ಆನೇಕಲ್ : ಕಂಪನಿ ಮಾಲಿಕರ ಕಿರುಕುಳಕ್ಕೆ ಇಂಜಿನಿಯರ್ ನೌಕರ ಆತ್ಮಹತ್ಯೆ

Engineer Suicide alleges harassment from private firm - Anekal - Jigani

Kannada News (itskannada) Crime News : ಆನೇಕಲ್ : Engineer Suicide alleges harassment from private firm – ಕಂಪನಿ ಮಾಲಿಕರ ಕಿರುಕುಳಕ್ಕೆ ಇಂಜಿನಿಯರ್ ನೌಕರ ಆತ್ಮಹತ್ಯೆ : ಇಂಜಿನಿಯರ್ ಯುವಕ ತಾನು ಕೆಲಸ ಮಾಡಿದ ಕಂಪನಿಯ ಮಾಲೀಕರು ಹಾಗೂ ಹಿರಿಯ ಸಿಬ್ಬಂದಿಯ ವಿರುದ್ದ ಕಿರುಕುಳದ ಆರೋಪ ಮಾಡಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಆನೇಕಲ್ : ಕಂಪನಿ ಮಾಲಿಕರ ಕಿರುಕುಳಕ್ಕೆ ಇಂಜಿನಿಯರ್ ನೌಕರ ಆತ್ಮಹತ್ಯೆ – Anekal

ತೇಜಸ್‍ಕುಮಾರ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಜಿಗಣಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ತೇಜಸ್ ನೆನ್ನೆ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದು ಕೊಂಡು ಸಾವಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. Engineer Suicide alleges harassment from private firm-Anekal-Jigani-itskannada 1ರಾಮನಗರಜಿಲ್ಲೆ, ಚನ್ನಪಟ್ಟಣ ತಾಲೂಕಿನ ಅಲ್ಲಾಳಸಂದ್ರ ಗ್ರಾಮ ಯುವಕ. ಹಾರಗದ್ದೆ ಆನೇಕಲ್ ಮುಖ್ಯ ರಸ್ತೆಯಲ್ಲಿರುವ ಹೆವಿಡೆಂಟ್ ಲೇಸರ್ ಆಟೋ ಪ್ರೈವೆಟ್ ಕಂಪನಿ ಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ.

ಆತ್ಮಹತ್ಯೆ ಘಟನೆ ಹಿನ್ನಲೆ : ಕಂಪನಿ ಮಾಲಿಕರ ಕಿರುಕುಳಕ್ಕೆ ಇಂಜಿನಿಯರ್ ನೌಕರ ಆತ್ಮಹತ್ಯೆ – ಆನೇಕಲ್

ಘಟನೆ ಹಿನ್ನಲೆ: ತಾನು ಕೆಲಸ ಮಾಡುತ್ತಿದ್ದ ಕಂಪನಿಯವರು ಕೆಲಸ ಬಿಟ್ಟ ಬಳಿಕ ರಿಲೀವ್ ಲೇಟರ್ ವಿಚಾರವಾಗಿ ತೇಜಸ್ ಮತ್ತು ಕಂಪನಿಯ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆದಿತ್ತು. ಇದೇ ವಿಷಯವಾಗಿ ಸ್ಥಳೀಯ ಮುಖಂಡರನ್ನು ಕರೆದುಕೊಂಡು ಕಂಪನಿಯ ಬಳಿ ಹೋಗಿದ್ದರೂ ರಿಲೀವ್ ಲೆಟರ್ ಸಿಕ್ಕಿರಲಿಲ್ಲ ಇದೇ ವಿಷಯಕ್ಕೆ ನೊಂದು ತೇಜಸ್ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.
ತೇಜಸ್ ಕಳೆದ ಒಂದು ವರ್ಷದಿಂದ ಹೆವಿಡೆಂಟ್‍ಲೇಸರ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ, ಕಳೆದ 15 ದಿನಗಳ ಹಿಂದೆ ಬೇರೊಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಈ ವಿಷಯ ತಿಳಿದ ಹೆವಿಡೆಂಟ್ ಲೆಸರ್ ಕಂಪನಿಯ ಎಚ್ ಆರ್ ತೇಜಸ್ ಹೊಸದಾಗಿ ಸೇರಿಕೊಂಡಿದ್ದ ಕಂಪನಿ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ, ಇ ಮೇಲ್ ಮೂಲಕ ತೇಜಸ್ ವಿರುದ್ದ ಮಾಹಿತಿ ನೀಡಿ, ರಿಲೀವ್ ಲೇಟರ್ ಇಲ್ಲದೆ ಕೆಲಸಕ್ಕೆ ತೆಗೆದು ಕೊಂಡಿರುವುದರ ಬಗ್ಗೆ ಚರ್ಚೆ ಮಾಡಿದ್ದಾರೆ. ವಿಷಯದಿಂದಾಗಿ ತೇಜಸ್ ಸೇರಿಕೊಂಡಿದ್ದ ಹೊಸ ಕಂಪನಿಯವರು, ಹಳೆ ಕಂಪನಿಯಿಂದ ರಿಲೀವ್ ಲೆಟರ್ ತಂದರೆ ಮಾತ್ರ ಇಲ್ಲಿ ಕೆಲಸ ಎಂದು ಹೇಳುತ್ತಿದ್ದಂತೆ ಎರಡು ಕಡೆ ತೇಜಸ್ ಕೆಲಸ ಕಳೆದು ಕೊಳ್ಳ ಬೇಕಾಯಿತು.
ಆಗ ವಿಧಿ ಇಲ್ಲದೆ ತೇಜಸ್ ಹಳೆ ಕಂಪನಿಗೆ ಹೋಗಿ ರಿಲೀವ್ ಲೆಟರ್ ನೀಡಲು ಮನವಿ ಮಾಡಿಕೊಂಡಿದ್ದಾನೆ. ಆಗ ಕಂಪನಿಯವರು ತೇಜಸ್ ನ ಮನವಿಯನ್ನು ತಿರಸ್ಕರಿಸಿದ್ದಾರೆ. ಇದರಿಂದ ತಾನು ಕೆಲಸ ಕಳೆದು ಕೊಂಡು ನಿರುದ್ಯೋಗಿಯಾದರೆ ನನ್ನ ಸಂಬಂಳವನ್ನೇ ನಂಬಿಕೊಂಡಿರುವ ತಂದೆ , ತಾಯಿಗಳ ಬದುಕು ಹೇಗೆ ಎಂಬುದನ್ನು ಯೋಚಿಸಿ ಯೋಚಿಸಿ ಸಾವಿನ ನಿರ್ಧಾರಕ್ಕೆ ಬಂದಿರ ಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ತೇಜಸ್ ಕುಮಾರ್ ಡೆತ್ ನೋಟ್ ನಲ್ಲಿ ಏನಿದೆ ? – ಕ್ರೈಂ ನ್ಯೂಸ್ 

ಡೆತ್ ನೋಟ್ : ನನ್ನ ಸಾವಿಗೆ ಹೆವಿಟೆಂಡ್ ಕಂಪನಿಯ ಮಾಲೀಕರಾದ ಮೊಹನ್‍ರಾಜ್, ರಘುರಾಜ್,ಸುಭಾಷ್‍ಕುಮಾರ್ ಅವರೆ ಕಾರಣ, ನಾನು ಕಳೆದ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದೆ. ಕಳೆದ 15 ದಿನಗಳಿಂದ ಬೇರೆ ಕಂಪನಿಯಲ್ಲಿ ಕೆಲಸ ಸೇರಿಕೊಂಡಿದ್ದೆ, ಈ ವಿಷಯ ತಿಳಿದ ಹೆವಿಟೆಂಡ್ ಕಂಪನಿಯವರು ಇ ಮೆಲ್ ಮಾಡಿ ಕೆಲಸದಿಂದ ತೆಗೆದು ಹಾಕುವಂತೆ ಮಾಡಿದ್ದಾರೆ. ಅಲ್ಲದೆ ಕಂಪನಿಯಿಂದ ರಿಲೀವ್ ಲೆಟರ್‍ಗಾಗಿ ಅಲೆದದರೂ ಲೆಟರ್ ನೀಡಲಿಲ್ಲ. ಇದರಿಂದ ನನಗೆ ಎಲ್ಲೂ ಕೆಲಸ ಇಲ್ಲ. ಜೀವನ ಕಷ್ಠವಾಗಿರುವುದರಿಂದ ಸಾವೇ ದಾರಿ ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆನೆ.

ನನ್ನ ಸಾವಿನಿಂದ ನಮ್ಮ ಮನೆಯವರು ಕೊರಗ ಬೇಡಿ. ಚನ್ನಪಟ್ಟಣ ಕ್ಷೇತ್ರದ ಶಾಸಕರು, ಮುಖ್ಯಮಂತ್ರಿಗಳು, ಕಾರ್ಮಿಕ ಇಲಾಖೆ ಅಧಿಕಾರಿಗಳು ನನ್ನ ಕುಟುಂಬಕ್ಕೆ ಹೆವಿಟೆಂಡ್ ಕಂಪನಿಯಿಂದ 20 ಲಕ್ಷ ರೂ ಪರಿಹಾರ ಕೊಡಿಸ ಬೇಕು ಹಾಗೆ ಕಂಪನಿಯ ಪರವಾನಗಿ ರದ್ದು ಮಾಡ ಬೇಕು , ನನ್ನ ದೇಹವನ್ನು ಯಾವುದಾದರೂ ಮೆಡಿಕಲ್ ಕಾಲೇಜಿಗೆ ದಾನ ಮಾಡ ಬೇಕೆಂದು ಡೆತ್ ನೋಟ್ ನಲ್ಲಿ ಬರೆದಿದ್ದಾನೆ ಎಂದು ಪೊಲೀಸ್ ರು ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲು: ತೇಜಸ್ ಆತ್ಮಹತ್ಯೆ ಹಿನ್ನಲೆಯಲ್ಲಿ ಪೋಷಕರು ಕಂಪನಿ ಮಾಲೀಕರ ವಿರುದ್ದ ದೂರು ನೀಡಿ 20 ಲಕ್ಷ ರೂ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ. ಈ ಸಂಬಂದ ಜಿಗಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಕಂಪನಿಗೆ ಬೀಗ ಹಾಕಲಾಗಿದೆ. /// Kannada Crime News – Karnataka Crime News – Police News Kannada

 

Engineer Suicide alleges harassment from private firm in Anekal Jigani – committed suicide in Jigani near Anekal – ಆನೇಕಲ್ ಇಂಜಿನಿಯರಿಂಗ್ ನೌಕರ ಆತ್ಮಹತ್ಯೆ – ಆನೇಕಲ್ ನ್ಯೂಸ್ – ಆನೇಕಲ್ ಪೋಲಿಸ್ ನ್ಯೂಸ್ – ಜಿಗಣಿ ನ್ಯೂಸ್ –  Anekal Software Engineer Suicide: Latest News, Photos, Videos – Engineer Suicide alleges harassment from private firm – Anekal – Jigani