ಶೀತ ಮತ್ತು ಕೆಮ್ಮಿಗೆ ಸುಲಭ ಪರಿಹಾರಗಳು

Home Remedies For Cold And Cough-Kannada

174

Health Tips : (itskannada ) ಶೀತ ಮತ್ತು ಕೆಮ್ಮಿಗೆ ಸುಲಭ ಪರಿಹಾರಗಳು-Home Remedies For Cold And Cough-Kannada : ಶೀತ ಮತ್ತು ಕೆಮ್ಮಿಗೆ ಮನೆಮದ್ದು, ಸಾಮಾನ್ಯ ಶೀತ ಮತ್ತು ಕೆಮ್ಮನ್ನು ಗುಣಪಡಿಸಲು ಮನೆ ಪರಿಹಾರೋಪಾಯಗಳ ಮೇಲೆ ಅನೇಕ ಭಾರತೀಯ ಕುಟುಂಬಗಳು ಇಂದಿಗೂ ಭರವಸೆ ಇಟ್ಟಿದ್ದಾರೆ, ಅಂತೆಯೇ ಅವು ಬಹಳ ಸರಳ ಹಾಗೂ ಬಹು ಪ್ರಯೋಜನಕಾರಿ ಪರಿಣಾಮಗಳನ್ನೂ ಕೂಡ ನೀಡುತ್ತವೆ.ಇಲ್ಲಿ ನೀಡಿರುವ ಅಂತಹವೇ ಕೆಲವು ಪರಿಹಾರಗಳು ಶೀತ ಮತ್ತು ಕೆಮ್ಮನ್ನು ಪರಿಣಾಮಕಾರಿಯಾಗಿ ಚಿಕಿತ್ಸಿಸುವುದರ ಜೊತೆಗೆ, ಯಾವುದೇ ಅಡ್ಡ-ಪರಿಣಾಮಗಳಿಂದ ಮುಕ್ತವಾಗಿವೆ. ಸಾಮಾನ್ಯ ಶೀತ ಮತ್ತು ಕೆಮ್ಮಿನ ಚಿಕಿತ್ಸೆಗಾಗಿ ನಿಮಗೆ ಸಹಾಯ ಮಾಡುವ ಈ ಕೆಲವು ಮನೆಯ ಪರಿಹಾರಗಳನ್ನು ,ಶೀತ ಮತ್ತು ಕೆಮ್ಮಿಗೆ ಸುಲಭ ಪರಿಹಾರಗಳು ,ಇಲ್ಲಿ ನಾವು ಉಲ್ಲೇಖಿಸಿದ್ದೇವೆ.

