ಶಿವಳ್ಳಿ ಬೆಂಬಲಿಗ ಆತ್ಮಹತ್ಯೆಗೆ ಯತ್ನ | ಕನ್ನಡ ನ್ಯೂಸ್

Kannada News (itskannada) ಹುಬ್ಬಳ್ಳಿ :  ಕುಂದಗೋಳ ವಿಧಾನ ಸಭಾ ಕ್ಷೇತ್ರದ ಶಾಸಕ ಸಿ ಎಸ್ ಶಿವಳ್ಳಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದಕ್ಕೆ ಅವರ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ.  ಅಲ್ಲದೇ  ಅವರ   ಬೆಂಬಲಿಗನೊಬ್ಬ ಬೆಂಕಿಗೆ ಹಾರಲು ಯತ್ನಿಸಿದ ಘಟನೆ ಕುಂದಗೋಳದಲ್ಲಿ ನಡೆದಿದೆ.

ಕುಂದಗೋಳ ಪಟ್ಟಣದಲ್ಲಿ ಸಿ ಎಸ್ ಶಿವಳ್ಳಿ ಬೆಂಬಲಿಗರು ಅರೆ ಬೆತ್ತಲೆಯಾಗಿ ಪ್ರತಿಭಟಸಿದ್ದಾರೆ. ಅಲ್ಲದೇ  ಟೈಯರಿಗೆ ಬೆಂಕಿ ಹಚ್ಚಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.  ಆತ್ಮಹತ್ಯೆಗೆ ಯತ್ನಿಸಿದ ಕಾರ್ಯಕರ್ತನನ್ನೂ ಕಾಲವಾಡ ಎಂದು ಗುರುತಿಸಲಾಗಿದ್ದು, ಆತನನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರು ಮನವೊಲಿಸಿ, ಸಮಾಧಾನ ಪಡಿಸಿದ್ದಾರೆ. ಕುಂದಗೋಳ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯುವಾಗ ಈ ಆತ್ಮಹತ್ಯೆ ಪ್ರಯತ್ನ ನಡೆದಿದ್ದು,ಮೂರು ಭಾರಿ ಶಾಸಕರಾಗಿ  ಆಯ್ಕೆಯಾಗಿರುವ ಸಿ ಎಸ್ ಶಿವಳ್ಳಿ ಅವರನ್ನು ಕಡೆಗಣಿಸಿರುವುದು ಸರಿಯಲ್ಲ ಎಂದು ಘೋಷಣೆ ಕೂಗಿದರು.

ಶಾಸಕ ಸಿ.ಎಸ್. ಶಿವಳ್ಳಿ ಕೂಡ ರಾಜೀನಾಮೆ ನೀಡುವ ಕುರಿತು  ಬೆಂಬಲಿಗರ ಜೊತೆಗೆ ಸಭೆ ನಡೆಸಿ ಮುಂದಿನ ನಡೆ ಎನ್ನೆಂಬುದನ್ನು ತಿಳಿಸುವುದಾಗಿ  ಹೇಳಿದ್ದಾರೆ.  ///