Welcome To Kannada News - itskannada.in

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಕ್ಸಲರ ಚಟುವಟಿಕೆ ಹೆಚ್ಚುತ್ತದೆ – ಬಿಜೆಪಿ ಅಧ್ಯಕ್ಷ ಅಮಿತ್ ಶಾ

If Congress comes to power, Naxal activity will increase, says BJP president Amit Shah

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಕ್ಸಲರ ಚಟುವಟಿಕೆ ಹೆಚ್ಚುತ್ತದೆ – ಬಿಜೆಪಿ ಅಧ್ಯಕ್ಷ ಅಮಿತ್ ಶಾ

ರಾಯ್ಪುರ್ : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ನಕ್ಸಲರ ಚಟುವಟಿಕೆ ಹೆಚ್ಚುತ್ತದೆ, ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ರಾಯ್ಪುರದಲ್ಲಿ ಪಕ್ಷದ ಸಭೆಯೊಂದರಲ್ಲಿ ಮಾತನಾಡಿದ ಅವರು, “ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ನಕ್ಸಲ್ ಚಟುವಟಿಕೆ ಉದ್ಭವಿಸುತ್ತದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ನಕ್ಸಲ್ ಚಟುವಟಿಕೆ ವ್ಯಾಪಿಸಿ , ಆ ಪಕ್ಷ ಅಧಿಕಾರ ಕಳೆದು ಕೊಂಡರೆ ಬಲಹೀನವಾಗುತ್ತದೆ ಎಂಬ ತೀವ್ರ ಆರೋಪ ಮಾಡಿದ್ದಾರೆ. ಅಲ್ಲದೆ ಎಲ್ಲಿ ಕಾಂಗ್ರೆಸ್ ಇರುತ್ತದೋ ಅಲ್ಲಿ ನಕ್ಸಲ್ ಇರುತ್ತದೆ ಎಂದು ಟೀಕಿಸಿದ್ದಾರೆ.

ಎಪಿ ಮತ್ತು ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗಲೇ ನಕ್ಸಲ್ ವ್ಯಾಪಿಸಿದ್ದು, ಆ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದಾಗ ನಕ್ಸಲೀಯರು ದುರ್ಬಲಗೊಂಡಿದ್ದರು ಎಂದಿದ್ದಾರೆ. ಅದಲ್ಲದೆ ನಕ್ಸಲರಿಗೂ ಕಾಂಗ್ರೆಸ್ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ.

ಮನಮೋಹನ್ ಸಿಂಗ್ ಆಡಳಿತದ ಅವಧಿಯಲ್ಲಿ, ಪಾಕಿಸ್ತಾನದ ಗಡಿಯನ್ನು ದಾಟಿ ನಮ್ಮ ಸೈನಿಕರ ತಲೆಗಳನ್ನು ಕಡೆದು ತೆಗೆದುಕೊಂದು ಹೋದರು , ಆದರೆ ಆ ಪಕ್ಷಕ್ಕೆ ಯಾವುದೇ ಸೇಡು ಗೋಚರಿಸಲಿಲ್ಲ.

ಮೋದಿ ಆಳ್ವಿಕೆಯಲ್ಲಿ ದೇಶದ ಗಡಿಯು ಸುರಕ್ಷಿತವಾಗಿದೆ. ವಾಯು ಧಾಳಿಗಳಿಂದ ಯಾರೂ ಭಾರತೀಯ ಗಡಿಯನ್ನು ದಾಟಲು ಸಾಧ್ಯವಿಲ್ಲ ಎಂದು ನಾವು ಸ್ಪಷ್ಟ ಸಂದೇಶವನ್ನು ಕಳುಹಿಸಿದ್ದೇವೆ, ಎಂದಿದ್ದಾರೆ////


News Title : If Congress comes to power, Naxal activity will increase, says BJP president Amit Shah
(ಕನ್ನಡ ಸುದ್ದಿಗಳು from itskannada.in , No. 1 News Portal for Kannadigas)

Kannada News Stay Updated with itsKannada.in to Know more India News , National News Kannada and all  Latest Kannada News Today.


Quick Links : Film News | Politics News | Crime News | Health Tips | India News | World News
ನಮ್ಮ ಕನ್ನಡ ಸುದ್ದಿ ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು Video News ಸಮೇತ Twitter, Google+ ಮತ್ತು Facebook ನಲ್ಲಿ ಕಾಣಬಹುದು.

Read More From Online Content