ಮಂಗಳೂರು-ಬಹುಮಹಡಿ ಮೇಲಿಂದ ಬಿದ್ದು ಮಗು ಧಾರುಣ ಸಾವು

Mangalore – Crime News (itskannada) ಮಂಗಳೂರು :ಮಂಗಳೂರು-ಬಹುಮಹಡಿ ಮೇಲಿಂದ ಬಿದ್ದು ಮಗು ಧಾರುಣ ಸಾವು : ಬಹುಮಹಡಿ ವಸತಿ ಸಂಕೀರ್ಣದ 8ನೇ ಮಹಡಿಯಿಂದ ಕೆಳಗೆ ಬಿದ್ದು ಮಗು ಸಾವನ್ನಪ್ಪಿದ ದಾರುಣ ಘಟನೆ ಮಂಗಳೂರಿನ ಶಕ್ತಿನಗರದಲ್ಲಿ ಈ ಘಟನೆ ನಡೆದಿದೆ. ಮೃತ ಮಗುವನ್ನು ಇಲ್ಲಿನ ಶಾಂತಿನಗರ ನಿವಾಸಿ ವಿಲ್ಸನ್ – ಆಲಿತಾ ದಂಪತಿಯ ಪುತ್ರಿ ಶಾನೆಲ್ ಜೆನಿಶೀಯಾ ಡಿಸೋಜಾ (5) ಎನ್ನಲಾಗಿದೆ.

ಮಂಗಳೂರು-ಬಹುಮಹಡಿ ಮೇಲಿಂದ ಬಿದ್ದು ಮಗು ಧಾರುಣ ಸಾವು

ಗುರುವಾರ ಬೆಳಿಗ್ಗೆ ಎಂಟನೇ ಮಹಡಿಯಲ್ಲಿನ ತನ್ನ ನಿವಾಸದ ಸ್ಲೈಡರ್ ಕಿಟಕಿ ಮೂಲಕ ಕೆಳಗೆ ಇಣುಕಿದ ಮಗು ಆಯತಪ್ಪಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ವಿಲ್ಸನ್ ಸೆಬಾಸ್ಟಿಯನ್ ಡಿಸೋಜಾ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಪತ್ನಿ ಅಲಿತಾ ಡಿಸೋಜಾ ಹಾಗು ಪುತ್ರಿ ಶಾನೆಲ್ ಜೆನಿಶೀಯಾ ಡಿಸೋಜಾ ನಗರದ ಶಕ್ತಿನಗರದಲ್ಲಿರುವ ಬಹುಮಹಡಿ ಕ್ಲಾಸಿಕ್ ಸಫಾಯರ್ ಅಪಾರ್ಟ್ ಮೆಂಟ್ ನ 8 ನೆ ಮಹಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಂಗಳೂರಿನಲ್ಲಿ ಸುರಿದ ಮಹಾ ಮಳೆಯ ಹಿನ್ನಲೆ ಶಾಲೆಗಳಿಗೆ 2 ದಿನ ರಜೆ ಇದ್ದ ಕಾರಣ ಶಾನೆಲ್ ಜೆನಿಶೀಯಾ ಡಿಸೋಜಾ ಮನೆಯಲ್ಲಿಯೇ ಆಟವಾವಾಡುತ್ತಿದ್ದಳು. ಈ ಸಂದರ್ಭ ಶಾನೆಲ್ ಫ್ಲಾಟ್ ನ ಬೆಡ್ ರೂಂನ ಕಿಟಕಿಯಯ ಮೂಲಕ ಕೆಳಕ್ಕೆ ಇಣುಕಲು ಯತ್ನಿಸುತ್ತಿದ್ದಾಗ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾಳೆ.  ///  Karnataka crime News – Mangalore News Online – Bangalore crime News

ಇದನ್ನೂ ಓದಿ – ಅನೈತಿಕ ಸಂಬಂದಕ್ಕೆ ಎಲ್ಲರನ್ನೂ ಕಳಕೊಂಡ ಕೊನೆಗೆ ಅವಳನ್ನು ಕೊಂದ