನು ನಾನು ಡೌನ್ಲೋಡ್ ಮಾಡಿ ಎಡಿಟ್ ಮಾಡಿ ಅಪ್ಲೋಡ್ ಮಾಡಿದೆ  ಅಷ್ಟೇ ಎಂದಿದ್ದು ,  ಪೊಲೀಸರು ಸತ್ಯಾಸತ್ಯತೆಯನ್ನು ತನಿಕೆ ನಡೆಸಿದ್ದಾರೆ. //// ಈ  ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – Karnataka Crime News – Kannada News