ಆಂಡ್ರಾಯ್ಡ್ ಫೋನ್ ವೇಗಗೊಳಿಸುವುದು ಹೇಗೆ

How To Speed Up Android Phone | itskannada Technology

0 18

(itskannada): ಆಂಡ್ರಾಯ್ಡ್ ಫೋನ್ ವೇಗಗೊಳಿಸುವುದು ಹೇಗೆ ! . ನಮ್ಮ ಆಂಡ್ರಾಯ್ಡ್ ಫೋನ್ ವೇಗಗೊಳಿಸುವುದು ಹೇಗೆ ? ಇತರ ಆಂಡ್ರಾಯ್ಡ್ ಫೋನಿನ ಬಳಕೆದಾರರಂತೆ, ಇದು ಎಲ್ಲರ ಮುಖ್ಯವಾದ ಪ್ರಶ್ನೆಯಾಗಿದೆ. ಅಷ್ಟಕ್ಕೂ Android Phone ಅನ್ನು ವೇಗಗೊಳಿಸಬಹುದು ಆದರೆ ಕೆಲವು ಸಲಹೆಗಳು ಮತ್ತು ಕೆಲವು ಅಪ್ಲಿಕೇಶನ್ ಗಳ ಅಗತ್ಯವಿದೆ. ಕೆಲವರಂತೂ ಈ ಬಗ್ಗೆ ಯೋಚಿಸದೆ , ತಮ್ಮ ಫೋನ್ ಖರೀದಿಸಿದ ದಿನದಿಂದ ಕೊನೆಯ ತನಕ ಅದೇ ಮಿತವೇಗದ ಫೋನನ್ನು ಬಳಸುತ್ತಾರೆ ಹಾಗೂ ಇದು ಇಷ್ಟೇ ವೇಗವಿರಬಹುದು ಎಂದು ಕೊಂಡಿರುತ್ತಾರೆ. ಹಲವಾರು ವಿಷಯಗಳಿಗೆ ನಮ್ಮ ಮೊಬೈಲ್ ಸಾಧನಗಳು ನಿಧಾನವಾಗಬಹುದು. ನಮ್ಮ Android ಫೋನ್ ವೇಗವನ್ನು ಹೆಚ್ಚಿಸಲು ಕೆಲವು ಪ್ರಮುಖ ಅಂಶಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಯಾವುದೇ ಆಂಡ್ರಾಯ್ಡ್ ಓಎಸ್ ಆಧಾರಿತ ಸಾಧನದ ಹೊರತಾಗಿ ಆಂಡ್ರಾಯ್ಡ್ ಕಾರ್ಯಕ್ಷಮತೆಯನ್ನು ವೇಗಗೊಳಿಸಲು ಈ ತಂತ್ರಗಳು ಸಮನಾಗಿ ಪರಿಣಾಮಕಾರಿ ಮತ್ತು ಫೋನಿಗೆ ಒಲ್ಲದ ಕ್ರಮ ಕೈಗೊಂಡು ದಕ್ಕೆ ತಂದು ಕೊಳ್ಳುವುದಕ್ಕಿಂತ ನಿಮ್ಮ Android ಫೋನ್ ಅನ್ನು ವೇಗಗೊಳಿಸಲು ಸರಳವಾದ , ಪರಿಣಾಮಕಾರಿಯಾಗಿರುವ ಆಯ್ಕೆಗಳನ್ನು ಇಲ್ಲಿ ತಿಳಿದುಕೊಳ್ಳಬಹುದು. ಹಾಗೂ ನಿಮ್ಮ ಆಂಡ್ರಾಯ್ಡ್ ಅನ್ನು ವೇಗವಾಗಿಸಿ.

