ಭೀಕರ ಅಪಘಾತ : ಎದೆಯನ್ನೇ ನಡುಗಿಸಿಬಿಡ್ತು ಹೊಸ ವರ್ಷದ ಪ್ರಾರಂಭ

20 injured in Deadly accident near Kumta

0

ಭೀಕರ ಅಪಘಾತ : ಎದೆಯನ್ನೇ ನಡುಗಿಸಿಬಿಡ್ತು ಹೊಸ ವರ್ಷದ ಪ್ರಾರಂಭ

ಕುಮಟಾ : ಹೌದು, ಕುಮಟಾ ಶಾಂತಿ ಪ್ರಿಯ ಜನರ ಪ್ರದೇಶ. ಇಲ್ಲಿ ಹೊಸ ವರ್ಷಕ್ಕೆ ಸಿಡಿಲಬ್ಬರದಂತೆ ಎರಗಿದ್ದು ಈ ಅಪಘಾತದ ಸುದ್ದಿ.

ಕುಮಟಾದ  ಹೆದ್ದಾರಿ 66 ರ ಮಣಕಿ ಬಳಿ ಸರ್ಕಾರಿ ಬಸ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ್ದು ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 25ಕ್ಕೂ ಅಧಿಕ ಪ್ರಯಾಣಿಕರು ಗಂಭೀರ ಗಾಯಗೊಂಡಿರುವ ಘಟನೆ ಎಲ್ಲರ ಎದೆಯಲ್ಲಿ ನಡುಕ ಹುಟ್ಟಿಸಿತ್ತು.

ಗೋಕರ್ಣದಿಂದ ಸಾಗರಕ್ಕೆ ತೆರಳುತ್ತಿದ್ದ   ಕೆಎಸ್ಆರ್ಟಿಸಿ ಬಸ್ ಹಾಗೂ ಹುಬ್ಬಳ್ಳಿ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಲಾರಿ ನಡುವೆ ಈ ಅಪಘಾತ ಸಂಭವಿಸಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗುವುದರ ಜೊತೆಗೆ ಜನತೆಯ ಹೃದಯ ಬಡಿತವನ್ನೇ ಹೆಚ್ಚಿಸಿತ್ತು.

ಅಪಘಾತದಲ್ಲಿ ಬಸ್ ನಲ್ಲಿದ್ದ ಸುಮಾರು 25ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಗಾಯವಾಗಿದ್ದು ಗಾಯಗೊಂಡವರನ್ನ ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಅನೇಕರನ್ನು ಮಂಗಳೂರು ಹಾಗೂ ಹೊನ್ನಾವರ ಆಸ್ಪತ್ರೆಗೆ ಕಳುಹಿಸಲಾಗಿದೆ.

ಅಪಘಾತದ ವೇಗಕ್ಕೆ ಲಾರಿ ಚಾಲಕನ ಒಂದು ಕಾಲು ಸಂಪೂರ್ಣವಾಗಿ ನುಜ್ಜಾಗಿದೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಒಳಗಾದವರ ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು.

ಕ್ಷೇತ್ರದ ಶಾಸಕರು ಹಾಗೂ ರಾಜಕೀಯ ಧುರೀಣರು ಭೇಟಿನೀಡಿ ಆಸ್ಪತ್ರೆಯಲ್ಲಿ ವ್ಯವಸ್ಥೆಯ ಬಗ್ಗೆ ಗಮನ ಹರಿಸಿ ತಾತ್ಕಾಲಿಕ ಪರಿಹಾರವನ್ನೂ ನೀಡುವ ವ್ಯವಸ್ಥೆ ಮಾಡಿಸಿದರು.//// ವರದಿ – ಗಣೇಶ ಜೋಶಿ

WebTitle : ಭೀಕರ ಅಪಘಾತ : ಎದೆಯನ್ನೇ ನಡುಗಿಸಿಬಿಡ್ತು ಹೊಸ ವರ್ಷದ ಪ್ರಾರಂಭ – 20 injured in Deadly accident near Kumta

>>> ಕ್ಲಿಕ್ಕಿಸಿ  ಕನ್ನಡ ನ್ಯೂಸ್  : Karnataka Crime News । Kannada Crime News | Karwar News Kannada