ಆತ್ಮಹತ್ಯೆ ಮಾಡಿಕೊಂಡ ಗ್ರಾಮ ಪಂಚಾಯತ್ ಸದಸ್ಯ

Kannada News (itskannada) Crime News : ಉಡುಪಿ : ಆತ್ಮಹತ್ಯೆ ಮಾಡಿಕೊಂಡ ಗ್ರಾಮ ಪಂಚಾಯತ್ ಸದಸ್ಯ- ವೈಯಕ್ತಿಕ ವಿಚಾರಕ್ಕೆ ಮನನೊಂದ ಗ್ರಾಮ ಪಂಚಾಯತ್ ಸದಸ್ಯರೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡವರನ್ನು ಕಡೆಕಾರ್ ಗ್ರಾಪಂ ಸದಸ್ಯ, ಮಲ್ಪೆ ಕೊಡವೂರು ಲಕ್ಷ್ಮೀನಗರ ನಿವಾಸಿ ರಾಕೇಶ್(31) ಎಂದು ಗುರುತಿಸಲಾಗಿದೆ.

ಕೌಟುಂಬಿಕ ಸಮಸ್ಯೆಯಿಂದ ಮನನೊಂದಿದ್ದ ರಾಕೇಶ್ ‘ಜೀವನದಲ್ಲಿ ನೊಂದಿದ್ದು, ನನ್ನ ಸಾವಿಗೆ ನಾನೇ ಕಾರಣ’ ಎಂದು ಆತ್ಮಹತ್ಯೆಗೆ ಮುನ್ನ ವಾಟ್ಸ್ಅಪ್ ನಲ್ಲಿ ತನ್ನ ಸ್ನೇಹಿತರಿಗೆ ಸಂದೇಶ ಕಳುಹಿಸಿದ್ದರು. ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ. ಪ್ರಕರಣ ದಾಖಲಿಸಿದ್ದಾರೆ.

ಅವರು ಇದೇ ಮೊದಲ ಬಾರಿಗೆ ಕಡೆಕಾರ್ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿದ್ದರು, ಬಿಜೆಪಿ ಬೆಂಬಲಿತರಾಗಿದ್ದ ಅವರು ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದರು, ಮೃತ ರಾಕೇಶ್, ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ. ///  Karnataka Crime News – Karnataka News –  Udupi News Online