ದಂಪತಿ ನಿಗೂಢ ಸಾವು-ಮನೆಯ ಬಾಗಿಲು ಒಳಗಿಂದಲೇ ಚಿಲಕ

21

Crime News : ( itskannada ) ಹೊಸದಿಲ್ಲಿ:ಸುಮಾರು 55 ವರ್ಷದ ವ್ಯಕ್ತಿ ಮತ್ತು ಆತನ ಪತ್ನಿ ಇಬ್ಬರೂ ನಿಗೂಢವಾಗಿ ಸಾವಿಗೀಡಾಗಿರುವ ಘಟನೆ ದೆಹಲಿಯ ಝಾಕೀರ ನಗರದಲ್ಲಿ ಸಂಭವಿಸಿದೆ.

ಮೃತನನ್ನು ಆಸ್ತಿ ವಹಿವಾಟು ಮಾಡುತ್ತಿದ್ದ ಶಮೀಮ ಎಂದು ಗುರುತಿಸಲಾಗಿದೆ. ವಿಚಿತ್ರವೆಂದರೆ ಮನೆಯ ಬಾಗಿಲನ್ನು ಒಳಗಿನಿಂದಲೇ ಚಿಲಕ ಹಾಕಲಾಗಿತ್ತು.

ಹೊರಗಿನಿಂದ ಬಂದ ದಂಪತಿ ಪುತ್ರ ಬಾಗಿಲು ತೆರೆಯುವಂತೆ ಹಲವು ಬಾರಿ ಕೂಗಿದರೂ ಯಾರೂ ಬಂದಿಲ್ಲ. ಗಾಬರಿಗೊಂಡ ಆತ ಅಕ್ಕ ಪಕ್ಕದ ಮನೆಯವರ ನೆರವಿನೊಂದಿಗೆ ಬಾಗಿಲು ಮುರಿದು ಒಳಕ್ಕೆ ಹೋದಾಗ ತಂದೆ ತಾಯಿಗಳಿಬ್ಬರ ಶವ ಪತ್ತೆಯಾದವು.

ಶವ ಪರೀಕ್ಷೆ ನಡೆಸಲಾಗುತ್ತಿದ್ದು, ಪ್ರಕರಣದ ತನಿಖೆ ನಡೆದಿದೆ.// Karnataka Crime News – Kannada News

Open

error: Content is protected !!