Welcome To Kannada News - itskannada.in

ಸಹಾಯ ಕೇಳಿ ಬಂದ ಮಹಿಳೆಯನ್ನ ಬಳಸಿಕೊಂಡ ಎಂ.ಎಲ್.ಎ

Fir Against Rithala Mla Mahendra Goyal

ಸಹಾಯ ಕೇಳಿ ಬಂದ ಮಹಿಳೆಯನ್ನ ಬಳಸಿಕೊಂಡ ಎಂ.ಎಲ್.ಎ

ದೆಹಲಿ : ಆಮ್ ಆದ್ಮಿ ಪಾರ್ಟಿಗೆ ಸೇರಿದ ಎಂ.ಎಲ್.ಎ ಮಹೇಂದರ್ ಗೋಯಲ್ ತನ್ನ ಮೇಲೆ ಅತ್ಯಾಚಾರ ಮಾಡಿರುವುದಾಗಿ ಮಹಿಳೆಯೊಬ್ಬಳು ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ಸಧ್ಯ ಈ ಕುರಿತಾಗಿ ಪ್ರಶಾಂತ್ ವಿಹಾರ್ ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ತನ್ನ ಪತಿಯ ಮುಖಾಂತರ ಎಂ.ಎಲ್.ಎ ಪರಿಚಯವಿದ್ದಾಗಿಯೂ ತನ್ನ ಪತಿಯ ಮರಣದ ನಂತರ ಮಾಸಿಕ ವಿಧವಾ ವೇತನದ ಬಗ್ಗೆ ಮಾತನಾಡಲು ಹೋದಾಗ , ಮಹೇಂದರ್ ಗೋಯಲ್ ಮನೆಗೆ ಬರುವಂತೆ ಹೇಳಿ ತನ್ನ ಮೇಲೆ ಅತ್ಯಾಚಾರ ಮಾಡಿರುವುದಾಗಿ ಮಹಿಳೆ ದೂರಿದ್ದಾಳೆ.

More From Web

ಅದಾದ ತಿಂಗಳ ಬಳಿಕ ಮತ್ತೆ ಅವರ ಕಚೇರಿಗೆ ಹೋದಾಗ ಮತ್ತೊಮ್ಮೆ ತನ್ನ ಮೇಲೆ ಅತ್ಯಾಚಾರ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಇದನ್ನೂ ಓದಿ : ಶಾಕಿಂಗ್ , ಹಲ್ವಾ ಕೊಟ್ಟು ಜಯಲಲಿತಾ ಕೊಲೆ ! ಏನಿದು ಗಂಭೀರ ಆರೋಪ ?

ಅಂದೇ ಪೊಲೀಸರ ಮೊರೆ ಹೋಗಲು ನಿರ್ಧರಿಸಿದ್ದೆ ಆದರೆ , ಎಂ.ಎಲ್.ಎ ಕ್ಷಮಾಪಣೆ ಕೇಳಿದಾಗ ವಿಷಯವನ್ನು ದೊಡ್ಡದು ಮಾಡುವುದು ಬೇಡ ಎಂದು ಸುಮ್ಮನಾದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.

ಆದರೆ ಕೆಲವು ದಿನಗಳಿಂದ ಎಂ.ಎಲ್.ಎ ಸಹೋದರ ತನಗೆ ಸಂಬಂದಿಸಿದ ಅಶ್ಲೀಲ ಫೋಟೋ, ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸುತ್ತಿದ್ದನು, ಈಗಾಗಿ ಪೊಲೀಸರ ಮೊರೆ ಹೋಗಿರುವುದಾಗಿ ಮಹಿಳೆ ತಿಳಿಸಿದ್ದಾಳೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಎಂ.ಎಲ್.ಎ, ಮಹಿಳೆ ತನಗೆ ಗೊತ್ತಿರುವವಳಾಗಿ ಯಾಕೆ ಈ ರೀತಿಯ ನಿರಾಧಾರ ಆರೋಪ ಮಾಡುತ್ತಿದ್ದಾಳೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ : Breaking News : ಅಭಿನಂದನ್ ಹೆಸರಿನಲ್ಲಿ ತೆರೆದವು ನಕಲಿ ಖಾತೆಗಳು

ಸಧ್ಯ ಆರೋಪಿ ಎಂ.ಎಲ್.ಎ ವಿರುದ್ಧ 376 (ಅತ್ಯಾಚಾರ) 506 (ಬೆದರಿಕೆ) 509 (ಮಹಿಳಾ ಮರ್ಯಾದೆಗೆ ದಕ್ಕೆ) ಸೆಕ್ಷನ್ನಲ್ಲಿ ದೂರು ದಾಖಲಿಸಿರುವುದಾಗಿ ರೋಹಿಣಿ ಜಿಲ್ಲೆಯ ಡಿಎಸ್ಪಿ ಮಿಶ್ರಾ ತಿಳಿಸಿದ್ದಾರೆ.////


News Title : Fir Against Rithala Mla Mahendra Goyal
(ಕನ್ನಡ ಸುದ್ದಿಗಳು from itskannada.in , No. 1 News Portal for Kannadigas)

Kannada News Stay Updated with itsKannada.in to Know more India News , National News Kannada and all  Latest Kannada News Today.


Quick Links : Film News | Politics News | Crime News | Health Tips | India News | World News
ನಮ್ಮ ಕನ್ನಡ ಸುದ್ದಿ ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು Video News ಸಮೇತ Twitter, Google+ ಮತ್ತು Facebook ನಲ್ಲಿ ಕಾಣಬಹುದು.

Read More From Online Content