ಅಗ್ನಿಶಾಮಕ ದಳ ವಾಹನ ಕೆಂಪು ಯಾಕೆ ?

You Know-Why Fire Truck is Red

40

Technology : (itskannada) ಅಗ್ನಿಶಾಮಕ ದಳ ವಾಹನ ಕೆಂಪು ಯಾಕೆ-You Know-Why Fire Truck is Red : ನಾವು ನೀವೆಲ್ಲಾ ನೋಡಿರುವ ಹಾಗೆ ಅಗ್ನಿಶಾಮಕ ದಳ ವಾಹನಗಳು ಸಾಮಾನ್ಯವಾಗಿ ಕೆಂಪು ಬಣ್ಣವನ್ನೇ ಹೊಂದಿರುವುದು ನಮಗೆಲ್ಲಾ ತಿಳಿದಿರುವ ವಿಚಾರ. ಆದ್ರೆ ಅಗ್ನಿಶಾಮಕ ದಳ ವಾಹನಗಳಲ್ಲಿ ಕೆಂಪು ಬಣ್ಣವನ್ನೇ ಏಕೆ ಉಪಯೋಗ ಮಾಡುತ್ತಾರೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ.

ಅಗ್ನಿಶಾಮಕ ದಳ ವಾಹನಗಳಲ್ಲಿ ಕೆಂಪು ಬಣ್ಣವನ್ನೇ ಯಾಕೆ ಉಪಯೋಗಿಸಲಾಗುತ್ತೆ ಎನ್ನುವುದಕ್ಕೆ ಹಲವು ವೈಜ್ಞಾನಿಕ ಕಾರಣಗಳಿದ್ದು, ಅದಕ್ಕೆ ತನ್ನದೇ ಆದ ಹಿನ್ನೆಲೆಯನ್ನು ಕೂಡಾ ಹೊಂದಿದೆ ಎಂದ್ರೆ ನೀವು ನಂಬಲೇಬೇಕು. ಹೌದು..ಹಲವು ವೈಜ್ಞಾನಿಕ ಕಾರಣಗಳಿಂದ ಬಳಕೆಯಾಗುತ್ತಿರುವ ಕೆಂಪು ಬಣ್ಣದ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ವಿಚಾರ ಇದು..

ಅಂದಹಾಗೆ, ಅಗ್ನಿಶಾಮಕ ವಾಹನಗಳಲ್ಲಿ ಉಪಯೊಗಿಸುವ ಕೆಂಪು ಬಣ್ಣಕ್ಕೆ ಅನೇಕ ಸಿದ್ದಾಂತಗಳಿವೆ. ಜೊತೆಗೆ ಕೆಂಪು ಬಣ್ಣವಷ್ಟೇ ಅಲ್ಲದೇ ಹಳದಿ, ನೀಲಿ, ನೇರಳೆ, ಗುಲಾಬಿ ಮತ್ತು ಕಪ್ಪು ಬಣ್ಣದ ಅಗ್ನಿಶಾಮಕ ವಾಹನಗಳು ಬಳಕೆಯಲ್ಲಿದ್ದು, ಇವುಗಳಲ್ಲಿ ಕೆಂಪು ಬಣ್ಣಕ್ಕೆ ಹೆಚ್ಚಿನ ಆದ್ಯತೆ ಇದೆ.

ಕೆಂಪು ಬಣ್ಣದ ಏಕೆ ಬಳಸುತ್ತಾರೆ?

ಆಟೋ ಉದ್ಯಮದ ಆರಂಭದಲ್ಲಿ ಬಳಸಲಾಗುತ್ತಿದ್ದ ಕಾರುಗಳು ಬಹುತೇಕ ಕಪ್ಪು ಬಣ್ಣದಲ್ಲೇ ಉತ್ಪಾದನೆಯಾಗುತ್ತಿದ್ದವು. ಅಲ್ಲದೇ 1900ರ ಅವಧಿಯಲ್ಲಿ ಹೆನ್ರಿ ಫೋರ್ಡ್ ದೀರ್ಘಬಾಳಿಕೆ ಮತ್ತು ಕಡಿಮೆ ಖರ್ಚಿನ ಕಾರಣಕ್ಕಾಗಿ ತನ್ನ ಫೋರ್ಡ್ ಟಿ ಮಾದರಿಗಳಿಗಾಗಿ ಕಪ್ಪು ಬಣ್ಣವನ್ನೇ ಬಳಸಲು ಹೆಚ್ಚು ಉತ್ತೇಜಿಸಲಾಗುತ್ತಿತ್ತು.