ಶೀತ ಮತ್ತು ಕೆಮ್ಮಿಗೆ ಸುಲಭ ಪರಿಹಾರಗಳು-Home Remedies For Cold And Cough-Kannada

  • ಬಿಸಿಹಾಲಿಗೆ ಅರಿಶಿಣ ಹಾಗೂ ಕರಿಮೆಣಸಿನ ಪುಡಿಯನ್ನು ಹಾಕಿ ಕುಡಿಯುವುದರಿಂದ ಕೆಮ್ಮು ಹಾಗೂ ಶೀತವನ್ನು ನಿವಾರಣೆಮಾಡಬಹುದು.ಒಂದು ಲೋಟ ಹಾಲಿಗೆ ಅರ್ಧ ಚಮಚ ಕರಿಮೆಣಸಿನ ಪುಡಿ ಮತ್ತು ಎರಡು ಚಮಚ ಅರಿಶಿಣವನ್ನು ಹಾಕಿ ಸರಿಯಾಗಿ ಕಲಸಿಕೊಳ್ಳಿ. ಈ ಮದ್ದನ್ನು ದಿನದಲ್ಲಿ ಎರಡು ಸಲ ಕುಡಿದರೆ ಪರಿಹಾರ ಕಾಣಬಹುದು. ಅರಿಶಿಣದಲ್ಲಿ ರೋಗನಿರೋಧಕ ಶಕ್ತಿಯಿದೆ. ಹೀಗಾಗಿ ಕೆಮ್ಮು ಅಥವಾ ಶೀತವಿದ್ದಾಗ ಬಿಸಿ ಹಾಲಿಗೆ ಅರಿಶಿಣ ಹುಡಿ ಬೆರೆಸಿ ರಾತ್ರಿ ಮಲಗುವಾಗ ಸೇವಿಸಿದರೆ ಗಂಟಲು ವುತ್ತು ಮೂಗಿಗೆ ಆರಾಮ ಸಿಗುತ್ತದೆ.ಶೀತ ಮತ್ತು ಕೆಮ್ಮಿಗೆ ಮನೆಮದ್ದು-itskannada
  • ಶೀತ ಮತ್ತು ಕೆಮ್ಮಿಗೆ ಬಿಸಿ ನೀರು ಕೂಡ ಉತ್ತಮ ಪರಿಹಾರ , ಬಿಸಿ ನೀರಿಗೆ ಒಂದು ಚಮಚ ಉಪ್ಪು ಬೆರೆಸಿ ಬಾಯಿ ತೊಳೆದರೆ,ಗಂಟಲಿಗೆ ಸಮಾಧಾನ ಸಿಗಲಿದೆ. ದಿನಕ್ಕೆರಡು ಬಾರಿ ಇದನ್ನು ಮಾಡಬಹುದು. ಅತಿಯಾದ ಬಿಸಿ ಬಳಸಬೇಡಿ , ಉಗುರು ಬೆಚ್ಚಗಿನ ಬಿಸಿ ನೀರನ್ನು ಬಳಸಿ.
  • ಈರುಳ್ಳಿ ಮತ್ತು ನಾಲ್ಕೈದು ಎಸಳು ಬೆಳ್ಳುಳ್ಳಿಯನ್ನು ಎರಡು ಲೋಟ ಬಿಸಿ ನೀರಿನಲ್ಲಿ ಕುದಿಸಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಶೀತ  ಕಡಿಮೆಯಾಗುತ್ತದೆ . ಈರುಳ್ಳಿ  ಮತ್ತು ಬೆಳ್ಳುಳ್ಳಿಯು ರೋಗ ನಿರೋಧಕ ಶಕ್ತಿಗಳನ್ನು ಹೊಂದಿರುವುದರಿಂದ ಶೀತದಿಂದ ಬಳಲುತ್ತಿರುವ ನಮಗೆ ತ್ವರಿತ ಬಿಡುಗಡೆ ನೀಡುತ್ತವೆ.
  • ದಾಲ್ಚಿನಿ ಮತ್ತು ಜಾಯಿಕಾಯಿ ಪುಡಿಯೊಂದಿಗೆ ಜೇನುತುಪ್ಪ ಬೆರೆಸಿ, ಸಂಜೆ, ಬೆಳಿಗ್ಗೆ ಕುಡಿಯುತ್ತ ಬಂದರೆ ಪ್ರಯೋಜನಕಾರಿ. ಒಂದು ಚಮಚ ಜೇನು ತುಪ್ಪಕ್ಕೆ, ಅರ್ಧ ಚಮಚ ಈರುಳ್ಳಿ ರಸವನ್ನು ಬೆರೆಸಿ ಕುಡಿಯುವುದರಿಂದ ಶೀತ ಮಾಯವಾಗುತ್ತದೆ.
  • ಓಂ ಕಾಳು ಬೀಜವನ್ನು ಎರಡು ಕಪ್ ನೀರಿನೊಂದಿಗೆ ಕುದಿಸಿ. ನಂತರ ಅದಕ್ಕೆ ಸ್ವಲ್ಪ ಬೆಲ್ಲ ಸೇರಿಸಿ ಆಗಾಗ ಸೇವಿಸುವುದರಿಂದ ಶೀತ ಮತ್ತು ಕೆಮ್ಮು ನಿವಾರಣೆಯಾಗುತ್ತದೆ.
  • ಬಿಸಿಯಾದ ಹಸುವಿನ ಹಾಲಿಗೆ ಕಾಳುಮೆಣಸಿನಪುಡಿ ಮತ್ತು ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದರಿಂದ ನೆಗಡಿ ಕಡಿಮೆಯಾಗುತ್ತದೆ.ಬಿಸಿಯಾದ ಹಸುವಿನ ಹಾಲಿಗೆ ಸ್ವಲ್ಪ ಅರಿಶಿಣದ ಅಪ್ಪಟ ಪುಡಿ ಮತ್ತು ಕಾಳು ಮೆಣಸಿನ ಪುಡಿಯನ್ನು ಹಾಕಿ ಕದಡಿ ಕುಡಿದರೆ ಕೆಮ್ಮು, ನೆಗಡಿ ಮತ್ತು ಗಂಟಲು ನೋವು ನಿವಾರಣೆಯಾಗುವುದು.
  • ತುಪ್ಪದಲ್ಲಿ ಹುರಿದ ಮೆಣಸನ್ನು ಸಮಭಾಗ ಸಕ್ಕರೆಯೊಂದಿಗೆ ಸೇರಿಸಿ ಚೆನ್ನಾಗಿ ಪುಡಿಮಾಡಿ ದಿನಕ್ಕೆ ೩ ಸಲ ಅರ್ಧ ಟೀ ಚಮಚ ತಿಂದರೆ ನೆಗಡಿ ಮತ್ತು ಕೆಮ್ಮು  ಕಡಿಮೆಯಾಗುತ್ತದೆ.
  • ಒಂದು ಬಟ್ಟಲು ಮೆಂತ್ಯದ ಸೊಪ್ಪಿನ ಕಷಾಯಕ್ಕೆ ಒಂದು ಟೀ ಚಮಚ ಹಸಿಶುಂಟಿ ಕಷಾಯ ಬೆರೆಸಿ ಜೇನುತುಪ್ಪದೊಂದಿಗೆ ಕುಡಿದರೆ ಕಫಾ ಬಿಡುಗಡೆಯಾಗುತ್ತದೆ. ಕೆಮ್ಮು, ಕ್ಷಯ ರೋಗಗಳಿಗೆಲ್ಲ ಈ ಉಪಚಾರದಿಂದ ಉತ್ತಮ ಪರಿಹಾರ ದೊರೆಯುವದು.
  • ತೆಂಗಿನ ಹಾಲು ಮತ್ತು ಗಸಗಸೆ ಹಾಲನ್ನು ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ಪ್ರತಿರಾತ್ರಿ ಊಟವಾದ ನಂತರ ಸೇವಿಸಿದರೆ Home Remedies For Cold And Cough-Kannada-itskannadaಧೂಮಾಪಾನದಿಂದ ಆಗುವ ಗೂರಲು ಕೆಮ್ಮು ಮತ್ತು ಎದೆನೋವಿನಲ್ಲಿ ಸುಧಾರಣೆಯಾಗುವುದು.

