Welcome To Kannada News - itskannada.in

ಶನಿದೇವನಿಗೆ ಎಳ್ಳೆಣ್ಣೆ ಅರ್ಪಿಸುವ ಕಾರಣ ?

why mustard oil to Lord Shanidev | itskannada Astrology

(itskannada): ಶನಿದೇವನಿಗೆ ಎಳ್ಳೆಣ್ಣೆ ಅರ್ಪಿಸುವ ಕಾರಣ – ಶನಿಯ ಶಕ್ತಿ ನಮ್ಮ ಪುರಾಣ ಕಥೆಗಳಿಂದ ನಮಗೆಲ್ಲಾ ಗೊತ್ತೇ, ಇದೆ ಜಗತ್ತನ್ನು ಆಳುವ ಒಂಬತ್ತು ಗ್ರಹಗಳ ಪೈಕಿ ಶನಿ 7ನೇಯ ಸ್ಥಾನದಲ್ಲಿದೆ. ಇದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ದುರಾದೃಷ್ಟಕರ ಎನ್ನಲಾಗುತ್ತದೆ ಭೂಮಿಯಿಂದ ಶನಿಯ ದೂರ 9 ಕೋಟಿ ಮೈಲಿಗಳು. ಇದರ ಗುರುತ್ವಾಕರ್ಷಣ ಶಕ್ತಿ ಭೂಮಿಗಿಂತ ಬರೋಬರಿ 95 ಪಟ್ಟು ಹೆಚ್ಚು. ಇದು 20 ಕ್ಕೂ ಹೆಚ್ಚು ಉಪಗ್ರಹಗಳನ್ನು ಹೊಂದಿದೆ. ಜೋತಿಷ್ಯ ಪದಗಳಲ್ಲಿ ಕೆಟ್ಟ ಪ್ರಭಾವವನ್ನು ಶನಿಗೆ ಹೋಲಿಸುತ್ತಾರೆ. ಹಾಗೂ ಇದು ಹಿಂದೂ ದೈವವೂ ಹೌದು.

  • ಶನಿದೇವ , ಸೂರ್ಯನ ಮಗ  ಮತ್ತು ಸೂರ್ಯನ ಪತ್ನಿ ಛಾಯಾ, ಆದ್ದರಿಂದ ಶನಿದೇವನನ್ನು ಛಾಯಪುತ್ರ ಎಂದೂ ಕರೆಯುತ್ತಾರೆ. ಶನಿದೇವನು ಯಮನ ಸೋದರ ಸಂಬಂಧಿ ಎಂದು ಹೇಳಲಾಗುತ್ತದೆ.
  • ಶನಿದೇವನು ಮೊದಲ ಬಾರಿಗೆ ತನ್ನ ಕಣ್ಣು ತೆರೆದಾಗ, ಸೂರ್ಯನು ಗ್ರಹಣಕ್ಕೆ ಹೋದನು, ಇದು ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಶನಿಯ ಪ್ರಭಾವವನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

More From Web

  • ಕಷ್ಟವನ್ನು ತಡೆಗಟ್ಟಲು ಮತ್ತು ಅಡೆತಡೆಗಳನ್ನು ತೆಗೆದುಹಾಕಲು ಹಿಂದೂಗಳು ಪ್ರಾರ್ಥಿಸುವ ಅತ್ಯಂತ ಜನಪ್ರಿಯ ದೇವತೆಗಳಲ್ಲಿ ಶನಿದೇವ ಅಗ್ರನು. ಅನುವಾದದಲ್ಲಿ, ಶನಿ ಎಂದರೆ “ನಿಧಾನವಾಗಿ-ಚಲಿಸುವವನು”.
  • ಪುರಾಣಗಳ ಪ್ರಕಾರ, ಶನಿ “ಮಾನವ ಹೃದಯದ ದುರ್ಗವನ್ನು ಮತ್ತು ಅಲ್ಲಿ ಅಡಗಿರುವ ಅಪಾಯಗಳನ್ನೂ” ಮೇಲ್ವಿಚಾರಣೆ ಮಾಡುತ್ತಾನೆ.
  • ಶನಿಯು ಕಪ್ಪು ಬಣ್ಣವನ್ನು ಹೊಂದಿದ್ದು, ಬಿಲ್ಲು ಮತ್ತು ಬಾಣವನ್ನು ಹೊತ್ತುಕೊಂಡು ರಣಹದ್ದು ಅಥವಾ ಕಾಗೆ ಮೇಲೆ ಸವಾರಿ ಮಾಡುವಂತೆ.
  • ನೀಲಿ ಬಟ್ಟೆ, ನೀಲಿ ಹೂವುಗಳು ಮತ್ತು ನೀಲಮಣಿ ಧರಿಸಿರುವಂತೆ ಶನಿಯನ್ನು ಚಿತ್ರಿಸಲಾಗಿದೆ.

ಶನಿದೇವನ ಬಗೆಗೆ ಪೂರ್ಣವಾಗಿ ಇನ್ನೊಂದು ಲೇಖನದಲ್ಲಿ ತಿಳಿಯೋಣ , ಈಗ ಶನಿದೇವನಿಗೆ ಎಳ್ಳೆಣ್ಣೆ ಅರ್ಪಿಸುವ ಕಾರಣ ತಿಳಿಯೋಣ .

ಶನಿದೇವನಿಗೆ ಎಳ್ಳೆಣ್ಣೆ ಅರ್ಪಿಸುವ ಕಾರಣ

ನಮಗೆ ಗೊತ್ತಿಲ್ಲದ , ಶನಿದೇವನಿಗೆ ಎಳ್ಳೆಣ್ಣೆ ಅರ್ಪಿಸುವ ಕಾರಣ ತಿಳಿಯಿರಿ , ಎಲ್ಲಾ ವಿಷಯಗಳಿಗೆ ಒಂದೊಂದು ಕಥೆಗಳಿರುವಂತೆ , ಇದಕ್ಕೂ ಒಂದು ಕಥೆ ಇದೆ .

ಇಲ್ಲಿದೆ ಶನಿದೇವನಿಗೆ ಎಳ್ಳೆಣ್ಣೆ ಅರ್ಪಿಸುವ ಕಾರಣ  ವಿಶೇಷ ಹಾಗೂ ಕುತೂಹಲಕಾರಿ ಕಥೆ , ಆ ಬನ್ನಿ ಸಮಯ ವ್ಯರ್ಥಮಾಡದೆ ಆ ಕಥೆ ಏನೆಂದು ನೋಡೋಣ.

ಒಂದು ದಿನ , ವೀರ ಹನುಮಂತನು ತನ್ನ ಪ್ರೀತಿಪಾತ್ರ ಶ್ರೀ ರಾಮನ ಸೇವೆಮಾಡುತ್ತಿದ್ದನು .  ಇದನ್ನು ಗಮನಿಸಿದ ಶನಿದೇವನು ಹನುಮಂತನಿಗೆ ಹೇಗಾದರೂ ಮಾಡಿ ತೊಂದರೆ ಕೊಡಬೇಕು ಅಂದುಕೊಂಡನು.

ಹನುಮಂತನಿಗೆ ಸಮಸ್ಯೆಗಳನ್ನು ಸೃಷ್ಟಿಸಲು ಬಯಸಿದನು , ಅವನ ಕಾರ್ಯಕ್ಕೆ ಅಡ್ಡಿಪಡಿಸುವುದು , ತೊದರೆಗೊಳಿಸುವುದು ಶನಿದೇವನ ನಿರ್ಧಾರವಾಗಿತ್ತು.

ಶನಿದೇವನು ಹನುಮಂತನಿಗೆ ಸಮಸ್ಯೆಗಳನ್ನು ಸೃಷ್ಟಿಸಲು ನಿರ್ಧರಿಸಿದನು.

why mustard oil to Lord Shanidev-itskannada

ಶನಿದೇವನು ಹನುಮಂತನಿಗೆ ತೊಂದರೆಕೊಡಲು ಮುಂದಾದನು , ಶ್ರೀ ರಾಮನ ಸೇವೆಯಲ್ಲಿ ನಿರತನಾಗಿದ್ದ ಹನುಮಂತನಿಗೆ ಇದರಿಂದ ಸಿಟ್ಟು ಬಂದಂತಾಗಿ , ಕೋಪದಿಂದ ಶನಿಯ ಕಡೆಗೆ ನೋಡುತ್ತಾನೆ. 

ಹನುಮಂತನು ತನ್ನ ಯಜಮಾನನ ಸೇವೆಗೆ ಅಡ್ಡಿಗೊಳಿಸುತ್ತಿರುವ ಶನಿಯ ಮೇಲೆ ಕೊಪಗೊಂಡಿದ್ದನು , ಶನಿದೇವನ ತೊಂದರೆಯಿಂದಾಗಿ ಎಲ್ಲಿ ಶ್ರೀ ರಾಮನ ಸೇವೆಗೆ ವಿಳಂಬವಾಗುತ್ತದೆಂದು ತಿಳಿದು ತಾನು ಇದ್ದಲ್ಲಿಯೇ ಇದ್ದು ತನ್ನ ಸೇವೆಯನ್ನು ಮುಂದುವರೆಸಿ ತನ್ನ ಬಾಲವನ್ನು ಉದ್ದಗೊಳಿಸಿ ಶನಿದೇವನನ್ನು ಗಟ್ಟಿಯಾಗಿ ಸುತ್ತಿ ಕೊಂಡು ಒಂದು ಬಂಡೆಯ ಕಡೆ ದೂಡಿದನು , ತನ್ನ ಬಾಲದಿಂದ ಶನಿದೇವನನ್ನು ಬಿಗಿಹಿಡಿದು , ಬಂಡೆಯ ಮೇಲೆಯೇ ಜಗ್ಗಿದನು , ಶನಿದೇವನಿಗೆ ಹನುಮಂತನ ಬಾಲದ ಪಟ್ಟಿನಿಂದ ಬಿಡಿಸಿಕೊಳ್ಳಲು ಆಗಲೇ ಇಲ್ಲ.

ಇತ್ತ ಹನುಮಂತನು ತನ್ನ ಸೇವೆಯನ್ನು ಮುಂದುವರೆಸಿದನು , ತನ್ನ ಎಲ್ಲಾ ಸೇವೆಗಳು ಪೂರ್ಣಗೊಂಡ ಬಳಿಕ  , ಅಂತಿಮವಾಗಿ ಅವರ ಕೆಲಸ ಮುಗಿದ ನಂತರ ಹನುಮಂತನು ಶನಿಯ ಕಡೆಗೆ ಮೆಲ್ಲಗೆ ತಿರುಗಿನೋಡುತ್ತಾನೆ. ಅಷ್ಟೊತ್ತಿಗಾಗಲೇ ಶನಿದೇವನು ಉಸಿರು ಕಟ್ಟಂತೆ ಆಗಿ , ಹನುಮಂತನಲ್ಲಿ ಶನಿ ತನ್ನ ತಪ್ಪುಗಳಿಗಾಗಿ ಕ್ಷಮೆಯಾಚಿಸುತ್ತಾನೆ. ಹನುಮನನ್ನು ಒಲಿಸಲು ಶನಿದೇವನು “ರಾಮಾನುಸಾರ ಮಾಡಿದ ಯಾವುದೇ ಕೆಲಸವನ್ನು ಎಂದಿಗೂ ತಡೆಯೊಡ್ಡುವುದಿಲ್ಲ ಮತ್ತು ರಾಮ ಮತ್ತು ಹನುಮಂತರ ನಿಜವಾದ ಭಕ್ತರಿಗೆ ಎಂದಿಗೂ ಹಾನಿಯನ್ನುಂಟು ಮಾಡುವುದಿಲ್ಲ ಎಂದು ಶನಿದೇವ ಹನುಮಂತನಿಗೆ ಬರವಸೆ ನೀಡುತ್ತಾನೆ.

ಇದನ್ನು ಕೇಳಿದ ಹನುಮಂತನಿಗೆ ಸಂತೋಷವಾಗುತ್ತದೆ, ಮತ್ತು ತನ್ನ ಬಾಲದಿಂದ ಬಂದಿಸಿದ್ದ ಶನಿದೇವನನ್ನು ಬಿಡುಗಡೆಗೊಳಿಸುತ್ತಾನೆ.

ಹನುಮಂತನು ನಿರಂತರವಾಗಿ ಶನಿದೇವನನ್ನು ದೊಡ್ಡ ಕಲ್ಲಿನ ಬಂಡೆಗೆ ಬಡಿದುದರಿಂದ, ಶನಿದೇವನ ದೇಹದಲ್ಲಿ ತೀವ್ರವಾದ ಗಾಯಗಳು ಆಗಿದ್ದವು ಮತ್ತು ಅಪಾರ ನೋವು ಉಂಟಾಗಿತ್ತು.

ತನ್ನ ಗಾಯಗಳಿಗೆ ಸಂಬಂಧಿಸಿದಂತೆ ನೋವು ಪರಿಹಾರಕ್ಕೆ ಕೇಳಿದಾಗ , ಹನುಮಂತನು ಎಳ್ಳೆಣ್ಣೆ ನೀಡುತ್ತಾನೆ.  ಹನುಮಾನ್ ನೀಡಿದ ತೈಲವನ್ನು ಹಚ್ಚಿದ ಶನಿದೇವನಿಗೆ ತನ್ನ  ನೋವು, ಗಾಯ ಮತ್ತು ಚರ್ಮವು ಎಲ್ಲವೂ ಶಮನಗೊಳ್ಳುತ್ತದೆ. ಶನಿದೇವನು ಎಲ್ಲಾ ನೋವು ಮತ್ತು ತೊಂದರೆಯಿಂದ ಬಿಡುಗಡೆಗೊಂಡಿದ್ದರಿಂದ ಬಹಳ ಖುಷಿಪಡುತ್ತಾನೆ. ಶನಿದೇವನ ನೋವು ಕಡಿಮೆ ಮಾಡಿದ ಎಣ್ಣೆ , ಅಂದಿನಿಂದ ಶನಿದೇವರಿಗೆ ಈ ಎಣ್ಣೆಯನ್ನು ಅರ್ಪಿಸುವುದು ಸಂಪ್ರದಾಯವಾಗಿ ಪ್ರಾರಂಭವಾಯಿತು. ಅದರಲ್ಲೂ ಕಪ್ಪು ಎಳ್ಳಿನ ಎಣ್ಣೆ ಇನ್ನೂ ಶ್ರೇಷ್ಠ. ಅದಕ್ಕಾಗಿಯೇ ಇಂದಿಗೂ, ಶನಿದೇವನನ್ನು ಪೂಜಿಸುವ ಜನರು ಶನಿದೇವನನ್ನು ಸಂತೋಷಪಡಿಸಲು, ಈ ತೈಲವನ್ನು ಕೊಡುತ್ತಾರೆ.ಇದುವೇ ಶನಿದೇವನಿಗೆ ಎಳ್ಳೆಣ್ಣೆ ಅರ್ಪಿಸುವ ಕಾರಣ ,  ಶನಿದೇವನನ್ನು ಒಲಿಸಿಕೊಳ್ಳಲು , ಶನಿಯ ಪ್ರಭಾವದಿಂದ ತಪ್ಪಿಸಿಕೊಳ್ಳಲು , ಶನಿಯ ಪೂಜೆಗೆ ಶನಿವಾರದಂದು ಎಳ್ಳೆಣ್ಣೆ ಅರ್ಪಿಸುವ ಕಾರಣ ತಿಳಿದುಕೊಂಡಿರಲ್ಲವೇ  . . ಎಲ್ಲರೂ ಒಮ್ಮೆ ಹೇಳಿ ಜೈ ಶನಿದೇವ..-| itskannada Astrology

webtitle : why mustard oil to Lord Shanidev

Keyword : ಶನಿದೇವನಿಗೆ ಎಳ್ಳೆಣ್ಣೆ ಅರ್ಪಿಸುವ ಕಾರಣ , why mustard oil to Lord Shanidev .


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಜೋತಿಷ್ಯಕ್ಕಾಗಿ ರಾಶಿ-ನಕ್ಷತ್ರ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಜೋತಿಷ್ಯ ಪುಟ –ಕನ್ನಡ ಜ್ಯೋತಿಷ್ಯ-ಇಲ್ಲವೇ ವಿಭಾಗ ಕನ್ನಡ ದೈನಂದಿನ ಜಾತಕ ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in Kannada Jyothishya click Kannada Jyothishya or look at Kannada Daily Horoscope

Quick Links : Film News | Politics News | Crime News | Health Tips | India News | World News
ನಮ್ಮ ಕನ್ನಡ ಸುದ್ದಿ ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು Video News ಸಮೇತ Twitter, Google+ ಮತ್ತು Facebook ನಲ್ಲಿ ಕಾಣಬಹುದು.

Read More From Online Content