ಕುಡಿದ ಮತ್ತಲ್ಲಿ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ-6 ಮಂದಿ ಅರೆಸ್ಟ್

Kannada News (itskannada) Crime News ಗದಗ : ಕುಡಿದ ಮತ್ತಲ್ಲಿ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ-6 ಮಂದಿ ಅರೆಸ್ಟ್ :

ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ , ಗದಗದ ಮುಳಗುಂದಾ ನಾಕಾ ಬಳಿಯ ಹೋಟೆಲ್ ನಲ್ಲಿ ತಡ ರಾತ್ರಿ ನಡೆದಿದೆ.

ಚಂದ್ರಶೇಖರ್ ರಾಥೋಡ್ , ಸೋಮನಾಥ್ ಲಮಾಣಿ , ಟಾಕುರ್ ಲಮಾಣಿ, ವೆಂಕಟೇಶ್ ಲಮಾಣಿ , ಕೃಷ್ಣ ಲಮಾಣಿ ಹಾಗೂ ರಮೇಶ್ ಎಂಬುವವರೇ ಹಲ್ಲೆ ಮಾಡಿದ ಕುಡುಕ ಪುಂಡ ಕಿಡಿಗೇಡಿಗಳು ಎನ್ನಲಾಗಿದೆ. ಕಂಠ ಪೂರ್ತಿ ಕುಡಿದು ಕುಡಿದ ಅಮಲಿನಲ್ಲಿ ಹೋಟೆಲ್ ಸಿಬ್ಬಂದಿಗಳಾದ ಶಿವು ಪೂಜಾರಿ ಮತ್ತು ಗಿರೀಶ್ ಪೂಜಾರಿ ಮೇಲೆ ದಾಳಿಮಾಡಿದ್ದಾರೆ. ಅಲ್ಲದೆ ಹೋಟೆಲ್ ನ ಪಿಟೋಪಕರಣಗಳನ್ನೂ ಜಕಂ ಗೊಳಿಸಿದ್ದಾರೆ.

ಹಲ್ಲೆಗೊಳಗಾದ ಸಿಬ್ಬಂದಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿಯ ಪೂರ್ಣ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು , ಇದನ್ನು ಆದರಿಸಿ ಪೊಲೀಸರು ದಾಳಿಮಾಡಿದ ಆರೋಪಿಗಳು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಪೋಲಿಸ್ ಸ್ಟೈಲ್ ನಲ್ಲಿ ಬುದ್ದಿ ಹೇಳಿ ಕಳುಹಿಸಿದರೆ ಮತ್ತೆಂದೂ ಈ ಕೃತ್ಯಗಳಲ್ಲಿ ತೊಡಗದೆ ಇರಬಹುದು ಎಂದು ಅಲ್ಲಿನ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೇ ರೀತಿಯ ಹೋಟೆಲ್ ಧಾಳಿ ಖಂಡಿಸಿ , ನೆನ್ನೆಯಷ್ಟೇ ಧಾರವಾಡ ಮತ್ತು ಹುಬ್ಬಳ್ಳಿ ಬಂದ್ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ////