ಲಾರಿ ಹಾಗೂ ಬೈಕ್ ನಡುವೆ ಅಪಘಾತ ಇಬ್ಬರು ಕಲಾವಿಧರ ದುರ್ಮರಣ

2 Artist Died in Accident between lorry and bike

0

ಲಾರಿ ಹಾಗೂ ಬೈಕ್ ನಡುವೆ ಅಪಘಾತ ಇಬ್ಬರು ಕಲಾವಿಧರ ದುರ್ಮರಣ

ಹೊನ್ನಾವರ : ತಾಲೂಕಿನಿಂದ  ಇಡಗುಂಜಿ ಕಡೆಗೆ ಸಾಗುವ ಮಾರ್ಗದಲ್ಲಿ  ಕೆರಮನೆ ತಿರುವಿನಲ್ಲಿ ಬೈಕ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಅಪಘಾತದಲ್ಲಿ ಲಾರಿ ಹಾಯ್ದು ಇಬ್ಬರು ಕಲಾವಿಧರು ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ.
ಇಡಗುಂಜಿ ಸಮೀಪ ಸಂಭವಿಸಿದ ಘಟನೆಯಲ್ಲಿ ಸೌಕೂರು ಮೇಳದ ಕಲಾವಿದರುಗಳಾದ ಶ್ರೀ ಪ್ರಸನ್ನ ಆಚಾರ್ಯ ಹಾಗೂ ಶ್ರೀ ದಿನೇಶ ಮಡಿವಾಳ ರವರಿಗೆ ಅಪಘಾತವಾಗಿ ಸ್ಥಳದಲ್ಲಿ ಮೃತರಾಗಿದ್ದಾರೆ.  ಮೃತರಿಬ್ಬರು ಪ್ರತಿಭಾನ್ವಿತ ಕಲಾವಿದರು ಎಂಬ ಖ್ಯಾತಿ ಗಳಿಸಿದ್ದರು, ಇವರ ಅಗಲಿಕೆಯಿಂದ ಕಲಾರಂಗಕ್ಕೆ ಅಪಾರ ನಷ್ಟ ಸಂಭವಿಸಿದೆ.
ಅಪಘಾತದ ರಭಸಕ್ಕೆ ಇಬ್ಬರ ದೇಹವೂ  ಛಿದ್ರವಾಗಿದ್ದು, ಈ  ಭೀಕರ ದೃಷ್ಯವನ್ನು ಕಂಡು ಜನತೆ ಭಯಭೀತರಾಗಿದ್ದಾರೆ. ಅಪಘಾತದ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರಸ್ತೆ ಸಂಚಾರ ಕೂಡಾ ಅಸ್ತವ್ಯಸ್ತವಾಗಿತ್ತು.
ಇಬ್ಬರೂ ಪ್ರತಿಭಾವಂತ ಕಲಾವಿದರಾಗಿದ್ದು ಯಕ್ಷಗಾನ ರಂಗಕ್ಕೆ   ಬಹು ದೊಡ್ಡ  ಆಘಾತವನ್ನೆ ಉಂಟುಮಾಡಿದೆ ಎನ್ನಲಾಗಿದೆ.
ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ. ಇನ್ನು ಸ್ಥಳದಲ್ಲಿ ಮೃತರ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು. //// ಗಣೇಶ ಜೋಶಿ, ಕಾರವಾರ

WebTitle : ಲಾರಿ ಹಾಗೂ ಬೈಕ್ ನಡುವೆ ಅಪಘಾತ ಇಬ್ಬರು ಕಲಾವಿಧರ ದುರ್ಮರಣ-2 Artist Died in Accident between lorry and bike

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್: Kannada Crime NewsKarnataka Crime News