ಇವಿಷ್ಟು ಶೀತ ಮತ್ತು ಕೆಮ್ಮಿಗೆ ಸುಲಭ ಪರಿಹಾರಗಳು ನಿಮಗೆ ಅನುಕೂಲವಾಗಬಹುದು , ನೀವೊಮ್ಮೆ ಪ್ರಯತ್ನಿಸಿ  . . -Home Remedies For Cold And Cough-Kannada

ನಿಮ್ಮ ರೋಗಲಕ್ಷಣಗಳು ಒಂದು ದಿನ ಅಥವಾ ಎರಡು ಕ್ಕಿಂತ ಹೆಚ್ಚು ಕಾಲ ಇದ್ದರೆ, ನಿಮ್ಮ ದಂತವೈದ್ಯರನ್ನು ಕಾಣಿರಿ. ನಿಮ್ಮ ರೋಗಲಕ್ಷಣಗಳನ್ನು ನಿವಾರಿಸಲು ಮತ್ತು ತಡೆಗಟ್ಟುವ ಬಗೆಗೆ ಅವರು ಮಾರ್ಗದರ್ಶನ ನೀಡಬಹುದು. ಹೆಚ್ಚು ಗಂಭೀರವಾದ ವೈದ್ಯಕೀಯ ಚಿಕಿತ್ಸೆ ಅವಶ್ಯಕವಾಗಿದ್ದರೆ, ನಿಮ್ಮ ವೈದ್ಯರನ್ನು ಬೇಟಿಯಾಗಿ ಸರಿಯಾದ ಚಿಕಿತ್ಸೆ ಪಡೆಯಿರಿ. ಅನೇಕ ಬಾರಿ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Kannada Home Remedies – Kannada News 

WebTitle : ಶೀತ ಮತ್ತು ಕೆಮ್ಮಿಗೆ ಸುಲಭ ಪರಿಹಾರಗಳು-Home Remedies For Cold And Cough-Kannada

ಇವುಗಳನ್ನೂ ಓದಿ // ಹಲ್ಲು ನೋವಿಗೆ ಪರಿಹಾರ-ಮನೆಮದ್ದು  – ತಲೆನೋವಿಗೆ ಸುಲಭ ಪರಿಹಾರ-ಮನೆಮದ್ದು – ಗಂಟಲು ನೋವಿನ ಮನೆ ಪರಿಹಾರಗಳು – ಮೊಟ್ಟೆಯ ಅರೋಗ್ಯ ಪ್ರಯೋಜನಗಳು

 


ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ

Stay Updated with itsKannada, to know more Latest Kannada News - Read Kannada News Today Updates Kannada News Online - Get Latest News Headlines Breaking News in Kannada


.
error: Content is protected !!