ಈ ಹಿಂದಿನ ಲೇಖನದಲ್ಲಿ ಫೇಸ್ ಬುಕ್ ಅದ್ಭುತ ವಿಷಯಗಳು ಏನು ಮತ್ತು ಮೊಬೈಲ್ RAM ಅನ್ನು ಹೆಚ್ಚಿಸಿ ಎಂಬುದನ್ನು ತಿಳಿದಿದ್ದಾಯಿತಲ್ಲವೇ , ಈಗ ಆಂಡ್ರಾಯ್ಡ್ ಫೋನ್ ವೇಗಗೊಳಿಸುವುದು ಹೇಗೆ (How To Speed Up Android Phone) ಎಂಬುದರ ಬಗ್ಗೆ ತಿಳಿಯೋಣ.

ಆಂಡ್ರಾಯ್ಡ್ ಫೋನ್ ವೇಗಗೊಳಿಸುವುದು ಹೇಗೆ – ಸುಲಭವಾಗಿ

ಸುಲಭವಾಗಿ ಆಂಡ್ರಾಯ್ಡ್ ಫೋನ್ ವೇಗಗೊಳಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

 1. ಮೆಮೊರಿ ಕಾರ್ಡ್ ನ ಎಲ್ಲಾ ಪ್ರಮುಖ ಫೈಲ್ಗಳನ್ನು ,ನಿಮ್ಮ ಫೋಟೋಗಳು,ವೀಡಿಯೊ ,ಇನ್ನಾವುದೇ ಮುಖ್ಯ ಫೈHow To Speed Up Android Phone-itskannadaಲ್ ಗಳನ್ನು ಬ್ಯಾಕ್ಅಪ್ ತೆಗೆದುಕೊಳ್ಳಿ ಮತ್ತು ಫೋನನ್ನು ಡೀಫಾಲ್ಟ್ ಸೆಟ್ಟಿಂಗ್ ಗೆ ಮರುಳಿಸಿ.
 2. ಆಂಡ್ರಾಯ್ಡ್ ಫೋನಿನ ನಿಧಾನ ಕಾರ್ಯಕ್ಷಮತೆಗೆ ಕಡಿಮೆ ಮೆಮೊರಿ ಕೂಡ ಒಂದು ಗಮನಾರ್ಹವಾದ ಅಂಶ , ಆದ್ದರಿಂದ ನಿಮ್ಮ ಫೋನಿನಲ್ಲಿ ಎಷ್ಟು ಮೆಮೋರಿ ಬಾಕಿ ಇದೆ ಎಂಬುದನ್ನು ನೋಡಿ .
 3. ಆದಷ್ಟು ನಿಮ್ಮ ಫೈಲ್ , ಫೋಟೋ , ವೀಡಿಯೊಗಳನ್ನು ಮೆಮೋರಿ ಕಾರ್ಡ್ ನಲ್ಲಿ ಸಂಸ್ಕರಿಸಿ.
 4. ಹೆಚ್ಚಿನ ಅಪ್ಲಿಕೇಶನ್ ಗಳನ್ನು ಹೊಂದಬೇಡಿ , ಉಪಯೋಗಿಸದ ಅಪ್ಲಿಕೇಶನ್ ಗಳನ್ನು ಡಿಲೀಟ್ ಮಾಡಿ.
 5. ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸುವ ಅಪ್ಲಿಕೇಶನ್ ಗಳನ್ನು ಮೊದಲು ತೆಗೆಯಿರಿ.
 6.  ಅಪ್ಲಿಕೇಶನ್ ಗಳನ್ನು ನಿಲ್ಲಿಸಲು ನೀವು AUTO TASK KILLER ಅಪ್ಲಿಕೇಶನ್ ಬಳಸಬಹುದು.
 7. ಆಗಾಗ ನಿಮ್ಮ ಫೋನಿನಲ್ಲಿ ವೈರಸ್ ಪರಿಶೀಲಿಸಿ , ಹಾಗೂ ಮುಕ್ತಗೊಳಿಸಿ.
 8.  ನಿಮ್ಮ ಫೋನನ್ನು ಪ್ರಾರಂಭಿಸುವಾಗ ಕೆಲವು ಅಪ್ಲಿಕೇಶನ್ ಗಳು ಜೊತೆಗೆ ಪ್ರಾರಂಭವಾಗುತ್ತವೆ ,ಅದನ್ನು ತಪ್ಪಿಸಲು start up manager app ಅನ್ನು ಬಳಸಬಹುದು.
 9. ವೈರಸ್ ಸ್ಕ್ಯಾನ್ ಮಾಡಲು ಮತ್ತು ತೆಗೆದುಹಾಕಲು anti-virus app ಬಳಸಿ.
 10. ನಿಮ್ಮ ಫೋನಿನ ಮೆಮೊರಿಯ ನಕಲಿ ಫೈಲ್ಗಳು ಮತ್ತು ಸಂಪರ್ಕಗಳಂತಹ ಜಂಕ್ ಫೈಲ್ಗಳನ್ನು ತೆಗೆದುಹಾಕಿ.
 11. ಆಂಡ್ರಾಯ್ಡ್ ಬೂಸ್ಟರ್ ಅಪ್ಲಿಕೇಶನ್ ಅನ್ನು ಚಲಾಯಿಸಿ .
 12.  ನಿಮ್ಮ ಬ್ರೌಸರ್ ನಲ್ಲಿ cache ಮತ್ತು ಹಿಸ್ಟರಿಯನ್ನು ಆಗಾಗ ತೆಗೆದುಹಾಕಿ. ಇಂಟರ್ನೆಟ್ ನ ಅಂತರ್ಜಾಲ ವೇಗವನ್ನು ಹೆಚ್ಚಿಸಲು ಇದು ಸುಲಭವಾಗುತ್ತದೆ.
 13. ನಿಮ್ಮ ಫೋನಿನ ಉತ್ತಮ ಆರೋಗ್ಯಕ್ಕೆ ನೀವು ನಿಯಮಿತವಾಗಿ ಈ ತಂತ್ರಗಳನ್ನು ಪ್ರಯತ್ನಿಸಬೇಕು.
 14. ಫೋನಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಇರುವ ಅಪ್ಲಿಕೇಶನ್ ಅನ್ನು ಬಳಸಿಕೊಳ್ಳಬಹುದು.

