ಈ ದಿನಗಳಲ್ಲಿ ಹೇರ್ ಕಟ್ ಮಾಡಿಸಬೇಡಿ-ಹುಷಾರ್

Dont Cut Hair These days - itskannada Astrology

90

(itskannada): ಈ ದಿನಗಳಲ್ಲಿ ಹೇರ್ ಕಟ್ ಮಾಡಿಸಬೇಡಿ : (Dont Cut Hair These days
)  ಕೂದಲನ್ನು ಕತ್ತರಿಸುವಿಕೆಯು ಕೆಲ ನಿರ್ದಿಷ್ಟದಿನಗಳಲ್ಲಿ ಕೆಟ್ಟ ಅದೃಷ್ಟವನ್ನು ಉಂಟುಮಾಡುತ್ತದೆ ಶನಿಯ ಕೋಪವನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ.

ನಮಗೆ ಇನ್ನೂ ತಿಳಿಯದ ಹಲವು ವಿಚಾರಗಳು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ನಮ್ಮ ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳಿವೆ. ಆಚಾರಗಳನ್ನು , ವಿಚಾರಗಳನ್ನು ,ಸೂಚನೆಗಳನ್ನು ಹೇಗೆ ಮತ್ತು ಯಾವಾಗ , ಅದರ ಉದ್ದೆಶಗಳೇನು ಎಂದು ಉಲ್ಲೇಖಿಸಲಾಗಿದೆ. ಆಧುನಿಕ ಜನರು ಈ ಬಗ್ಗೆ ಅರಿಯದೆ ಮೂಢನಂಬಿಕೆಗಳು ಎಂದು ಆ ಸಂಪ್ರದಾಯಗಳನ್ನು ಹೆಸರಿಸುತ್ತಾರೆ ಏಕೆಂದರೆ ಆ ಅಭ್ಯಾಸಗಳ ಪರಿಣಾಮವು ವಾಸ್ತವದಲ್ಲಿ ಅವರಿಗೆ ಕಂಡುಬರುವುದಿಲ್ಲ. ಕಾರಣ ಅವರೆಂದೂ ಆ ಆಚಾರಗಳನ್ನು ಪಾಲಿಸಲಿಲ್ಲ. ಯಾರು ಏನೇ ಅಂದರು , ಅವರವರ ಮೂಗಿನ ನೇರ ಮಾತಾಡಿದರು, ಹೇಗಾದರೂ ಈ ಸಂಪ್ರದಾಯಗಳು ನಮ್ಮ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತವೆ ಎಂಬುದು ಸತ್ಯ.  ಅದಕ್ಕೆ ತಕ್ಕ ಉದಾಹರಣೆ ಬಹುಪಾಲು ಜನರು ಇನ್ನೂ ಅಂತಹ ಆಚರಣೆಗಳು ಮತ್ತು ಆಚರಣೆಗಳಿಗೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ ಎನ್ನುವುದು.

ಈ ಸಂಪ್ರದಾಯಗಳಲ್ಲಿ ಕ್ಷೌರವನ್ನು ಕೆಲವು ನಿರ್ದಿಷ್ಟದ ದಿನಗಳಂದು ಮಾಡಿಸಬಾರದು ಎನ್ನುವುದು. ನಮ್ಮ ಹಿರಿಯರು ಹೇಳಿದ ಈ ದಿನಗಳಲ್ಲಿ ಹೇರ್ ಕಟ್ ಮಾಡಿಸಬೇಡಿ ಎಂದ ನಮ್ಮ ಹಿರಿಯರ ಆಜ್ಞೆ.

ಇಂದಿಗೂ ಸಹ ಹಿರಿಯರು , ನಾವು , ನಮ್ಮಲ್ಲಿ ಅನೇಕರು ವಾರದ ಕೆಲವು ದಿನಗಳಲ್ಲಿ ಕ್ಷೌರವನ್ನು ಮಾಡಿಸುವುದಿಲ್ಲ. ಆ ದಿನಗಳೇ  ಶುಕ್ರವಾರ, ಶನಿವಾರ ಮತ್ತು ಮಂಗಳವಾರ .

ವೈಜ್ಞಾನಿಕ ಹಾಗು ಪುರಾಣಕ್ಕೆ ಹತ್ತಿರವಾಗಿರುವ ಮುಖ್ಯ ಕಾರಣ , ಆ ದಿನಗಳಲ್ಲಿ ಗ್ರಹಗಳಿಂದ ವಿಶೇಷ ರೀತಿಯ ಕಿರಣಗಳು ಹೊರಬರುತ್ತವೆ ,   ಈ ಕಿರಣಗಳು ಆರೋಗ್ಯಕ್ಕೆ ಪರಿಣಾಮ ಬೀರಬಹುದು ಎಂದು ನಂಬಲಾಗಿದೆ.

Dont Cut Hair These days-itskannada

ಈ ಹಿಂದಿನ ಲೇಖನ ಮಹಿಳೆಯ ಕೂದಲಿನ ವಿಷಯಗಳು ಓದಿಲ್ಲವಾದರೆ ತಪ್ಪದೇ ಓದಿ…ವಿಷಯಗಳು ಸಮಯಕ್ಕೆ ಬದಲಾಗುತ್ತವೆ ಆದರೆ ಆಚಾರ ವಿಚಾರಗಳು ಎಂದಿಗೂ ಬದಲಾಗುವುದಿಲ್ಲ ,  ನೆನಪಿನಲ್ಲಿಟ್ಟುಕೊಳ್ಳಿ. ಈ ಸಂಪ್ರದಾಯದ ವಿಚಾರವನ್ನ ನಾವು ನಮ್ಮ ಮನಸ್ಸಿನಿಂದ ತರ್ಕಿಸಿದಾಗ ಅದರ ಹಿಂದಿರುವ ಕೆಲವು ಕಾರಣಗಳು ಗೋಚರಿಸುತ್ತವೆ.

ಅನೇಕ ಜನರು ಇದನ್ನು ಪ್ರಸ್ತಾಪಿಸದೆ , ಯಾವುದೇ ವೈಜ್ಞಾನಿಕ ಮೂಲವಿಲ್ಲದೆ ಮೂಢನಂಬಿಕೆ ಎಂದು ಹೇಳುವ ಮೂಲಕ ಸರಿಯಾದ ಬೆಳಕಿನಲ್ಲಿ ವಿಷಯಗಳನ್ನು  ಚರ್ಚಿಸುವ ಮಾರ್ಗ ಹುಡುಕಲೇ ಇಲ್ಲ.

ಈ ದಿನಗಳಲ್ಲಿ ಹೇರ್ ಕಟ್ ಮಾಡಿಸಬೇಡಿ ಎನ್ನಲು ಕೆಲವು ವಿಚಾರಗಳು 

  1. ಮಂಗಳವಾರ ಲಕ್ಷ್ಮಿಯದಿನ , ಈ ದಿನ ಸಾಲ ಮತ್ತು ಪಾವತಿಗಳನ್ನು ಮಾಡುವುದಿಲ್ಲ , ದುರ್ಗಾ ಮತ್ತು ಲಕ್ಷ್ಮಿಗಳನ್ನು ಪೂಜಿಸುವ ದಿನವಾದ್ದರಿಂದ , ಮಂಗಳಕರವಾದ ದಿನ ,ಈ ದಿನಗಳಲ್ಲಿ ಹೇರ್ ಕಟ್ ಮಾಡಿಸಬೇಡಿ ಎಂದು  ಹಿರಿಯರು ಹೇಳಿರುವುದನ್ನು ಪಾಲಿಸಲಾಗುತ್ತಿದೆ.
  2. ಲಕ್ಷ್ಮಿ ಕಣ ಕಣದಲ್ಲೂ , ಎಲ್ಲಾ ಸ್ವರುಪದಲ್ಲೂ ಇರುತ್ತಾಳೆ, ಆದ್ದರಿಂದ ಈ ದಿನಗಳಂದು ಮನೆಯ ಸ್ವಚ್ಛ ಕಾರ್ಯ ಮಾಡುವುದಿಲ್ಲ. ಕಾರಣ ಲಕ್ಷ್ಮಿ ಮನೆಯಿಂದ ಹೊರಗೆ ಹೋಗದಿರಲಿ ಎಂಬುದು. ಅಂತೆಯೇ ಈ ದಿನಗಳಲ್ಲಿ ಹೇರ್ ಕಟ್ ಮಾಡಿಸಬೇಡಿ ಎಂಬುದು ಆಚರಣೆ.
  3. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳವಾರ ಕೂದಲು ಕತ್ತರಿಸುವುದು  ವ್ಯಕ್ತಿಯ ಜೀವಿತಾವಧಿಯನ್ನು ಸುಮಾರು ಎಂಟು ತಿಂಗಳು ಕಡಿಮೆಗೊಳಿಸುತ್ತದೆ . ಕೆಲವು ತಜ್ಞರು ಈ ತರ್ಕದ ಮೂಲಕ ಇಂದಿಗೂ ವಿವರಣೆಗಾಗಿ ಶೋಧಿಸುತ್ತಿದ್ದಾರೆ.
  4. ನಮ್ಮ ಕೂದಲಿನ ಬಣ್ಣವು ಕಪ್ಪು . ಆದ್ದರಿಂದ, ಶನಿಯು ನಮ್ಮ ದೇಹದ ಕೂದಲನ್ನು ಆಳುತ್ತಾನೆ. ಅವನ ದಿನವಾದ ಶನಿವಾರದಂದು ಕೂದಲು ಕತ್ತರಿಸುವುದು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ನಂಬಲಾಗಿದೆ.
  5. ದುರಾದೃಷ್ಟ : ಮನೆಯಿಂದ ಹೊರಗೆ ಎಸೆಯುವುದು, ಕೊಡುವುದು ಮತ್ತು ಕಳುಹಿಸುವುದು ಕೆಟ್ಟ ಅದೃಷ್ಟವನ್ನು ಉಂಟುಮಾಡುತ್ತದೆ ಎಂಬುದು ನಂಬಿಕೆ.
    1. ಹೀಗಾಗಿ, ಇದೇ ತರ್ಕವು ನಾವು ಶುಕ್ರವಾರ, ಶನಿವಾರ ಮತ್ತು ಮಂಗಳವಾರ ಹೇರ್ ಕಟ್ ಮಾಡಿಸದೆ ಇರುವ  ಎಲ್ಲಾ ನಂಬಿಕೆಗಳಿಗೆ ಮತ್ತು ಅಭ್ಯಾಸಗಳಿಗೆ ಅನ್ವಯಿಸುತ್ತದೆ.

ಈ ದಿನಗಳಂದು  ಕೂದಲನ್ನು ಕತ್ತರಿಸುವ ಮತ್ತು ವಿರುದ್ಧವಾಗಿ ವಾದಗಳು ಇದ್ದರೂ, ಪ್ರತಿಯೊಬ್ಬರೂ ತಾನು ತೆಗೆದುಕೊಳ್ಳುವ ನಿಲುವನ್ನು ನಿರ್ಧರಿಸುವಲ್ಲಿ ತನ್ನ ಹೃದಯವನ್ನು ಅನುಸರಿಸಬೇಕಾಗಿದೆ.

ಕುಟುಂಬದಲ್ಲಿ ಹಿರಿಯರು ಹಂಚಿಕೊಂಡ ನಂಬಿಕೆಗಳು  , ಅವರ ವಿಚಾರಗಳನ್ನು ಅವರ ಭಾವನೆಗಳನ್ನು ಗೌರವಿಸಲು ನಾವು ಇಂದಿಗೂ ಇದನ್ನು ಪಾಲಿಸುತ್ತಿದ್ದೇವೆ.

ಆದರೆ ಯಾವುದೋ ಕಾರಣದ ಹೆಸರಿನಲ್ಲಿ, ಸಾಂಪ್ರದಾಯಿಕ ನಂಬಿಕೆಗಳನ್ನು ದೂರವಿಡಲಾಗದು ಮತ್ತು ಸಂಪ್ರದಾಯದ ಹೆಸರಿನಲ್ಲಿಯೂ ನಾವು ಅಲ್ಲದ ಮೂಢನಂಬಿಕೆಗಳನ್ನು ಪ್ರೋತ್ಸಾಹಿಸಬಾರದು.

ಆದರೆ ತರ್ಕಕ್ಕಿಂತ ಈ ದಿನಗಳಲ್ಲಿ ಹೇರ್ ಕಟ್ ಮಾಡಿಸಬೇಡಿ , ಉಳಿದ ದಿನಗಳಲ್ಲಿ ಮಾಡಿಸಿದರಾಯಿತು , ನಾವು ಕಳೆದು ಕೊಳ್ಳುವುದು ಏನು ಇಲ್ಲವಲ್ಲ. -|itskannada Astrology


webtitle : Dont Cut Hair These days , Dont Cut Hair These days ,

KeyWord : ಈ ದಿನಗಳಲ್ಲಿ ಹೇರ್ ಕಟ್ ಮಾಡಿಸಬೇಡಿ , Dont Cut Hair These days . 


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಜೋತಿಷ್ಯಕ್ಕಾಗಿ ರಾಶಿ-ನಕ್ಷತ್ರ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಜೋತಿಷ್ಯ ಪುಟ –ಕನ್ನಡ ಜ್ಯೋತಿಷ್ಯ-ಇಲ್ಲವೇ ವಿಭಾಗ ಕನ್ನಡ ದೈನಂದಿನ ಜಾತಕ ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in Kannada Jyothishya click Kannada Jyothishya or look at Kannada Daily Horoscope


ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ

Stay Updated with itsKannada, to know more Latest Kannada News - Read Kannada News Today Updates Kannada News Online - Get Latest News Headlines Breaking News in Kannada


.
error: Content is protected !!