ತುಮಕೂರು-ಶಿರಾ ಬಳಿ ಅಪಘಾತಕ್ಕೆ 7 ಜನರ ಬಲಿ

7 people died by road accident in shira-Tumkur

Crime (itskannada) ತುಮಕೂರು-ಶಿರಾ ಬಳಿ ಅಪಘಾತಕ್ಕೆ 7 ಜನರ ಬಲಿ : 7 people died by road accident in shira-Tumkur : ತುಮಕೂರು: ಶಿರಾ ರಾಷ್ಟ್ರೀಯ ಹೆದ್ದಾರಿ 48 ರಸ್ತೆಯಲ್ಲಿರುವ ಜೈಹಿಂದ್ ಡಾಬಾ ಬಳಿ ನಿಂತಿದ್ದ ಲಾರಿಗೆ ಖಾಸಗಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೃತರು ಸಿಗಂಧೂರು ಚೌಡೇಶ್ವರಿ ದೇವಸ್ಥಾನಕ್ಕೆ ತೆರಳಿ ವಾಪಸ್ ತಮ್ಮ ತಮ್ಮ ಗ್ರಾಮಗಳಿಗೆ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಅಪಘಾತಕ್ಕೆ ಅತಿ ವೇಗ ಮತ್ತು ಚಾಲಕನ ಅಜಾಗರೂಕತೆ ಕಾರಣ ಎಂದು ತಿಳಿದುಬಂದಿದೆ. ವೇಗದಲ್ಲಿದ್ದ ಬಸ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್‌ನ ಮುಂಭಾಗದ ಎಡ ಬದಿ ಕುಳಿತಿದ್ದ ಅನುಷ (7), ಸವಿತ (21), ರತ್ನಮ್ಮ( 38), ಸುಮಲತ (21), ಗಿರಿಜಮ್ಮ (50), ಶಂಕರ (35), ಅಶ್ವಥನಾರಾಯಣ (40 ) ಮೃತಪಟ್ಟಿದ್ದಾರೆ
ಘಟನೆಯಲ್ಲಿ 25ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ////  ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Karnataka Crime News – ಕನ್ನಡ ಕ್ರೈಂ ಸುದ್ದಿಗಳು – Tumkur – Tumkur News Online