ಆಸ್ಪತ್ರೆಯ ಕೊಠಡಿಯಿಂದ ಬಿದ್ದು ಯೋಧ ಸಾವು-ಬೆಳಗಾವಿ

Crime News : (itskannada) Belgaum :  ಕೆಎಲ್ಇ ಆಸ್ಪತ್ರೆಯ 5ನೇ ಮಹಡಿ ಮಾರ್ಕಂಡೇಯ ವಾರ್ಡನಿಂದ ಬಿದ್ದು BSF ಯೋಧ ಇಂದು ಅಸುನೀಗಿದ್ದಾನೆ. ಮೂಲತಃ ಉತ್ತರಪ್ರದೇಶದ ಅಲಿಘಡದ ಶಾಮಸಿಂಗ್ ಶೋಬನ್ ಸಿಂಗ್(42) ಎಂಬುವ ಯೋಧ, ಗುಜರಾತ್ ರಾಜ್ಯದ ಭುಜ್ ನಲ್ಲಿ ಬಿಎಸ್ ಎಫ್ ಹೆಡ್ ಕಾನಸ್ಟೇಬಲ್ ಆಗಿದ್ದರು. ಅನಾರೋಗ್ಯ ಕಾರಣ ಕೆಎಲ್ ಇ ಆಸ್ಪತ್ರೆಗೆ ಚಿಕಿತ್ಸೆಗೆ ಎಪ್ರಿಲ್ 24ರಂದೇ ದಾಖಲಾಗಿದ್ದನು ಎನ್ನಲಾಗಿದೆ.

ಚುನಾವಣಾ ಕರ್ತವ್ಯದ ನಿ‌ಮಿತ್ತ ಚಿಕ್ಕೋಡಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ. ಯೋಧ, ಹೊಟ್ಟೆ ನೋವಿಗೆ ಚಿಕಿತ್ಸೆಗೆ ಈ ಆಸ್ಪತ್ರೆಗೆ ದಾಖಲಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಯೋಧನ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಡೆಪ್ಯುಟಿ ಕಮಿಷ್ನರ್ ಸೀಮಾ ಲಾಟಕರ, ಎಪಿಎಂಸಿ ಇನ್ಸಪೆಕ್ಟರ್ ರಮೇಶ ಹಾನಾಪೂರ & ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ BSF ಕಮಾಂಡಂಟ್ & ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು‌.

ಎಪಿಎಂಸಿ ಠಾಣೆಯ ud no. 6/18 ನಲ್ಲಿ ಪ್ರಕರಣ ದಾಖಲಾಗಿದೆ. ಶವವನ್ನು ಗೋವಾ ವಿಮಾನ ನಿಲ್ದಾಣ ಮೂಲಕ ಉತ್ತರಪ್ರದೇಶಕ್ಕೆ ಕಳಿಸಿಕೊಡಲಾಯಿತು. //

ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Belgaum News Kannada – Belgaum News Online –  Belgaum News In Kannada – Karnataka Crime News