ಹೀಗಾಗಿ ಅಗ್ನಿಶಾಮಕ ದಳ ವಾಹನಗಳು ಅನೇಕ ಕಪ್ಪು ವಾಹನಗಳ ನಡುವೆ ತಮ್ಮ ವಾಹನಗಳನ್ನು ಪ್ರತ್ಯೇಕವಾಗಿ ಕಾಣುವಂತೆ ಮತ್ತು ಹೆಚ್ಚು ದುಬಾರಿಯಾದ ಬಣ್ಣವನ್ನು ಹೊಂದಲು ಬಯಸುತ್ತಿತ್ತು. ಆ ಸಮಯಕ್ಕೆ ಅದು ಕೆಂಪು ಬಣ್ಣದತ್ತ ಹೆಚ್ಚಿನ ಒತ್ತು ನೀಡಿದ್ದರಿಂದ ಅದೊಂದು ಪರಿಪಾಠ ಆಗಿದೆ .ಅಗ್ನಿಶಾಮಕ ದಳ ವಾಹನ ಕೆಂಪು ಯಾಕೆ ?-itskannada 1

ಬಣ್ಣ ಮತ್ತು ವಿಜ್ಞಾನ ಹಿನ್ನೆಲೆ

ಫ್ಲೋರಿಡಾ ಹೆದ್ದಾರಿ ಕಾವಲು ದಳದ ಲೆಫ್ಟಿನೆಂಟ್ ಜೇಮ್ಸ್ ಡಿ ವೆಲ್ಸ್ ಜೂನಿಯರ್ 2004ರಲ್ಲಿ ಬಿಡುಗಡೆ ಮಾಡಿದ ಅಧ್ಯಯನದ ಪ್ರಕಾರ ತುರ್ತು ವಾಹನದ ದೀಪ ಕೆಂಪು ಅಥವಾ ನೀಲಿ ಆದಲ್ಲಿ ಗೋಚರ ಸುಲಭ ಎಂದು ಚರ್ಚಿಸುತ್ತದೆ.

ಆದರೆ ಸಂಕ್ಷಿಪ್ತವಾಗಿ ನಾವು ಇಲ್ಲಿ ನೋಡುವುದಾದರೇ, ಕೆಂಪು ದೀಪದ ಗೋಚರತೆ ಹಗಲಿನಲ್ಲಿ ಸುಲಭ ಹಾಗೂ ರಾತ್ರಿಯಲ್ಲಿ ಗೋಚರ ಕಷ್ಟದಾಯಕ ಎಂಬುದನ್ನು ಅಧ್ಯಯನವು ಕಂಡುಕೊಂಡಿದೆ.

ಇನ್ನು ವೆಲ್ಸ್‌ನ ಸಂಶೋಧನೆಗಳನ್ನು ಅಗ್ನಿಶಾಮಕ ವಾಹನದ ಬಣ್ಣಗಳೊಂದಿಗೆ ತಾಳೆ ಮಾಡಿ ನೋಡುವುದಾದರೆ, ನಾವು ಇನ್ನೂ ಏಕೆ ಅಗ್ನಿಶಾಮಕ ವಾಹನದಲ್ಲಿ ಕೆಂಪುಬಣ್ಣವನ್ನು ಬಳಸುತ್ತಿದ್ದೇವೆ? ಎಂಬ ಪ್ರಶ್ನೆ ಮೂಡುವುದು ಕೂಡಾ ಸಹಜ.

1965ರಲ್ಲಿ ಇಂಗ್ಲೆಂಡ್‌ನ ಲ್ಯಾಂಚೆಸ್ಟರ್ ಕಾಲೇಜ್ ಆಫ್ ಟೆಕ್ನಾಲಜಿ ಮತ್ತು ಕೋವೆಂಟ್ರಿ ಅಗ್ನಿಶಾಮಕ ದಳ ನಡೆಸಿದ ಸಂಶೋಧನೆ ಮೇರೆಗೆ ನಿಂಬೆ ಅಥವಾ ಹಳದಿ ಬಣ್ಣವನ್ನು ಬೆಳಕಿನ ಬದಲಾವಣೆಯಲ್ಲಿ ರಾತ್ರಿಯೂ ಸುಲಭವಾಗಿ ಗುರುತಿಸಬಹುದು.

ಪ್ರತಿಕೂಲ ಹವಾಮಾನದಲ್ಲಿಯೂ ಈ ಬಣ್ಣಗಳು ಹೆಚ್ಚು ಸ್ಪಷ್ಟವಾಗಿ ಗೋಚರವಾಗುವುದಾಗಿ ಸಂಶೋಧನೆಗಳು ಸೂಚಿಸಿವೆ. ಈ ಕಾರಣಗಳಿಂದಲೇ ಯುಕೆಯಲ್ಲಿ ಹೆಚ್ಚಿನ ಅಗ್ನಿಶಾಮಕ ವಾಹನಗಳು ಕೆಂಪು ಬದಲಾಗಿ ಹಳದಿ ಗುರುತುಗಳನ್ನು ಬಳಸಲು ಪ್ರಾರಂಭಿಸಿತು.

ಇದಲ್ಲದೇ ಮುಂದುವರಿದ ರಾಷ್ಟ್ರಗಳಾದ ಯುಎಸ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ನಿಂಬೆ ಅಥವಾ ಘಾಡ ಹಳದಿ ಬಣ್ಣದ ಬಳಕೆಯನ್ನು ನೋಡುತ್ತಿದ್ದೇವೆ.

ಕೆಂಪು ಬಣ್ಣ ಕಂಟಕವೇ?

1955ರಲ್ಲಿ ಪ್ರಕಟವಾಗಿದ್ದ ನಾಲ್ಕು ವರ್ಷದ ಅಧ್ಯಯನದ ಪ್ರಕಾರ, ಅಗ್ನಿಶಾಮಕ ಉಪಕರಣದಲ್ಲಿ ಸಾಂಪ್ರದಾಯಕ ಕೆಂಪು ಬಣ್ಣದ ಬದಲಾಗಿ ನಿಂಬೆ ಹಳದಿ ಬಣ್ಣದ ಬಳಕೆಯನ್ನು ನ್ಯೂಯಾರ್ಕ್ ನೇತ್ರ ತಜ್ಞ ಸ್ಟೀಫನ್ ಸೊಲೊಮನ್ ಮತ್ತು ಜೇಮ್ಸ್ ಕಿಂಗ್ ಉತ್ತೇಜಿಸಿದರು. ಹಾಗೂ ಕೆಂಪು ಬಣ್ಣವು ನಿಖರವಾಗಿ ಪತ್ತೆಹಚ್ಚಲಾರದ ಬಣ್ಣವೆಂದು ತೀರ್ಮಾನಿಸಿದ್ದರು.

ಇದರ ಪರಿಣಾಮವಾಗಿ 1970 ಮತ್ತು 1980ರ ದಶಕದ ಆರಂಭದಲ್ಲಿ ಡಲ್ಲಾಸ್ ಅಗ್ನಿಶಾಮಕ ಇಲಾಖೆಯು ತಮ್ಮ ಕೆಂಪುಬಣ್ಣ್ದದ ಉಪ್ಕರಣಗಳನ್ನು ನಿಂಬೆ ಹಳದಿ ಬಣ್ಣಕ್ಕೆ ಬದಲಾಯಿಸಲು ಆರಂಭಿಸಿದ್ದು ಇದೀಗ ಇತಿಹಾಸ.

ಬಣ್ಣ ಇಲ್ಲಿ ವಿಷಯವಲ್ಲ..!!

ಹೌದು.. 2009ರಲ್ಲಿ ಯುಎಸ್ ಅಗ್ನಿಶಾಮಕ ಆಡಳಿತದ ಅಧ್ಯಯನ ಸಂಸ್ಥೆಯು ಯುಎಸ್ ರಸ್ತೆಗಳಲ್ಲಿನ ಅಪಘಾತ ಮತ್ತು ಸಾವಿನ ಸಂಖ್ಯೆ ಕಡಿಮೆ ಮಾಡುವ ಬಗ್ಗೆ ನಡೆಸಲಾದ ಸಂಶೋಧನೆ ಒಂದರ ಪ್ರಕಾರ, ಅಗ್ನಿಶಾಮಕ ದಳ ವಾಹನಗಳ ಬಣ್ಣಗಳ ವಿಚಾರ ಮುಖ್ಯವೇ ಅಲ್ಲ ಎಂದಿದೆ.

ಕಾರಣ, ವಾಹನ ಸವಾರರು ಹತ್ತಾರು ವಾಹನಗಳಲ್ಲಿ ಇದು ಅಗ್ನಿಶಾಮಕ ದಳ ವಾಹನ ಎಂದು ಪತ್ತೆ ಹಚ್ಚಲು ನೆರವಾದ್ರೆ ಅಷ್ಟೇ ಮುಖ್ಯ ಎನ್ನುವ ಸಂಗತಿಯನ್ನು ಬಿಚ್ಚಿಟ್ಟಿದ್ದರು. ಹೀಗಾಗಿ ಅಗ್ನಿಶಾಮಕ ದಳ ವಾಹನಗಳು ಇತರೆ ವಾಹನಗಳ ಬಣ್ಣಕ್ಕಿಂತ ವಿಭಿನ್ನ ಅಷ್ಟೇ ಮುಖ್ಯ ಎಂದಿದ್ದರು. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ –  Kannada Gadgets News

  • WebTitle : ಅಗ್ನಿಶಾಮಕ ದಳ ವಾಹನ ಕೆಂಪು ಯಾಕೆ-You Know-Why Fire Truck is Red
  • ಕೃಪೆ : ಡ್ರೈವ್ ಸ್ಪಾರ್ಕ್ ಕನ್ನಡ –
Open

error: Content is protected !!