Welcome To Kannada News - itskannada.in

ಇದೇ ನೋಡಿ ವಿಶ್ವದ ದುಬಾರಿ ಕಾರು, ಬೆಲೆ ಕೇಳಿದ್ರೆ ತಲೆ ತಿರುಗುತ್ತೆ

See this world's expensive car, the head rotates when you hear the price

ಇದೇ ನೋಡಿ ವಿಶ್ವದ ದುಬಾರಿ ಕಾರು, ಬೆಲೆ ಕೇಳಿದ್ರೆ ತಲೆ ತಿರುಗುತ್ತೆ

ತಂತ್ರಜ್ಞಾನ  : ಸಾಮಾನ್ಯವಾಗಿ ಕಾರು ಬೆಲೆ ಲಕ್ಷಗಳಲ್ಲಿರುತ್ತೆ, ಅದೇ ಜಾಗ್ವಾರ್ ನಂತಹ ಐಷಾರಾಮಿ ಕಾರು ಅಥವಾ ಸ್ಪೋರ್ಟ್ಸ್ ಕಾರ್ ಗಳು 10 ಕೋಟಿ, ರೂ 20 ಕೋಟಿ, ರೂ. 30 ಕೋಟಿ ಬೆಲೆಬಾಳುತ್ತವೆ.

ಆದರೆ ಈ ಫೋಟೋದಲ್ಲಿ ಕಾರಿನ ಬೆಲೆ ನಿಮಗೆ ತಿಳಿದಿದೆಯೇ? ಇದರ ಬೆಲೆ ಕೇಳಿದರೆ ಎಂತಹವರೂ ದಂಗು ಬೀಳ್ತಾರೆ.  ಹೌದು ಈ ಕಾರಿನ ಬೆಲೆ ಅಕ್ಷರಶಃ ರೂ. 121 ಕೋಟಿ. ಇದು ನಿಜ ನಿಜ ನಿಜ.

More From Web

ಇಟಲಿಯ ಪ್ರಮುಖ ಸ್ಪೋರ್ಟ್ಸ್ ಕಾರ್ ಉತ್ಪನ್ನಗಳ ಕಂಪನಿ ಪಾಗನಿ ಆಟೋಮೊಬೈಲ್ಸ್ ಕಾರ್ ರೇಸ್ ಪ್ರಿಯರಿಗೆ ಅಚ್ಚುಮೆಚ್ಚು ಮತ್ತು ಚಿರಪರಿಚಿತ. ಈ ಕಂಪನಿಯು ವಿಶ್ವದ ದುಬಾರಿ ಮತ್ತು ಅಪರೂಪದ ಕಾರುಗಳನ್ನು ಉತ್ಪಾದಿಸುವುದರಲ್ಲಿ ಎತ್ತಿದ ಕೈ.

ಈ ಕಂಪನಿಯ ಜೊಂದಾ ಮತ್ತು ಹುಯ್ತೆರಾ ಬ್ರ್ಯಾಂಡ್ ಸ್ಪೋರ್ಟ್ಸ್ ಕಾರುಗಳು  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗಾಗಲೇ ಪರಿಚಯವಾಗಿವೆ. ಜೊಂದಾ ಬ್ರಾಂಡ್ ನಲ್ಲಿಯೇ ಅಲ್ಟ್ರಾರೇರ್ ‘ಜೊಂದಾ ಎಚ್ಪಿ ಬಾರ್ಸೆಟಾ ಅನ್ನು ತಯಾರಿಸಿದೆ. ಈ ದುಬಾರಿ ಕಾರನ್ನು ಗುಡ್ವುಡ್ ಉತ್ಸವದಲ್ಲಿ ಅನಾವರಣಗೊಳಿಸಲಾಗಿತ್ತು.

ಈ ಕಾರಿನ ಬೆಲೆ ಬರೋಬ್ಬರಿ 15 ದಶಲಕ್ಷ ಯೂರೋಗಳು. ಅಂದ್ರೆ 121 ಕೋಟಿಗಿಂತ ಹೆಚ್ಚು. ಈ ಮಾದರಿಗಳಲ್ಲಿ ಕೇವಲ 3 ಕಾರುಗಳನ್ನು ಮಾತ್ರ ಕಂಪೆನಿ ತಯಾರಿಸಿದ್ದು  ಮೂರು ಮಾರಾಟವಾಗಿವೆ. ಜೊಂದಾ ಎಚ್ ಪಿ ಬಾರ್ಸೆಟಾ ವಿಶ್ವದಲ್ಲೇ ಅತಿ ದುಬಾರಿ ಕಾರು ಎನಿಸಿಕೊಂಡಿದೆ.

ಜೊಂದಾ 760 ಸರಣಿ ಹಾಗೂ ಹುಯ್ತೆರಾ ಬಿಎಸ್ಸಿ ಮಾದರಿಗಳ ಹೈಬ್ರಿಡ್ ಮಾದರಿಯೇ ಈ ಜೊಂದಾ ಎಚ್ಪಿ ಬಾರ್ಸೆಟಾ. ಅಂದಹಾಗೇ ಇದು ಎಎನ್ ಜಿ ವಿ12 ಎಂಜಿನ್ ಅನ್ನು ಹೊಂದಿದ್ದು, 789 ಹಾರ್ಸ್ ಪವರ್ ಅನ್ನು ಉತ್ಪಾದಿಸುತ್ತದೆ, ಇದರ ತೂಕ 1250 ಕೆಜಿ.////

WebTitle : ಇದೇ ನೋಡಿ ವಿಶ್ವದ ದುಬಾರಿ ಕಾರು, ಬೆಲೆ ಕೇಳಿದ್ರೆ ತಲೆ ತಿರುಗುತ್ತೆ-See this world’s expensive car, the head rotates when you hear the price

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್  : Kannada Gadgets News   ।  Kannada Technology News 

Quick Links : Film News | Politics News | Crime News | Health Tips | India News | World News
ನಮ್ಮ ಕನ್ನಡ ಸುದ್ದಿ ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು Video News ಸಮೇತ Twitter, Google+ ಮತ್ತು Facebook ನಲ್ಲಿ ಕಾಣಬಹುದು.

Read More From Online Content