ಇವಿಷ್ಟು ಆಂಡ್ರಾಯ್ಡ್ ಫೋನ್ ವೇಗಗೊಳಿಸುವುದು ಹೇಗೆ ಎಂಬುವುದಕ್ಕೆ ಉತ್ತರ , ನೀವು ಒಮ್ಮೆ ಇವೆಲ್ಲವನ್ನೂ ಪ್ರಯತ್ನಿಸಿ ನೋಡಿ , ಇನ್ನೆಂದು ಯಾರನ್ನು ನೀವು ಆಂಡ್ರಾಯ್ಡ್ ಫೋನ್ ವೇಗಗೊಳಿಸುವುದು ಹೇಗೆ ಎಂದು ಕೇಳುವುದಿಲ್ಲ. -| itskannada Technology


WebTitle : How To Speed Up Android Phone

Keyword : ಆಂಡ್ರಾಯ್ಡ್ ಫೋನ್ ವೇಗಗೊಳಿಸುವುದು ಹೇಗೆ , How To Speed Up Android Phone .


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ತಂತ್ರಜ್ಞಾನ ಸುದ್ದಿಗಾಗಿ ತಂತ್ರ-ಜ್ಞಾನ  ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ತಂತ್ರಜ್ಞಾನ ಪುಟ –ಕನ್ನಡ ತಂತ್ರಜ್ಞಾನ-ಇಲ್ಲವೇ ವಿಭಾಗ ಕನ್ನಡ ಗ್ಯಾಜೆಟ್ಗಳ ಸುದ್ದಿ ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in Kannada Technology  click Kannada Technology News or look at Kannada Gadgets News

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada