Welcome To Kannada News - itskannada.in

ಅಭಿನಂದನ್ ವರ್ತಮಾನ್ ಗೆ ” ಪರಮ ವೀರ ಚಕ್ರ ” ಪ್ರಶಸ್ತಿ

Tamil Nadu Chief Minister Seeks Param Vir Chakra For Abhinandan Varthaman - its Kannada News

ಅಭಿನಂದನ್ ವರ್ತಮಾನ್ ಗೆ ” ಪರಮ ವೀರ ಚಕ್ರ ” ಪ್ರಶಸ್ತಿ

ನವದೆಹಲಿ : ಪಾಕಿಸ್ತಾನ ಎಫ್-16 ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಿ ಒಂದು ಯುದ್ಧ ವಿಮಾನವನ್ನು ಹೊಡೆದುರುಳಿಸಿ ನಂತರ ಆಕಸ್ಮಿಕವಾಗಿ ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ ಸೇನೆಯ ವಶಕ್ಕೆ ಸಿಕ್ಕಿಯಾವುದಕ್ಕೂ ದೃತಿಗೆಡದೆ ದೈರ್ಯವಾಗಿ ನಿಭಾಯಿಸಿ ಕೇವಲ 48 ಘಂಟೆಗಳಲ್ಲಿ ಮಾತೃಭೂಮಿಗೆ ಮರಳಿದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಹೆಸರು ಇನ್ನು ಮಾಸದ ಚರಿತ್ರೆಯಾಗಿ ಉಳಿಯುತ್ತದೆ.

ಅದಾಗಲೇ ಅಭಿನಂದನ್ ಎಂಬ ಹೆಸರು ಕೇಳಿದರೆ ಸಾಕು ದೇಶ ಭಕ್ತಿ ಭಾವ ಮೂಡುತ್ತದೆ. ಇನ್ನು ಮುಂದೆ ಜನರಲ್ಲಿ ಆ ಹೆಸರು ಶಾಶ್ವತವಾಗಿ ಉಳಿಯಲಿದೆ.

More From Web

ಇದೀಗ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ದೈರ್ಯಕ್ಕೆ “ಪರಮ ವೀರ ಚಕ್ರ” ಪ್ರಶಸ್ತಿ ಕೂಡ ಲಭಿಸುವ ಎಲ್ಲಾ ಅವಕಾಶವಿದೆ.

ಮೂಲತಃ ತಮಿಳುನಾಡಿನ ಅಭಿನಂದನ್ ಗೆ ” ಪರಮ ವೀರ ಚಕ್ರ ಪ್ರಶಸ್ತಿ ಕೊಡ ಬೇಕೆಂದು ಆ ರಾಷ್ಟ್ರ ಮುಖ್ಯಮಂತ್ರಿ ಕೆ.ಪಳನಿ ಸ್ವಾಮಿ ಪ್ರಧಾನಿ ಮೋದಿ ಬಳಿ ಮನವಿ ಮಾಡಿದ್ದಾರೆ.

ಇದೆ ವಿಚಾರವಾಗಿ ಅವರು ಪ್ರಧಾನಿ ಮೋದಿಗೆ ಇಂದು ಮನವಿ ಪತ್ರ ಕೂಡ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಕೂಡ ಇದಕ್ಕೆ ಧನಾತ್ಮಕ ಪ್ರತಿಕ್ರಿಯೆ ನೀಡುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಗೆ “ಪರಮ ವೀರ ಚಕ್ರ” ಪ್ರಶಸ್ತಿ ಲಭಿಸಲಿ ಎಂದು ನಾವೆಲ್ಲಾ ಆಶಿಸೋಣ.////


News Title : Tamil Nadu Chief Minister Seeks Param Vir Chakra For Abhinandan Varthaman
(ಕನ್ನಡ ಸುದ್ದಿಗಳು from itskannada.in , No. 1 News Portal for Kannadigas)

Kannada News Stay Updated with itsKannada.in to Know more India News , National News Kannada and all  Latest Kannada News Today.


Quick Links : Film News | Politics News | Crime News | Health Tips | India News | World News
ನಮ್ಮ ಕನ್ನಡ ಸುದ್ದಿ ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು Video News ಸಮೇತ Twitter, Google+ ಮತ್ತು Facebook ನಲ್ಲಿ ಕಾಣಬಹುದು.

Read More From Online Content