ಮೊಬೈಲ್ ನ ದುಷ್ಪರಿಣಾಮಗಳು ನಮ್ಮನ್ನು ಸೋಮಾರಿ ಮಾಡಿದೆ

The disadvantages of mobile have made us lazy - Kannada Gadgets News

0

Kannada Gadgets (itskannada) ಮೊಬೈಲ್ ನ ದುಷ್ಪರಿಣಾಮಗಳು ನಮ್ಮನ್ನು ಸೋಮಾರಿ ಮಾಡಿದೆ-The disadvantages of mobile have made us lazy : ಸೆಲ್ ಫೋನ್, ಮೊಬೈಲ್ ಫೋನ್, ಸ್ಮಾರ್ಟ್ ಫೋನ್ ಅಥವಾ ಟೆಲಿಫೋನ್ ಮುಂತಾದ ಹಲವು ಹೆಸರುಗಳನ್ನು ಹೊಂದಿರೋ ಈ ಸಾಧನದ ಮುಂದೆ ನಾವು ಸೋತಿದ್ದೇವೆ, ಊಟ ನಿದ್ದೆಯನ್ನಾದರು ಬಿಟ್ಟೆವು ಮೊಬೈಲ್ ಬಿಡಲು ಆಗುವುದೇ ಇಲ್ಲ.

ಮೊಬೈಲ್ ನ ದುಷ್ಪರಿಣಾಮಗಳು ನಮ್ಮನ್ನು ಸೋಮಾರಿ ಮಾಡಿದೆ-The disadvantages of mobile have made us lazy

ಮೊದಲೆಲ್ಲಾ ನಿದ್ದೆಯಿಂದ ಎದ್ದೊಡನೆ ದೇವರಿಗೆ ನಮಸ್ಕರಿಸಿ, ಕಾಪಾಡಪ್ಪ ಭಗವಂತ ಅನ್ನೋದರ ಮೂಲಕ ನಮ್ಮ ದಿನವನ್ನು ಪ್ರಾರಂಭಿಸುತ್ತಿದ್ದ ನಾವು , ಕಣ್ಣು ಬಿಡುವ ಮೊದಲು ಹುಡುಕುವುದು ಮೊಬೈಲ್, ರಾತ್ರಿ ನಿದ್ದೆ ಕೆಟ್ಟು ಮಾಡಿದ ಫೇಸ್ ಬುಕ್ ಪೋಸ್ಟ್ ಗೆ ಎಷ್ಟು ಲೈಕ್ ಬಂದಿದಾವೆ , ಯಾರು ಏನ್ ಕಾಮೆಂಟ್ ಮಾಡಿದಾರೆ ಅನ್ನೋದು ನಮ್ಮ ದಿನದ ಪ್ರಾರಂಭ. ಫೇಸ್ ಬುಕ್ ನ ನಂತರ ವಾಟ್ಸಪ್ . kannada-gadgets-news-ಕನ್ನಡ-ತಂತ್ರಜ್ಞಾನ-itskannada

ಮೊಬೈಲ್ ಫೋನಿನಿಂದ ಇಂದು ನಾವು ಎಲ್ಲಿಗೆ ಬಂದು ನಿತಿದ್ದೇವೆ ಗೊತ್ತಾ…..

1) . ಮೊಬೈಲ್ ಪೋನ್ ಬಳಕೆ ಸಂಬಂಧಿಗಳಿಂದ ದೂರವಾಗಲು ಕಾರಣವಾಗಿದೆ.

ಮೊಬೈಲ್ ಬಳಕೆಯಿಂದ ನಮ್ಮ ಸ್ನೇಹಿತರು, ಕುಟುಂಬ ಮತ್ತು ಇತರ ಸಂಬಂಧಿಗಳಿಂದ ಪರೋಕ್ಷವಾಗಿ ದೂರವಾಗಿದ್ದೇವೆ. ನಮ್ಮ ಕುಟುಂಬ ಮತ್ತು ಸ್ನೇಹಿತರ ಬಗ್ಗೆ ನಮಗೆ ತಿಳಿದಿಲ್ಲದ ಅನೇಕ ವಿಷಯಗಳಿವೆ, ನಾವು ಅವರನ್ನು ಕೇವಲ ಮೊಬೈಲ್ ನಲ್ಲಿ ಮಾತ್ರ ಯೋಗಕ್ಷೇಮ ವಿಚಾರಿಸುತ್ತೀರಿ . ಇಂದು ಸಂಬಂಧಿಗಳ ಸಂಬಂಧ ಮೊಬೈಲ್ ನೆಟ್ ವರ್ಕ್ ಆಗೋಗಿದೆ.

2).ಮೊಬೈಲ್ ಪೋನ್  ಸಮಯ ವ್ಯರ್ಥ ಮಾಡುವ ಸಾಧನವೂ ಹೌದು

ಕನ್ನಡ-ತಂತ್ರಜ್ಞಾನ-ಸುದ್ದಿ-itskannada
ತನ್ನ ತಂದೆಯ ಮೊಬೈಲ್ ನಲ್ಲಿ ಆಟವಾಡುತ್ತಿದ್ದಾಗ ಸಿಡಿದ ಮೊಬೈಲ್

ಸಮಯವು ಹಣವಿದ್ದಂತೆ ಎಂದು ಖ್ಯಾತ ಮೇದಾವಿ ಹೇಳಿದ್ದು, ನಮ್ಮ ಈಗಿನ ಯುವಕ ಯುವತಿಯರಿಗೆ ತಿಳಿದೆಯಿಲ್ಲ, ಮೊಬೈಲ್ ನಮ್ಮ ಉಪಯೋಗಕ್ಕೆ ಆಗಬೇಕೆ ಹೊರತು ಮೊಬೈಲೇ ನಮ್ಮ ಉಪಯೋಗವಲ್ಲ, ಇದರಿಂದ ನಮ್ಮ ಅನೇಕ ಮದುರ ಕ್ಷಣಗಳು, ಅನೇಕ ಮುಖ್ಯ ಸಮಯ ವ್ಯರ್ಥವಾಗಿದೆ. ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ.

3).ಮೊಬೈಲ್ ನಿಮ್ಮ ಅನಾರೋಗ್ಯಕ್ಕೂ ಕಾರಣವಾಗಬಹುದು

ಮೊಬೈಲ್ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಮತ್ತೊಂದು ದೊಡ್ಡ ಅಂಶವಾಗಿದೆ. ಮಾನವ ಶರೀರದ ಎಲ್ಲಾ ಭಾಗಗಳು ಅದರ ಮೇಲೆ ಶಕ್ತಿಯನ್ನು ವ್ಯಯಿಸುತ್ತಿರುವುದರಿಂದ ನಮ್ಮ ಶಕ್ತಿ , ನೆಮ್ಮದಿ ಹಾಗೂ ತಾಳ್ಮೆಯನ್ನೂ ಕಳೆದುಕೊಳ್ಳುತ್ತೇವೆ. ಕಣ್ಣುಗಳು, ಕೈಗಳು ಮತ್ತು ಮನಸ್ಸಿನ ಮೇಲೆ ಇದ್ದು ಗಾಡವಾದ ಪರಿಣಾಮ ಬೀರುತ್ತದೆ.

4).ಮೊಬೈಲ್ ಬಳಕೆಯಿಂದ ರೋಗಗಳು ಬರುವ ಸಾಧ್ಯತೆ

ಮೊಬೈಲ್ ಫೋನ್ ಚರ್ಮದ ಕಾಯಿಲೆಗಳಿಗೆ ಕಾರಣವಾಗಬಹುದು, ವಿಶೇಷವಾಗಿ ಕೈ ಚರ್ಮ, ಕ್ಯಾನ್ಸರ್ ಮತ್ತು ಕಣ್ಣಿನ ಸಮಸ್ಯೆಗಳು ಇತ್ಯಾದಿ. ಮತ್ತು ಇತರ ರೋಗಗಳು ಮೊಬೈಲ್ ನ ಹೆಚ್ಚಿನ ಬಳಕೆಯಿಂದ ಬರಬಹುದು. ನಮ್ಮ ಆರೋಗ್ಯದ ಜೊತೆ ನಮ್ಮ ಸುಂದರ ಕಣ್ಣಿಗೆ ಅದು ಪ್ರಭಾವ ಬೀರುತ್ತವೆ.

5).ಮೊಬೈಲ್ ನಮ್ಮ ಓದಿನ ಮೇಲೆ ಮಾರಕ ಪರಿಣಾಮ ಬೀರಿದೆ

ವಿದ್ಯಾರ್ಥಿಗಳಿಗೆ ಮತ್ತೊಂದು ದೊಡ್ಡ ಹುಚ್ಚಾಟವೆಂದರೆ ಅವರು ತಮ್ಮ ಅಧ್ಯಯನದ ಹೆಚ್ಚಿನ ಸಮಯವನ್ನು ಹೊಂದಿರುತ್ತಾರೆ. ಮೊಬೈಲ್ ಮೊಬೈಲ್ ಬಳಸುವುದರ ಮೂಲಕ ಕಳೆಯುತ್ತಾರೆ. ಇದು ಅವರ ಅಧ್ಯಯನದ ಕೊನೆಯಲ್ಲಿ ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ .

6). ಮೊಬೈಲ್ ನಿಂದ ಸಾವು ಸಂಭವಿಸಿರುವ ನಿಧರ್ಶನಗಳು

ಸೆಲ್ಫಿ-Selfi-death-itskannadaಮೊಬೈಲ್ ಪೋನ್ ಬಳಕೆಯಿಂದ ಸಾವಿಗೆ ತುತ್ತಾಗಿರುವ ನಿಧರ್ಶನಗಳಿವೆ, ಕೆಲವು ಜನರು ಚಾಲನೆ ಮಾಡುವಾಗ ಅದನ್ನು ಬಳಸಿ,  ಅಪಘಾತಕ್ಕೊಳಗಾಗಿದ್ದಾರೆ.  ಇನ್ನೂ ಕೆಲವರು ತಮ್ಮ ಸಾಹಸ ಕ್ರೀಡೆ , ಸಾಹಸ ಭಂಗಿಗಳನ್ನು ಸೆಲ್ಫಿ ಮಾಡಿಕೊಳ್ಳುವಾಗ ಸತ್ತದ್ದು ನಾವು ನೋಡಿಯೇ ಇದ್ದೇವೆ.

7).ಮೊಬೈಲ್ ನಮ್ಮ ಸುಳ್ಳಿನ ಸ್ನೇಹಿತ , ಮೊಬೈಲ್ ಗೆ ಇನ್ನೊಂದು ಹೆಸರು ಸುಳ್ಳು 

ಮೊಬೈಲ್ ಬಳಸುವ ನಾವೆಲ್ಲಾ ಒಂದಲ್ಲಾ ಒಂದು ದಿನ ಸುಳ್ಳು ಹೇಳಿಯೇ ಇರುತ್ತೇವೆ , ಬೆಂಗಳೂರಿನಲ್ಲಿದ್ದ ನಾವು ಮೈಸೂರಿನಲ್ಲಿದ್ದೇವೆಂದು , ಸಾಲಗಾರರ ತೊಂದರೆ ತಪ್ಪಲು ನಾನು 15 ದಿನ ಊರಲ್ಲಿ ಇಲ್ಲವೆಂದೋ ಹೇಳಿಯೇ ಇರುತ್ತೇವೆ. ಮೊಬೈಲ್ ಪೋನ್  ನಮ್ಮನ್ನು ವಂಚನೆ ಮತ್ತು ಸುಳ್ಳಿಗೆ ಹೆಚ್ಚು ಪ್ರಚೋದಿಸುತ್ತದೆ. – ///  itskannada Gadgets

/// ಈ ವಿಭಾಗದ ಎಲ್ಲಾ ಕನ್ನಡ ಸುದ್ದಿ – ಮಾಹಿತಿಗಾಗಿ ಕ್ಲಿಕ್ಕಿಸಿ –  Kannada Gadgets News – ಕನ್ನಡ ತಂತ್ರಜ್ಞಾನ ಸುದ್ದಿ ಹಾಗೂ ಮಾಹಿತಿ

WebTitle : ಮೊಬೈಲ್ ನ ದುಷ್ಪರಿಣಾಮಗಳು ನಮ್ಮನ್ನು ಸೋಮಾರಿ ಮಾಡಿದೆ-The disadvantages of mobile have made us lazy